Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿಕ್ಷಕರಿಗೆ ಮುಖ್ಯ ಮಾಹಿತಿ: SATS ತಂತ್ರಾಂಶದಲ್ಲಿ ‘ಸೇತುಬಂಧ’ ಮಾಹಿತಿ ದಾಖಲಿಸಲು ಸೂಚನೆ

---Advertisement---

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ‘ಸೇತುಬಂಧ’ ಉಪಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ದೇಶನವೊಂದನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ನೀಡಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪೂರ್ವಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳ ಶ್ರೇಣಿಗಳನ್ನು ಕಡ್ಡಾಯವಾಗಿ SATS (ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್) ತಂತ್ರಾಂಶದಲ್ಲಿ ದಾಖಲಿಸುವಂತೆ ಆದೇಶಿಸಲಾಗಿದೆ.

ಈ ಕುರಿತು ಡಿಎಸ್‌ಇಆರ್‌ಟಿ ನಿರ್ದೇಶಕರು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದು, ಈ ಹಿಂದೆ ಸೇತುಬಂಧ ಕಾರ್ಯಕ್ರಮದ ಪೂರ್ವಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳ ಶ್ರೇಣಿಗಳನ್ನು ಎಸ್‌ಎಪಿ (SAP) ನಮೂನೆಗಳಾದ 4ಎ, 4ಬಿ ಮತ್ತು 5ಎ, 5ಬಿ ಗಳಲ್ಲಿ ಹಸ್ತಚಾಲಿತವಾಗಿ (ಭೌತಿಕವಾಗಿ) ದಾಖಲಿಸಲು ತಿಳಿಸಲಾಗಿತ್ತು. ಆದರೆ ಈಗ SATS ತಂತ್ರಾಂಶದಲ್ಲಿಯೇ ‘ಸೇತುಬಂಧ ಮಾಡ್ಯೂಲ್’ (Bridge Course Module) ಅನ್ನು ಸೃಜಿಸಲಾಗಿದ್ದು, ಶಿಕ್ಷಕರು ಆನ್‌ಲೈನ್ ಮೂಲಕವೇ ಮಾಹಿತಿ ದಾಖಲಿಸಬೇಕಿದೆ.

ಎಲ್ಲಾ ಶಿಕ್ಷಕರು ತಮಗೆ ನೀಡಿರುವ LBA ಲಾಗಿನ್ ಕ್ರೆಡೆನ್ಶಿಯಲ್ಸ್ ಬಳಸಿ, ತರಗತಿ ಹಾಗೂ ವಿಷಯವಾರು ಪೂರ್ವಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳ ಮಾಹಿತಿಯನ್ನು 25-06-2026ರ ಒಳಗೆ ಕಡ್ಡಾಯವಾಗಿ SATS ತಂತ್ರಾಂಶದಲ್ಲಿ ದಾಖಲಿಸಬೇಕು. SATS ನಲ್ಲಿ ಮಾಹಿತಿ ದಾಖಲಿಸಿದ ನಂತರ ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರ ಲಾಗಿನ್‌ನಲ್ಲಿ ರಿಪೋರ್ಟ್ ಜನರೇಟ್ ಮಾಡಲು ಅವಕಾಶ ನೀಡಲಾಗಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು SAP ಗೆ ಅಳವಡಿಸಿಕೊಳ್ಳಬಹುದು. ಇದರಿಂದಾಗಿ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಭೌತಿಕವಾಗಿ (Manually) ನಮೂನೆಗಳನ್ನು ಭರ್ತಿ ಮಾಡುವ ಅಥವಾ ಮಾಹಿತಿ ಕ್ರೋಢೀಕರಿಸುವ ಅಗತ್ಯವಿರುವುದಿಲ್ಲ.

ವಿಶೇಷ ಕಾಳಜಿ ಮತ್ತು ಮೌಲ್ಯಮಾಪನ: ಸಾಫಲ್ಯ ಪರೀಕ್ಷೆಯ ನಂತರ ‘ಬಿ’ ಶ್ರೇಣಿ ಪಡೆದ ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ಕಲಿಕೆಯನ್ನು ಉಂಟುಮಾಡಲು ನಿರಂತರ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಈ ವಿದ್ಯಾರ್ಥಿಗಳ ಕಲಿಕಾ ಫಲಗಳ ಪ್ರಗತಿಯನ್ನು ಪರಿಶೀಲಿಸಲು ಸೆಪ್ಟೆಂಬರ್ ಹಾಗೂ ಡಿಸೆಂಬರ್ ಅಂತ್ಯದಲ್ಲಿ ಎರಡು ಹಂತಗಳಲ್ಲಿ ಮೌಲ್ಯಂಕನ ಮಾಡಿ, ಆ ಮಾಹಿತಿಯನ್ನೂ SATS ನಲ್ಲಿ ದಾಖಲಿಸಬೇಕು.

ಅಧಿಕಾರಿಗಳಿಗೆ ಸೂಚನೆ: ಡಯಟ್ (DIET) ಹಂತದ ಪ್ರಾಂಶುಪಾಲರು ಹಾಗೂ ಸೇತುಬಂಧ ನೋಡಲ್ ಅಧಿಕಾರಿಗಳು ತಕ್ಷಣವೇ ತಾಲೂಕು ಹಂತದ ಅಧಿಕಾರಿಗಳು, ಬಿಆರ್‌ಪಿ (BRP) ಮತ್ತು ಸಿಆರ್‌ಪಿ (CRP) ಗಳೊಂದಿಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಸಭೆ ನಡೆಸಿ, ಈ ಮಾಹಿತಿಯನ್ನು ತಲುಪಿಸಿ ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ಕ್ರಮವಹಿಸಲು ಸೂಚಿಸಲಾಗಿದೆ.

ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO), ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now