Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನೆಗೆ ಸಿದ್ಧತೆ: ಶಿಕ್ಷಕರಿಗೆ ‘ಟ್ರಾನ್ಸಿಷನ್ ಯೋಜನೆ’ ತರಬೇತಿ ಆರಂಭ

---Advertisement---

ಸುದ್ದಿಒನ್,ಬೆಂಗಳೂರು,ಮೇ.26: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ (Bilingual) ಶಿಕ್ಷಣವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಭರ್ಜರಿ ಸಿದ್ಧತೆ ನಡೆಸಿದೆ. 2026-27ನೇ ಸಾಲಿನಿಂದ ‘ಮೊನೊಗ್ರೇಡ್ ದ್ವಿಭಾಷಾ ತರಗತಿಗಳ’ ಬೋಧನೆಗೆ ಪೂರಕವಾಗಿ ಶಿಕ್ಷಕರಿಗೆ ವಿಶೇಷ “ಟ್ರಾನ್ಸಿಷನ್ ಯೋಜನೆ” (Transition Plan) ತರಬೇತಿಯನ್ನು ಆಯೋಜಿಸಲಾಗಿದೆ.

ರಾಜ್ಯದ ಎಲ್ಲಾ ಕೆ.ಪಿ.ಎಸ್ ಶಾಲೆಗಳು, ಪಿಎಂಶ್ರೀ ಶಾಲೆಗಳು, ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿರುವ ಸರ್ಕಾರಿ ಶಾಲೆಗಳು, ಗಣಿತಬಾಧಿತ ತಾಲ್ಲೂಕುಗಳು ಹಾಗೂ ನಿಗದಿಪಡಿಸಲಾದ 15 ಜಿಲ್ಲೆಗಳ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ದ್ವಿಭಾಷಾ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ.

30 ದಿನಗಳ ವಿಶೇಷ ಯೋಜನೆ
ದ್ವಿಭಾಷಾ ಶಾಲೆಗಳ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳನ್ನು ಈ ಹೊಸ ಕಲಿಕಾ ವಿಧಾನಕ್ಕೆ ಸಜ್ಜುಗೊಳಿಸಲು 30 ದಿನಗಳ ವಿಶೇಷ ಟ್ರಾನ್ಸಿಷನ್ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕೆ ಪೂರಕವಾಗಿ ಮಾಡ್ಯೂಲ್ಗಳನ್ನು ಸಿದ್ಧಪಡಿಸಲಾಗಿದ್ದು, ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಹಂತದ ಸಂಪನ್ಮೂಲ ವ್ಯಕ್ತಿಗಳು (MRP) ಹಾಗೂ ಶಿಕ್ಷಕರಿಗೆ ಹಂತ-ಹಂತವಾಗಿ ತರಬೇತಿ ನೀಡಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

ತರಬೇತಿ ವೇಳಾಪಟ್ಟಿ ಹೀಗಿದೆ:
ಮೇ 26, 2026: ರಾಜ್ಯ ಹಂತದ MRP ತರಬೇತಿಯು ವೀಡಿಯೋ ಕಾನ್ಫರೆನ್ಸ್ (V.C) ಮೂಲಕ ಯಶಸ್ವಿಯಾಗಿ ನಡೆದಿದೆ. ಪ್ರತಿ ತಾಲ್ಲೂಕಿನಿಂದ 5 ಜನ ಎಂ.ಆರ್.ಪಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗಿತ್ತು.

ಮೇ 27, 2026: ರಾಜ್ಯ ಹಂತದಲ್ಲಿ ತರಬೇತಿ ಪಡೆದ ಎಂ.ಆರ್.ಪಿಗಳು, ಪ್ರತಿ ತಾಲ್ಲೂಕಿನಿಂದ 15 ಜನ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಒಂದು ದಿನದ ಮುಖಾಮುಖಿ ತರಬೇತಿ ನೀಡಲಿದ್ದಾರೆ.

ಮೇ 29 ಮತ್ತು ಮೇ 30, 2026: ಈ ಸಂಪನ್ಮೂಲ ವ್ಯಕ್ತಿಗಳ ಮೂಲಕ ತಾಲ್ಲೂಕಿನ ಎಲ್ಲಾ ದ್ವಿಭಾಷಾ ಶಾಲಾ ಶಿಕ್ಷಕರಿಗೆ ಒಂದು ದಿನದ ಮುಖಾಮುಖಿ ತರಬೇತಿಯನ್ನು ನೀಡಲಾಗುತ್ತದೆ.

ಶೈಕ್ಷಣಿಕ ವರ್ಷದ ಆರಂಭದಲ್ಲೇ ದ್ವಿಭಾಷಾ ಶಿಕ್ಷಕರನ್ನು ಬೋಧನೆಗೆ ಸಂಪೂರ್ಣವಾಗಿ ಸಜ್ಜುಗೊಳಿಸುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ (ಅಭಿವೃದ್ಧಿ ಮತ್ತು ಆಡಳಿತ) DSERT ನಿರ್ದೇಶಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Join WhatsApp

Join Now

Join Telegram

Join Now