ಸುದ್ದಿಒನ್,ಬೆಂಗಳುರ,ಜೂ.1: ದೇಶದ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿಗಳ (IIT) ಪ್ರವೇಶಕ್ಕಾಗಿ ನಡೆದಿದ್ದ ‘ಜೆಇಇ ಅಡ್ವಾನ್ಸ್ಡ್ 2026’ ಪರೀಕ್ಷೆಯ ಫಲಿತಾಂಶ ಅಂತಿಮವಾಗಿ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ನಡೆಸಿದ್ದ ಐಐಟಿ ರೂರ್ಕಿ (IIT Roorkee) ಸಂಸ್ಥೆಯು ಅಧಿಕೃತವಾಗಿ ರಿಸಲ್ಟ್ ಘೋಷಣೆ ಮಾಡಿದೆ. ಇದರೊಂದಿಗೆ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಪೇಪರ್-1 ಮತ್ತು ಪೇಪರ್-2ರ ಅಂತಿಮ ಕೀಲಿ ಉತ್ತರಗಳನ್ನು (Final Answer Key) ಸಹ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಪರೀಕ್ಷೆ ಬರೆದ ಲಕ್ಷಾಂತರ ಅಭ್ಯರ್ಥಿಗಳು ಇಂದಿನಿಂದಲೇ ಜೆಇಇ ಅಡ್ವಾನ್ಸ್ಡ್ನ ಅಧಿಕೃತ ಪೋರ್ಟಲ್ jeeadv.ac.in ಮೂಲಕ ತಮ್ಮ ಅಂಕಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದು. ಲಾಗಿನ್ ಆಗಲು ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್, ಹುಟ್ಟಿದ ದಿನಾಂಕ ಹಾಗೂ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯನ್ನು ಬಳಸಬೇಕಾಗುತ್ತದೆ.
ನಿಮ್ಮ ಮೊಬೈಲ್ನಲ್ಲೇ ರಿಸಲ್ಟ್ ನೋಡುವುದು ಹೇಗೆ? (Step-by-Step Guide)
ಹಂತ 1: ಮೊದಲಿಗೆ ಜೆಇಇ ಅಧಿಕೃತ ವೆಬ್ಸೈಟ್ jeeadv.ac.in ಗೆ ಭೇಟಿ ನೀಡಿ.
ಹಂತ 2: ಹೋಮ್ ಪೇಜ್ನಲ್ಲಿ ಕಾಣಿಸುವ ‘JEE Advanced 2026 Result’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಅಲ್ಲಿ ಕೇಳಲಾಗುವ ನಿಮ್ಮ ರಿಜಿಸ್ಟ್ರೇಷನ್ ನಂಬರ್, ಡೇಟ್ ಆಫ್ ಬರ್ತ್ ವಿವರಗಳನ್ನು ಎಂಟರ್ ಮಾಡಿ ಸಬ್ಮಿಟ್ ಕೊಡಿ.
ಹಂತ 4: ಈಗ ನಿಮ್ಮ ಸ್ಕೋರ್ಕಾರ್ಡ್ ಸ್ಕ್ರೀನ್ ಮೇಲೆ ಕಾಣಸಿಗುತ್ತದೆ.
ಹಂತ 5: ಮುಂದಿನ ಕೌನ್ಸಿಲಿಂಗ್ ಪ್ರಕ್ರಿಯೆಗಳ ಉಲ್ಲೇಖಕ್ಕಾಗಿ ಇದನ್ನು ಡೌನ್ಲೋಡ್ ಮಾಡಿಕೊಂಡು, ಒಂದು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.
ಟಾಪರ್ಗಳ ಪಟ್ಟಿ: ದೇಶಕ್ಕೆ ಮೊದಲ ರ್ಯಾಂಕ್ ಪಡೆದ ಶುಭಂ ಕುಮಾರ್!
ಈ ವರ್ಷದ ಕಠಿಣ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿರುವ ಶುಭಂ ಕುಮಾರ್ ಅವರು 360 ಅಂಕಗಳಿಗೆ ಭರ್ಜರಿ 330 ಅಂಕಗಳನ್ನು ಬಾಚಿಕೊಳ್ಳುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ್ಯಾಂಕ್ (AIR 1) ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇನ್ನುಳಿದಂತೆ ಐಐಟಿ ದೆಹಲಿ ವಲಯದ ಕಬೀರ್ ಛಿಲ್ಲರ್ (329 ಅಂಕ) ದ್ವಿತೀಯ ಸ್ಥಾನ ಹಾಗೂ ಜತಿನ್ ಚಾಹರ್ (319 ಅಂಕ) ತೃತೀಯ ರ್ಯಾಂ ಕ್ ಪಡೆದು ಬೀಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















