Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇಕ್, ಸ್ವೀಟ್ಸ್ ಪ್ಯಾಕಿಂಗ್ ನಲ್ಲಿ ಮೆಟಾಲಿಕ್ ಪಿನ್ ಬಳಕೆ ಬ್ಯಾನ್ : FSSAI ಕಠಿಣ ಆದೇಶ

---Advertisement---

ದೆಹಲಿ: ಆಹಾರದ ಪ್ಯಾಕಿಂಗ್ ಮತ್ತು ಪಾರ್ಸೆಲ್ಗಳನ್ನು ಸೀಲ್ ಮಾಡಲು ಮೆಟಾಲಿಕ್ ಪಿನ್ಗಳು (ಸ್ಟೇಪ್ಲರ್ ಪಿನ್), ವೈರ್ಗಳು ಮತ್ತು ಅಂತಹ ಇತರ ವಸ್ತುಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ಆಹಾರ ಉದ್ಯಮಿಗಳಿಗೆ (FBOs) ಕಡಾಖಂಡಿತವಾಗಿ ಸೂಚಿಸಿದೆ.

ಗ್ರಾಹಕರು ಇಂತಹ ಅಪಾಯಕಾರಿ ವಸ್ತುಗಳನ್ನು ಆಕಸ್ಮಿಕವಾಗಿ ನುಂಗುವುದರಿಂದ ಆಗುವ ಗಾಯಗಳು ಮತ್ತು ಆರೋಗ್ಯದ ಭೀತಿಯನ್ನು ತಡೆಗಟ್ಟಲು ಈ ಕ್ರಮ ಅಗತ್ಯ ಎಂದು ನಿಯಂತ್ರಕ ಸಂಸ್ಥೆ ಹೇಳಿದೆ.

ಎಫ್ಎಸ್ಎಸ್ಎಐ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಒಳಗೆ ಅಥವಾ ಆಹಾರದ ಪ್ಯಾಕೆಟ್ಗಳ ಮೇಲೆ ಮೆಟಾಲಿಕ್ ಅಥವಾ ಸ್ಟೇಪ್ಲರ್ ಪಿನ್ಗಳು ಪತ್ತೆಯಾಗಿರುವ ಹಲವು ಘಟನೆಗಳು ವರದಿಯಾಗಿವೆ.ಸಾಮಾನ್ಯವಾಗಿ ಕೇಕ್ ಬಾಕ್ಸ್ಗಳು, ಸಿಹಿ ತಿಂಡಿ (ಸ್ವೀಟ್ಸ್) ಬಾಕ್ಸ್ಗಳು, ಸ್ನ್ಯಾಕ್ಸ್ ಪ್ಯಾಕೆಟ್ಗಳು, ಟೇಕ್ಅವೇ ಆಹಾರದ ಪಾರ್ಸೆಲ್ಗಳನ್ನು ಪ್ಯಾಕ್ ಮಾಡಲು ಇಂತಹ ಪಿನ್ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ, ಅಲಂಕಾರಿಕ ಕೇಕ್ಗಳು ಮತ್ತು ಬೇಕರಿ ಉತ್ಪನ್ನಗಳ ಒಳಗೂ ಇಂತಹ ಮೆಟಾಲಿಕ್ ಪಿನ್ಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ.ಇವು ಗ್ರಾಹಕರ ಕಣ್ಣಿಗೆ ಸುಲಭವಾಗಿ ಕಾಣಿಸದೆ ಹೋಗುವುದರಿಂದ, ಇದು ಗಂಭೀರ ಆಹಾರ ಸುರಕ್ಷತೆಯ ಅಪಾಯವನ್ನು ಉಂಟುಮಾಡುತ್ತದೆ ಎಂದು FSSAI ಎಚ್ಚರಿಸಿದೆ.

ಆಹಾರ ಉತ್ಪನ್ನಗಳು ಅಥವಾ ಪ್ಯಾಕೇಜಿಂಗ್ಗೆ ಬಳಸಲಾದ ಮೆಟಾಲಿಕ್ ಪಿನ್ ಅಥವಾ ವೈರ್ಗಳನ್ನು ಗ್ರಾಹಕರು ಆಕಸ್ಮಿಕವಾಗಿ ನುಂಗುವ ಸಾಧ್ಯತೆ ಹೆಚ್ಚಿರುತ್ತದೆ.ಇಂತಹ ಘಟನೆಗಳಿಂದ ಬಾಯಿ, ಗಂಟಲು ಅಥವಾ ಜೀರ್ಣಾಂಗ ವ್ಯವಸ್ಥೆಗೆ ತೀವ್ರ ಗಾಯಗಳಾಗಬಹುದು ಮತ್ತು ಇದು ಪ್ರಾಣಾಪಾಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಇದನ್ನು ‘ಗಂಭೀರ ಆಹಾರ ಸುರಕ್ಷತೆಯ ಅಪಾಯ’ ಎಂದು ಪರಿಗಣಿಸಿ, ತಕ್ಷಣದ ಸುಧಾರಣಾ ಕ್ರಮ ಕೈಗೊಳ್ಳಬೇಕು ಎಫ್ಎಸ್ಎಸ್ಎಐ ತಿಳಿಸಿದೆ.

ಈ ಹೊಸ ಮಾರ್ಗಸೂಚಿಯ ಅನ್ವಯ, ಬೇಕರಿ ಉತ್ಪನ್ನಗಳು, ಕೇಕ್, ಸ್ವೀಟ್ಸ್, ಸ್ನ್ಯಾಕ್ಸ್ ಪ್ಯಾಕೆಟ್ಗಳು, ಪಾರ್ಸೆಲ್ ಆಹಾರಗಳು ಸೇರಿದಂತೆ ಯಾವುದೇ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಅಥವಾ ಸೀಲ್ ಮಾಡಲು ಮೆಟಾಲಿಕ್ ಪಿನ್ ಅಥವಾ ವೈರ್ಗಳನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಗ್ರಾಹಕರಿಗೆ ಸುರಕ್ಷಿತವಾಗಿರುವ ಪ್ಯಾಕೇಜಿಂಗ್ ವಿಧಾನಗಳನ್ನು ಬಳಸಲು ಉದ್ಯಮಿಗಳಿಗೆ ತಿಳಿಸಲಾಗಿದೆ.

ಈ ಆದೇಶವನ್ನು ಪಾಲಿಸದ ಆಹಾರ ಉದ್ಯಮಿಗಳ ವಿರುದ್ಧ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006’ ರ ಅಡಿಯಲ್ಲಿ ಕಠಿಣ ಕಾನೂನು ಮತ್ತು ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು FSSAI ಸ್ಪಷ್ಟಪಡಿಸಿದೆ.

ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ದೇಶದಾದ್ಯಂತ ಸುರಕ್ಷಿತ ಆಹಾರ ಲಭ್ಯವಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಆಹಾರ ಉದ್ಯಮಿಗಳು ತಕ್ಷಣವೇ ತಮ್ಮ ಪ್ಯಾಕೇಜಿಂಗ್ ವಿಧಾನವನ್ನು ಬದಲಾಯಿಸಿಕೊಂಡು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಹಕರಿಸಬೇಕೆಂದು ಕೋರಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now