Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಾಣಕ್ಯ ನೀತಿ: ಈ ವಿಷಯಗಳಲ್ಲಿ ಅಹಂಕಾರವಿದ್ದರೆ ನಿಮ್ಮ ಜೀವನವೇ ನಾಶವಾಗಬಹುದು!

---Advertisement---

ಆಚಾರ್ಯ ಚಾಣಕ್ಯರು ತಮ್ಮ ಕಾಲದ ಮಹಾನ್ ಜ್ಞಾನಿ ಮತ್ತು ರಾಜತಾಂತ್ರಿಕರಾಗಿ ಪ್ರಸಿದ್ಧಿ ಪಡೆದವರು. ಅವರು ಅಂದು ಹೇಳಿದ ಅನೇಕ ನೀತಿಗಳು ಮತ್ತು ವಿಚಾರಗಳು ಇಂದಿನ ಆಧುನಿಕ ಸಮಾಜಕ್ಕೂ ಅಷ್ಟೇ ಪ್ರಸ್ತುತವಾಗಿವೆ. ಮಾನವನ ಯಶಸ್ಸು ಮತ್ತು ಅವನತಿಯ ಬಗ್ಗೆ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ, ಮನುಷ್ಯನಿಗೆ ಕೆಲವು ವಿಷಯಗಳಲ್ಲಿ ಅಹಂಕಾರ ಅಥವಾ ಗರ್ವ ಬಂದರೆ, ಅದು ಅವನ ಸರ್ವನಾಶಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಚಾಣಕ್ಯರ ಪ್ರಕಾರ ಯಾವ ವಿಷಯಗಳಲ್ಲಿ ಎಂದಿಗೂ ಗರ್ವಪಡಬಾರದು ಎಂಬ ಮಾಹಿತಿ ಇಲ್ಲಿದೆ.

ಸಂಪತ್ತು ಮತ್ತು ಐಶ್ವರ್ಯದ ಅಹಂಕಾರ

ಕೆಲವರಿಗೆ ಅತಿಯಾದ ಹಣ ಅಥವಾ ಸಂಪತ್ತು ಬಂದ ತಕ್ಷಣ ಅಹಂಕಾರ ತಲೆಗೇರುತ್ತದೆ. ಆದರೆ ಚಾಣಕ್ಯರ ಪ್ರಕಾರ, ಶ್ರೀಮಂತಿಕೆಯ ಗರ್ವ ಇರುವವರ ಬಳಿ ಲಕ್ಷ್ಮಿ ದೇವಿ ಜಾಸ್ತಿ ದಿನ ನಿಲ್ಲುವುದಿಲ್ಲ. ದಿನಗಳು ಕಳೆದಂತೆ ಅವರ ಸಂಪತ್ತು ಕರಗುತ್ತಾ ಹೋಗುತ್ತದೆ ಮತ್ತು ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.

ಸೌಂದರ್ಯದ ಗರ್ವ

ನೈಸರ್ಗಿಕವಾಗಿ ಸಿಗುವ ರೂಪ ಮತ್ತು ಸೌಂದರ್ಯದ ಬಗ್ಗೆ ಎಂದಿಗೂ ಅತಿಯಾದ ಹೆಮ್ಮೆ ಇರಬಾರದು. ಸೌಂದರ್ಯ ಎನ್ನುವುದು ಶಾಶ್ವತವಲ್ಲ, ವಯಸ್ಸಾದಂತೆ ಅದು ಮಾಸಿಹೋಗುತ್ತದೆ. ಬಾಹ್ಯ ಸೌಂದರ್ಯವನ್ನು ನೋಡಿ ಗರ್ವಪಡುವವರು ಸಮಾಜದಲ್ಲಿ ಗೌರವ ಕಳೆದುಕೊಳ್ಳುತ್ತಾರೆ.

ಜ್ಞಾನದ ಅಹಂಕಾರ

ತಾವು ಬುದ್ಧಿವಂತರು, ತಮಗೇ ಎಲ್ಲವೂ ಗೊತ್ತು ಎಂಬ ಅಹಂಕಾರ ಜ್ಞಾನಿಗಳಿಗೆ ಇರಬಾರದು. ಜ್ಞಾನದ ಗರ್ವ ಇರುವವರು ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯುತ್ತಾರೆ ಮತ್ತು ಇದು ಅವರ ಮಾನಸಿಕ ನೆಮ್ಮದಿಯನ್ನು ಕೆಡಿಸಿ, ಅನೇಕ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಉನ್ನತ ಹುದ್ದೆ ಮತ್ತು ಅಧಿಕಾರ

ಸಮಾಜದಲ್ಲಿ ಅಥವಾ ಉದ್ಯೋಗದಲ್ಲಿ ದೊಡ್ಡ ಸ್ಥಾನಮಾನ, ಉನ್ನತ ಹೋದಾ ಸಿಕ್ಕಾಗ ವಿನಮ್ರತೆ ಇರಬೇಕು. ಅಧಿಕಾರದ ಮದದಿಂದ ಇತರರನ್ನು ಕೀಳಾಗಿ ಕಾಣುವವರ ಜೀವನ ಶೀಘ್ರದಲ್ಲೇ ವಿನಾಶದತ್ತ ಸಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ದೈಹಿಕ ಬಲ ಮತ್ತು ಶಕ್ತಿ

ತಮ್ಮ ದೈಹಿಕ ಶಕ್ತಿಯ ಬಗ್ಗೆ ಅತಿಯಾದ ಹೆಮ್ಮೆ ಇರುವವರು ಇತರರ ಮೇಲೆ ದೌರ್ಜನ್ಯ ಎಸಗಲು ಮುಂದಾಗುತ್ತಾರೆ. ಈ ಅಹಂಕಾರವು ಅವರನ್ನು ಕಠಿಣ ಪರಿಸ್ಥಿತಿಗಳಿಗೆ ದೂಡುತ್ತದೆ ಮತ್ತು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆದ್ದರಿಂದ, ಜೀವನದಲ್ಲಿ ಯಶಸ್ಸು ಸಿಕ್ಕಾಗ ಅಹಂಕಾರವನ್ನು ಬಿಟ್ಟು ವಿನಮ್ರತೆಯಿಂದ ನಡೆದುಕೊಂಡರೆ ಮಾತ್ರ ಸಮಾಜದಲ್ಲಿ ನಿಜವಾದ ಗೌರವ ಮತ್ತು ನೆಮ್ಮದಿ ಸಿಗುತ್ತದೆ ಎನ್ನುವುದು ಆಚಾರ್ಯ ಚಾಣಕ್ಯರ ಕಿವಿಮಾತಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now