ಇಷ್ಟು ದಿನ ತೋತಾಪುರಿ ಅಂದ್ರೆ ಒಂದೊಳ್ಳೆ ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ ಅನ್ನೋದಷ್ಟೆ ತಲೆಯಲ್ಲಿತ್ತು. ಆದ್ರೆ ಇವತ್ತಿನ ವಿಶೇಷ ಕೇಳುತ್ತಿದ್ದರೆ ಹೆಮ್ಮೆ ಎನಿಸದೆ ಇರದು. ಯಾಕಂದ್ರೆ ತೋತಾಪುರಿ ಸಿನಿಮಾ ಹಲವು ದೇಶಗಳ ಕನ್ನಡ ಮನಸ್ಸುಗಳನ್ನ ಒಗ್ಗೂಡಿಸುವ ಕೆಲಸ ಮಾಡಿದೆ. ಇದಕ್ಕಿಂತ ಬೇರೆ ಖುಷಿ ಪಡೋ ವಿಚಾರ ಬೇಕೇ..?.
ಇತ್ತೀಚೆಗಷ್ಟೇ ತೋತಾಪುರಿ ಸಿನಿಮಾದ ಬಾಗ್ಲು ತೆಗಿ ಮೆರಿ ಜಾನ್ ಅನ್ನೋ ಹಾಡು ರಿಲೀಸ್ ಆಗಿತ್ತು. ಆ ಹಾಡು ನೋಡು ನೋಡುತ್ತಿದ್ದಂತೆ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿತ್ತು. ಆ ಖುಷಿಯನ್ನ ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಕನ್ನಡಿಗರು ಸೆಲೆಬ್ರೇಟ್ ಮಾಡಲು, ಕಾರ್ಯಕ್ರಮವೊಂದನ್ನ ಏರ್ಪಡಿಸಿದ್ದರು. ತೋತಾಪುರಿ ವರ್ಚುವಲ್ ಗ್ಲೋಬಲ್ ಮೀಟ್ ಕಾರ್ಯಕ್ರಮದಲ್ಲಿ ಸುಂದರ ಎನಿಸುವ ಅದೆಷ್ಟೋ ವಿಚಾರಗಳು ನಡೆದಿವೆ.
ಬೃಹತ್ ಸೆಟ್ ನಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ತೋತಾಪುರಿ ಹೀರೋ ಜಗ್ಗೇಶ್ ಭಾಗವಹಿಸಿದ್ದರು. ಸುಮಾರು 3 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ವಾಸಿಸುವ ಅನಿವಾಸಿ ಕನ್ನಡಿಗರ ಮುಂದೆ ಜಗ್ಗೇಶ್ ಸಿನಿಯಾನ, ಅವರ ಕುಟುಂಬ, ಕನ್ನಡ ಭಾಷೆ, ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಜೊತೆಗಿನ ಒಡನಾಟವನ್ನೆಲ್ಲ ನಟ ಜಗ್ಗೇಶ್ ಆ ಕ್ಷಣ ನೆನೆದಿದ್ದಾರೆ.
ಕೆನಡಾದ `ಡ್ರೀಮ್ ಮೀಡಿಯಾ’ ಆಯೋಜಿಸದ್ದಿ ಈ ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಷನ್, ಹ್ಯಾರಿಸ್ಬರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಹಲವಾರು ಕನ್ನಡಿಗರು ಜಗ್ಗೇಶ್ ಅವರೊಟ್ಟಿಗೆ ಮಾತುಕತೆ ನಡೆಸಿದರು. ಒಂದಷ್ಟು ಕಾಮಿಡಿ ಝಲಕ್ ನೊಂದಿಗೆ ಎಲ್ಲರೊಟ್ಟಿಗೆ ಸಂತಸದ ಸಮಯ ಕಳೆದಿದ್ದಾರೆ. ಬಹುಶಃ ಕನ್ನಡದಲ್ಲೇ ಈ ರೀತಿಯ ಕಾರ್ಯಕ್ರಮ ಏರ್ಪಟ್ಟಿರೋದು ಇದೇ ಮೊದಲ ಸಲ. ವಿದೇಶಿ ಕನ್ನಡಿಗರು ತೋತಾಪುರಿ ಸವಿಯನ್ನ ಜಗ್ಗೇಶ್ ಅವರ ಮಾತಲ್ಲೇ ಸವಿದು, ಆಲ್ ದಿ ಬೆಸ್ಟ್ ಹೇಳಿದ್ದಾರೆ.
ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಮೋನಿಫ್ಲಿಕ್ಸ್ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ `ತೋತಾಪುರಿ’ಗೆ ಬಂಡವಾಳ ಹೂಡಿದ್ದಾರೆ. ಅದಿತಿ ಪ್ರಭುದೇವ, `ಡಾಲಿ’ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಮೊದಲಾದವರು ತಾರಾಬಳಗದಲ್ಲಿದ್ದಾರೆ.