Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಹಕರಿಗೆ ಬಿಗ್ ಶಾಕ್; ಅಕ್ಕಿ ಬೆಲೆಯಲ್ಲಿ ಮತ್ತೆ 13 ರೂ.ವರೆಗೆ ಹೆಚ್ಚಳ!

---Advertisement---

ಬೆಂಗಳೂರು.ಜೂನ್.30: ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನಸಾಮಾನ್ಯರ ಜೇಬಿಗೆ ಈಗ ಮತ್ತೊಂದು ಭಾರಿ ಪೆಟ್ಟು ಬಿದ್ದಿದೆ. ಅಡುಗೆ ಮನೆಯ ಅತ್ಯಗತ್ಯ ವಸ್ತುವಾದ ಅಕ್ಕಿ ದರವು ಕೇವಲ ಒಂದೇ ತಿಂಗಳ ಅಂತರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕಳೆದ ಕೇವಲ 15 ದಿನಗಳ ಹಿಂದಷ್ಟೇ ಅಕ್ಕಿ ದರದಲ್ಲಿ ಪ್ರತಿ ಕೆಜಿಗೆ 6 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಆ ಬಿಸಿಯಿಂದ ಜನ ಚೇತರಿಸಿಕೊಳ್ಳುವ ಮುನ್ನವೇ, ಈಗ ಮತ್ತೆ ವಿವಿಧ ತಳಿಯ ಅಕ್ಕಿ ಬೆಲೆಯಲ್ಲಿ ಕೆಜಿಗೆ 5 ರೂಪಾಯಿ ಏರಿಕೆ ಮಾಡಲಾಗಿದೆ. ಇದರೊಂದಿಗೆ ಒಟ್ಟಾರೆಯಾಗಿ ಒಂದೇ ತಿಂಗಳ ಅವಧಿಯಲ್ಲಿ ಕೆಜಿ ಅಕ್ಕಿಗೆ ಬರೋಬ್ಬರಿ 11 ರಿಂದ 13 ರೂಪಾಯಿಯಷ್ಟು ಹೊರೆ ಹೆಚ್ಚಾದಂತಾಗಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ 26 ಕೆಜಿಯ ಅಕ್ಕಿ ಮೂಟೆಯ ದರದಲ್ಲಿ ಬರೋಬ್ಬರಿ 160 ರೂಪಾಯಿವರೆಗೆ ಹೆಚ್ಚಳ ಕಂಡುಬಂದಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಹಿನ್ನೆಲೆಯಲ್ಲಿ ಇಂಧನ ಹಾಗೂ ತೈಲ ದರಗಳು ನಿರಂತರವಾಗಿ ಏರುತ್ತಲೇ ಇವೆ. ಇದರಿಂದಾಗಿ ಸರಕು ಸಾಗಾಣಿಕೆ ವೆಚ್ಚ (ರಫ್ತು-ಆಮದು ಹಾಗೂ ಸಾಗಣೆ ಖರ್ಚು) ದುಬಾರಿಯಾಗಿದ್ದು, ವ್ಯಾಪಾರಿಗಳು ಆ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ಹಾಕುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನ ಹೆಚ್ಚಾಗಿ ಬಳಸುವ ಸೋನಾಮಸೂರಿ, ರಾ ರೈಸ್ (ಕಚ್ಚಾ ಅಕ್ಕಿ) ಹಾಗೂ ಸ್ಟೀಮ್ ರೈಸ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ತಳಿಯ ಅಕ್ಕಿ ದರಗಳೂ ಗಗನಕ್ಕೇರಿವೆ.

Join WhatsApp

Join Now

Join Telegram

Join Now