ಬಳ್ಳಾರಿ, ಸಿರಗುಪ್ಪ, ಮೇ. 27 : ತಾಲೂಕಿನ ಭೈರಾಪುರ ಗ್ರಾಮದ ನಿವಾಸಿ ಶ್ರೀ ಛಲವಾದಿ ತಳವಾರ ಹನುಮಂತಪ್ಪ, ಮತ್ತು ಶ್ರೀಮತಿ ಹನುಮಂತಮ್ಮ ದಂಪತಿಯ ಹಿರಿಯ ಪುತ್ರ
ಶ್ರೀ ಛಲವಾದಿ ಅಂಜಿನಪ್ಪ (48) ಮಂಗಳವಾರ ಸಂಜೆ ನಿಧನರಾದರು. ಇವರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಬುಧವಾರ (ಇಂದು) ಬೆಳಗ್ಗೆ 11.30 ಗಂಟೆಗೆ ಭೈರಾಪುರ ಗ್ರಾಮದ ಸಾರ್ವಜನಿಕರ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.









