ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್
ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಹೊಯ್ಸಳರ ಕಾಲದ ದೇವಾಲಯಗಳ ಒಂದು ಪ್ರಮುಖ ನೆಲೆಬೀಡಾಗಿದೆ. ಇಲ್ಲಿರುವ ದೇವಾಲಯ ಸಂಕೀರ್ಣಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದು, ಹಳೇಬೀಡು, ಬೇಲೂರು ಮಾದರಿಯಲ್ಲಿ ಇಡೀ ತಾಲೂಕಿನಲ್ಲಿ ಹತ್ತಕ್ಕೂ ಅಧಿಕ ಊರುಗಳಲ್ಲಿ ಹೊಯ್ಸಳರ ವಾಸ್ತುಶಿಲ್ಪದ ದೇವಾಲಯಗಳು ಕಂಡುಬರುತ್ತವೆ. ವಾಸ್ತುಶಿಲ್ಪ ಕಲೆಯಲ್ಲಿ ಆಸಕ್ತಿಯುಳ್ಳವರು ಇಂತಹ ದೇವಾಲಯಗಳನ್ನು ಇಲ್ಲಿ ಗಮನಿಸಬಹುದಾಗಿದೆ.
ತಿಪಟೂರು ತಾಲ್ಲೂಕಿನ ನೊಣವಿನಕೆರೆ ಗ್ರಾಮ ತಿಪಟೂರಿನಿಂದ ಸುಮಾರು 13 ಕಿ.ಮೀ ದೂರದಲ್ಲಿದ್ದು ಇಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಹೊಯ್ತಾಳರ ಶಿಲ್ಪಕಲೆಯ ಅತ್ಯದ್ಭುತ ಕಲಾಕೃತಿಯಾಗಿದೆ.
ಈ ದೇವಾಲಯವು ಹೊಯ್ಸಳರ ಕಾಲದ ಅತ್ಯಂತ ಸುಂದರ ದೇವಾಲಯವಾಗಿದ್ದು ನೊಳಂಬರ ಕಾಲದ ಪಂಚ ಶಿವಾಲಯಗಳು ಮತ್ತು ಪ್ರಸಿದ್ಧ ಬೇಟೆರಾಯಸ್ವಾಮಿ ದೇವಾಲಯವೂ ನೊಣವಿನಕೆರೆಯಲ್ಲಿದೆ.
ವೇಣುಗೋಪಾಲ ಸ್ವಾಮಿ ದೇವಾಲಯವು ತ್ರಿಕೂಟಾಚಲ ದೇವಾಲಯವಾಗಿದ್ದು ಇದರಲ್ಲಿ ಮೂರು ಗರ್ಭಗುಡಿಗಳಿವೆ.
ಪ್ರಧಾನ ಗರ್ಭಗೃಹದಲ್ಲಿ ಜನಾರ್ದನಸ್ವಾಮಿ ಇದ್ದರೆ
,ದಕ್ಷಿಣ ಗರ್ಭಗೃಹದಲ್ಲಿ ವೇಣುಗೋಪಾಲ ಸ್ವಾಮಿಯ ಮನಮೋಹಕ ಶಿಲ್ಪವಿದೆ. ಕೈಯಲ್ಲಿ ಕೊಳಲನ್ನು ಊದುತ್ತಿರವ ಗೋಪಾಲ ಸ್ವಾಮಿಯನ್ನು ಮಂದಸ್ಮಿತ ರೂಪದಲ್ಲಿ ಕಾಣಬಹುದು.
ಉತ್ತರದ ದಿಕ್ಕಿನ ಕಡೆಗೆ ಇರುವ ಗರ್ಭಗೃಹದಲ್ಲಿ ಯೋಗಾ ನರಸಿಂಹಸ್ವಾಮಿ ದೇವರುಗಳಿದ್ದು ಪೂಜಿಸಲಾಗುತ್ತದೆ.
ಹೊಯ್ಸಳರ ವಿಶಿಷ್ಟ ಕೆತ್ತನೆ, ಸುಂದರ ಸ್ತಂಭಗಳು ಮತ್ತು ಅಲಂಕಾರಿಕ ಪ್ರಭಾವಳಿಗಳು ಪ್ರಮುಖವಾಗಿ ಇಲ್ಲಿ ಗಮನಿಸಬಹುದಾಗಿದೆ. ತಿಪಟೂರಿನಿಂದ ತುರುವೇಕೆರೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಇರುವ ನೊಣವಿನಕೆರೆ ಗ್ರಾಮಕ್ಕೆ ಎಲ್ಲಾ ಪ್ರಮುಖ ಊರುಗಳಿಂದ ಸಾರಿಗೆ ಸಂಪರ್ಕವಿದೆ. ನೊಣವಿನಕೆರೆಯು ಹೊಯ್ಸಳ ಮತ್ತು ನೊಳಂಬ ಕಾಲದ ದೇವಾಲಯಗಳಿಗೆ ಹೆಸರುವಾಸಿಯಾಗಿದ್ದು ಶಿಲ್ಪಕಲೆ ಆಸಕ್ತರಿಗೆ ನೋಡಲೇಬೇಕಾದ ಸ್ಥಳ ಇದಾಗಿದೆ.
ವಾರ್ಷಿಕ ರಥೋತ್ಸವ ವಿಶೇಷವಾಗಿ ಏಪ್ರಲ್/ಮೇ ತಿಂಗಳಿನಲ್ಲಿ ಜರುಗುತ್ತದೆ.
ದರ್ಶನ ಸಮಯ & ಪೂಜೆ.
ಬೆಳಗ್ಗೆ 7:30 AM ರಿಂದ 12:30 ಮತ್ತು ಸಂಜೆ 5:30 PM ರಿಂದ 8:00 ವರೆಗೆ.
ನಿತ್ಯ ಪೂಜೆಗಳು:
1. ಸುಪ್ರಭಾತ ಸೇವೆ*: ಬೆಳಗ್ಗೆ 7:30
2. ಮಧ್ಯಾಹ್ನ ಮಹಾಮಂಗಳಾರತಿ: 12:00 PM ಸುಮಾರಿಗೆ
3. ಪ್ರದೋಷ ಪೂಜೆ : ಸಂಜೆ 6:30 PM
4. ಏಕಾಂತ ಸೇವೆ: ರಾತ್ರಿ 8:00 PM ದೇಗುಲ ಮುಚ್ಚುವ ಮುನ್ನ.
ವಿಶೇಷ ಪೂಜೆ.
1. ವೈಕುಂಠ ಏಕಾದಶಿ
ಡಿಸೆಂಬರ್/ಜನವರಿ ತಿಂಗಳಲ್ಲಿ.
2. ಶ್ರೀಕೃಷ್ಣ ಜನ್ಮಾಷ್ಟಮಿ
3. ನರಸಿಂಹ ಜಯಂತಿ
ಯೋಗನರಸಿಂಹ ಗುಡಿಯಲ್ಲಿ ವಿಶೇಷ ಪೂಜೆ
4. ಪ್ರತಿ ಶನಿವಾರ
ವೇಣುಗೋಪಾಲ ಸ್ವಾಮಿಗೆ ವಿಶೇಷ ಅಲಂಕಾರ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















