Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಾ ಬಿ ಎಲ್ ವೇಣು ಅವರಿಗೆ ಸಿಗದ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ ಅಭಿಮಾನಿಗಳಿಗೆ ತ್ರೀವ ಬೇಸರ : ಮೇಘ ಗಂಗಾಧರ ನಾಯಕ್

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 27 : ನಾಡಿನ ಹೆಮ್ಮೆಯ ಸಾಹಿತಿ ಕಾದಂಬರಿಕಾರ ಡಾ. ಬಿ ಎಲ್. ವೇಣು ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹುದ್ದೆ ಸಿಗದಿರುವುದು ವೇಣು ಅವರ ಅಪಾರ ಅಭಿಮಾನಿ ವರ್ಗಕ್ಕೆ ಬೇಸರ ತರಿಸಿದೆ ಎಂದು ಲೇಖಕ ಹಾಗೂ ಸೃಷ್ಟಿ ಸಾಗರ ಪ್ರಕಾಶನ ಮುಖ್ಯಸ್ಥ ಮೇಘ ಗಂಗಾಧರ ನಾಯ್ಕ ಹೇಳಿದರು

ಮದಕರಿ ನಾಯಕ ಸಂಸ್ಕೃತಿಕ ವೇದಿಕೆ ಹಾಗೂ ಸೃಷ್ಟಿ ಸಾಗರ ಪ್ರಕಾಶನ ಸಹಯೋಗದಲ್ಲಿ ಬುಧವಾರ ವೇಣು ಅವರ ಮನೆಯಂಗಳದಲ್ಲಿ ನಡೆದ ಬಿ ಎಲ್ ವೇಣು ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ವೇಣು ಅವರ ಸಾಹಿತ್ಯ ಸೇವೆ, ನಾಡಿಗೆ ಸಲ್ಲಿಸಿರುವ ಕೊಡುಗೆಗೆ ಸರ್ಕಾರಗಳು ಸಹ ಗೌರವ ಸಲ್ಲಿಸಿವೆ. ಎಲ್ಲಾ ಪ್ರಶಸ್ತಿಗಳೂ ಸಹ ಲಭಿಸಿವೆ. ಆದರೆ ಕನ್ನಡ ಸಾಹಿತ್ಯ ಪರಿಷತ್ ಮಾತ್ರ ಪರಿಗಣಿಸುತ್ತಿಲ್ಲ. ಇದು ವೇಣು ಅವರ ಅಪಾರ ಅಭಿಮಾ
ನಿ ವರ್ಗಕ್ಕೆ ತುಂಬಾ ಬೇಸರ ತರಿಸುತ್ತಿದೆ ಎಂದು ನುಡಿದರು
ಮುಂದಿನ ಸಾಹಿತ್ಯ ಸಮ್ಮೇಳನಕ್ಕಾದರೂ ವೇಣು ಅವರಿಗೆ ಆ ಹುದ್ದೆಗೆ ಆಯ್ಕೆ ಮಾಡಿ ಸಾಹಿತ್ಯ ಪರಿಷತ್ತು ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮೇಘ ಗಂಗಾಧರ ನಾಯ್ಕ ಅಭಿಪ್ರಾಯ ಪಟ್ಟರು.

ನಗರ ಸಭೆ ಅಧ್ಯಕ್ಷ ಬಿ ಕಾಂತರಾಜ್ ಮಾತನಾಡಿ,
ಚಿತ್ರದುರ್ಗದ ಇತಿಹಾಸವನ್ನು ನಾಡಿನ ಉದ್ದಕ್ಕೂ ಪಸರಿಸಿದ ಕೀರ್ತಿ ವೇಣು ಅವರದ್ದು. ಮೂರು ತಲೆಮಾರಿನ ನಟರಿಗೆ ಸಂಭಾಷಣೆ ಬರೆದಿರುವುದು ಮತ್ತೊಂದು ವಿಶೇಷ. ವೇಣು ನಿಜಕ್ಕೂ ನಮ್ಮ ನೆಲದ ಆಸ್ತಿ. ಸ್ವಾಭಿಮಾನದ ಸಂಕೇತವೂ ಹೌದು ಎಂದು ನುಡಿದರು.

ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಡಿ. ಗೋಪಾಲಸ್ವಾಮಿ ನಾಯಕ್ ಅವರು ಮಾತನಾಡಿ, ವೇಣು ಅವರ ಹೆಸರು ಚಿತ್ರದುರ್ಗದಲ್ಲಿ ಶಾಶ್ವತವಾಗಿ ಉಳಿಯಬೇಕು. ಮುಂದಿನ ದಿನಗಲ್ಲಿ ವೇಣು ಅವರ ಅಭಿಮಾನಿಗಳು ಒಟ್ಟಿಗೆ ಸೇರಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ರೂಪಿಸಲು ಯೋಚಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಅಭಿಮಾನಿಗಳ ಗೌರವ ಸ್ವೀಕರಿಸಿ ಮಾತನಾಡಿದ ಡಾ. ಬಿ ಎಲ್ ವೇಣು ಅವರು, ನಾನು ಬರವಣಿಗೆ ನಿಲ್ಲಿಸುವುದಿಲ್ಲ. ಉಸಿರು ಇರುವ ತನಕ ಬರೆಯುತ್ತೇನೆ, ಬರವಣಿಗೆಯೇ ನನ್ನ ಬದುಕು. ನನ್ನ ಎಲ್ಲಾ ಶ್ರೇಯಸ್ಸಿನ ಹಿಂದೆ ತುಂಬಾ ಜನ ಇದ್ದಾರೆ. ಲಕ್ಷ್ಮಣ ತೆಲಗಾವಿ, ಬಿ. ಕಾಂತರಾಜ್ ಅವರಂತೆ ಅನೇಕ ಸಹೃದಯಿಗಳನ್ನು ಎಂದೂ ಮರೆಯಲಾರೆ ಎಂದರು.

ಇತಿಹಾಸ ಸಂಶೋಧಕ ಡಾ. ಎಸ್ ಎನ್ ಮಹಾಂತೇಶ್ ಅವರು ವೇಣು ಅವರ ಮಾರ್ಗದರ್ಶನ ಮುಂದಿನ ಪೀಳಿಗೆಯ ಬರಹಗಾರರಿಗೆ ಅವಶ್ಯಕತೆ ಇದೆ ಎಂದರು.
ಆಕಾಶವಾಣಿ ಕಾರ್ಯಕ್ರಮ ನಿರೂಪಕ ನವೀನ್ ಮಾಸ್ಕಲ್,ಪ್ರಜಾವಾಣಿ ಜಾಹಿರಾತು ವಿಭಾಗದ ಟಿ ಎನ್ ಪ್ರಹ್ಲಾದ್, ಸಾಮಾಜಿಕ ಕಾರ್ಯಕರ್ತ ಸೋಮು,ರಾಜ್ಯ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಪ್ರಹಲ್ಲಾದ್ ಇನ್ನಿತರರು ಇದ್ದರು

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now