Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋರ್ಟ್ ಕೇಸ್ ಜಡ್ಜ್‌ ಮೆಂಟ್‌ ಗೆ ಇನ್ಮುಂದೆ 3 ತಿಂಗಳು ಮಾತ್ರ ಡೆಡ್‌ ಲೈನ್ : ಸುಪ್ರೀಂಕೋರ್ಟ್‌ನಿಂದ ಐತಿಹಾಸಿಕ ತೀರ್ಪು

---Advertisement---

ಸುದ್ದಿಒನ್,ನವದೆಹಲಿ,ಮೇ.30: ಭಾರತೀಯ ನ್ಯಾಯಾಂಗ ಇತಿಹಾಸದಲ್ಲೇ ಇನ್ಮುಂದೆ ಕ್ರಾಂತಿಕಾರಿ ಬದಲಾವಣೆಯೊಂದು ಗಾಳಿ ಬೀಸಲಿದೆ. ನ್ಯಾಯಾಲಯಗಳಲ್ಲಿ ವಿಚಾರಣೆ ಮುಗಿದರೂ ವರ್ಷಗಟ್ಟಲೆ ತೀರ್ಪಿಗಾಗಿ ಕಾಯುತ್ತಿದ್ದ ಜನಸಾಮಾನ್ಯರಿಗೆ ಸುಪ್ರೀಂಕೋರ್ಟ್ ಅತ್ಯಂತ ದೊಡ್ಡ ಸಿಹಿ ಸುದ್ದಿ ನೀಡಿದೆ. ಯಾವುದೇ ಪ್ರಕರಣದ ವಾದ-ಪ್ರತಿವಾದಗಳು ಮುಕ್ತಾಯಗೊಂಡು ಆದೇಶವನ್ನು ಕಾಯ್ದಿರಿಸಿದ ಕೇವಲ 3 ತಿಂಗಳ ಒಳಗಾಗಿ ಹೈಕೋರ್ಟ್‌ಗಳು ಅಂತಿಮ ತೀರ್ಪನ್ನು ಪ್ರಕಟಿಸುವುದನ್ನು ಈಗ ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿದೆ.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಜಸ್ಟಿಸ್ ಸೂರ್ಯಕಾಂತ್, ಜಸ್ಟಿಸ್ ದೀಪಂಕರ್ ದತ್ತಾ ಮತ್ತು ಜಸ್ಟಿಸ್ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. “ನ್ಯಾಯ ಪ್ರಕಟಿಸುವಲ್ಲಿ ವಿಳಂಬ ಮಾಡುವುದು ಕಕ್ಷಿದಾರರಿಗೆ ಮಾಡುವ ಅನ್ಯಾಯವಾಗಿದೆ. ಅದರಲ್ಲೂ ವಿಶೇಷವಾಗಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಕೇಸ್‌ಗಳಲ್ಲಿ ವಿಳಂಬ ಮಾಡದೆ ತಕ್ಷಣವೇ ಸೂಕ್ತ ನಿರ್ಧಾರ ಪ್ರಕಟಿಸುವುದು ಅತಿ ಮುಖ್ಯ” ಎಂದು ಸುಪ್ರೀಂಕೋರ್ಟ್ ಪೀಠವು ಗಂಭೀರವಾಗಿ ಅಭಿಪ್ರಾಯಪಟ್ಟಿದೆ.

ಒಂದು ವೇಳೆ ಯಾವುದೇ ಪ್ರಕರಣದ ವಿಚಾರಣೆ ಪೂರ್ಣಗೊಂಡು 3 ತಿಂಗಳು ಕಳೆದರೂ ತೀರ್ಪು ಬಾರದಿದ್ದರೆ, ಅದನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ (ಸಿಜೆ) ಗಮನಕ್ಕೆ ತರಬೇಕಾಗುತ್ತದೆ. ಇಷ್ಟಾದರೂ 4 ತಿಂಗಳವರೆಗೆ ಆರ್ಡರ್ ಹೊರಬೀಳದಿದ್ದರೆ, ಕಕ್ಷಿದಾರರು ನೇರವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ, ಆ ಪ್ರಕರಣವನ್ನು ಪ್ರಸ್ತುತ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಿಂದ ಹಿಂಪಡೆದು, ಮತ್ತೊಂದು ಹೊಸ ಪೀಠಕ್ಕೆ ವರ್ಗಾಯಿಸಲಾಗುತ್ತದೆ.

ಜಾಮಿನು (ಬೇಲ್) ಅರ್ಜಿಗೆ ಕೇವಲ 24 ಗಂಟೆಗಳ ಗಡುವು!

ಆರೋಪಿಗಳ ಬೇಲ್ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಅತ್ಯಂತ ಬಿಗಿಯಾದ ನಿಯಮಗಳನ್ನು ಜಾರಿಗೆ ತಂದಿದೆ. ಜಾಮಿನು ಅರ್ಜಿಗಳ ವಿಚಾರಣೆ ಮುಗಿದ ತಕ್ಷಣ, ಸಾಧ್ಯವಾದರೆ ಅದೇ ದಿನವೇ ನ್ಯಾಯಾಧೀಶರು ತೀರ್ಪನ್ನು ಘೋಷಿಸಬೇಕು. ಒಂದು ವೇಳೆ ಆದೇಶವನ್ನು ಕಾಯ್ದಿರಿಸಿದರೂ ಸಹ, ಮರುದಿನವೇ ಅದನ್ನು ಕಡ್ಡಾಯವಾಗಿ ಪ್ರಕಟಿಸಬೇಕಾಗುತ್ತದೆ.

ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ನೀಡಿರುವ ಹೊಸ ಗೈಡ್‌ಲೈನ್ಸ್ ಹೀಗಿದೆ:

3 ತಿಂಗಳ ಕಡ್ಡಾಯ ಗಡುವು: ವಾದ-ಪ್ರತಿವಾದ ಮುಗಿದ 3 ತಿಂಗಳ ಒಳಗಾಗಿ ಎಲ್ಲಾ ಹೈಕೋರ್ಟ್‌ಗಳು ತಮ್ಮ ಅಂತಿಮ ತೀರ್ಪನ್ನು ನೀಡಲೇಬೇಕು.

ಅದೇ ದಿನ ಬೇಲ್ ಆದೇಶ: ಜಾಮಿನು ಅರ್ಜಿಗಳ ವಿಚಾರಣೆ ಮುಗಿದ ತಕ್ಷಣವೇ ತೀರ್ಪು ನೀಡಲು ಮೊದಲ ಆದ್ಯತೆ ನೀಡಬೇಕು. ಅನಿವಾರ್ಯವಾದರೆ ಮರುದಿನವೇ ಆದೇಶ ಹೊರಡಿಸಬೇಕು.

ತಕ್ಷಣವೇ ಜೈಲಿನಿಂದ ಬಿಡುಗಡೆ: ಬೇಲ್ ಆರ್ಡರ್ ಪ್ರತಿ ಸಿಕ್ಕ ತಕ್ಷಣ ಅಥವಾ ಗರಿಷ್ಠ 24 ಗಂಟೆಗಳ ಒಳಗೆ ಕೈದಿಯನ್ನು ಬಂಧನದಿಂದ ಮುಕ್ತಗೊಳಿಸಬೇಕು.

ಆನ್‌ಲೈನ್‌ನಲ್ಲಿ ಲಭ್ಯ: ನ್ಯಾಯಾಲಯದ ಆದೇಶ ಹೊರಬಿದ್ದ 24 ಗಂಟೆಗಳ ಒಳಗಾಗಿ ಅದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ.

SMS ಮೂಲಕ ಮಾಹಿತಿ: ವೆಬ್‌ಸೈಟ್‌ಗೆ ತೀರ್ಪಿನ ಕಾಪಿ ಅಪ್‌ಲೋಡ್ ಆಗುತ್ತಿದ್ದಂತೆ ಸಂಬಂಧಪಟ್ಟ ಕಕ್ಷಿದಾರರಿಗೆ SMS ಅಲರ್ಟ್ ಲಭ್ಯವಾಗಲಿದೆ.

15 ದಿನಗಳಲ್ಲಿ ಪೂರ್ಣ ವಿವರ: ಕೋರ್ಟ್‌ನಲ್ಲಿ ಕೇವಲ ತೀರ್ಪಿನ ಮುಖ್ಯ ಭಾಗವನ್ನು (Operating Part) ಮಾತ್ರ ಓದಿದ್ದರೆ, ಮುಂದಿನ 15 ದಿನಗಳ ಒಳಗಾಗಿ ಅದರ ಸಂಪೂರ್ಣ ಸವಿಸ್ತಾರವಾದ ತೀರ್ಪಿನ ಪ್ರತಿಯನ್ನು ಒದಗಿಸಬೇಕು.ನ್ಯಾಯ ವಿಳಂಬವಾದರೆ ಅದು ನ್ಯಾಯವನ್ನು ನಿರಾಕರಿಸಿದಂತೆ” (Justice delayed is justice denied) ಎಂಬ ಜನಪ್ರಿಯ ನಾಣ್ಣುಡಿಗೆ ಜೀವ ತುಂಬುವಂತೆ ಸುಪ್ರೀಂಕೋರ್ಟ್ ಈ ಐತಿಹಾಸಿಕ ಮತ್ತು ಕ್ರಾಂತಿಕಾರಿ ಕ್ರಮವನ್ನು ಕೈಗೊಂಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now