Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಭಟ್ಕಳದಲ್ಲಿ ಮಹಾ ದುರಂತ: ನದಿಯಲ್ಲಿ ಕಪ್ಪೆಚಿಪ್ಪು ಆರಿಸಲು ಹೋದ 8 ಮಂದಿ ಜಲಸಮಾಧಿ!

---Advertisement---

ಸುದ್ದಿಒನ್,ಉತ್ತರ ಕನ್ನಡ,ಮೇ.24: ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಎದೆಯನ್ನು ಜರತಾರಿಸುವ ಭೀಕರ ದುರಂತವೊಂದು ಸಂಭವಿಸಿದೆ. ಜೀವನೋಪಾಯಕ್ಕಾಗಿ ನದಿಗೆ ಇಳಿದಿದ್ದ ಒಂದೇ ಕುಟುಂಬದ ಎಂಟು ಜನ ನೀರು ಪಾಲಾಗಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಇಡೀ ಜಿಲ್ಲೆಯೇ ಕಣ್ಣೀರಿನಲ್ಲಿ ಮುಳುಗಿದೆ.

ಶಿರಾಲಿಯ ಒಂದೇ ಕುಟುಂಬಕ್ಕೆ ಸೇರಿದ ಸುಮಾರು 14 ಸದಸ್ಯರು ಆಹಾರ ಹಾಗೂ ವ್ಯಾಪಾರದ ಉದ್ದೇಶಕ್ಕಾಗಿ ತಟ್ಟೆಹಕ್ಕಲು ನದಿಯ ತಟಕ್ಕೆ ಕಪ್ಪೆಚಿಪ್ಪು (ಚಿಪ್ಪುಮೀನು) ಸಂಗ್ರಹಿಸಲು ತೆರಳಿದ್ದರು. ಸ್ಥಳೀಯವಾಗಿ ಇದು ಸಾಮಾನ್ಯ ಪ್ರಕ್ರಿಯೆಯಾಗಿದ್ದರಿಂದ ಎಂದಿನಂತೆ ಕುಟುಂಬಸ್ಥರು ನದಿಗೆ ಇಳಿದಿದ್ದಾರೆ. ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು.

ನದಿಯ ಆಳ ಮತ್ತು ನೀರಿನ ರಭಸದ ಅರಿವಿಲ್ಲದೆ ಕುಟುಂಬದ ಸದಸ್ಯರು ಮುನ್ನಡೆದಿದ್ದಾರೆ. ಈ ವೇಳೆ ಆಳದ ಸುಳಿಗೆ ಸಿಲುಕಿ ಕೆಲವರು ಮುಳುಗಲಾರಂಭಿಸಿದಾಗ, ಅವರನ್ನು ರಕ್ಷಿಸಲು ಹೋದ ಉಳಿದವರೂ ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕಣ್ಣೆದುರೇ ಒಂದೇ ಕುಟುಂಬದ ಎಂಟು ಮಂದಿ ಜಲಸಮಾಧಿಯಾಗಿದ್ದನ್ನು ಕಂಡು ದಡದಲ್ಲಿದ್ದ ಇತರರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ನದಿಯ ದಡದಲ್ಲಿದ್ದವರ ಪರಿಸ್ಥಿತಿಯೂ ಕೂಡ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಜವಾನರು ಮತ್ತು ಸ್ಥಳೀಯ ನುರಿತ ಈಜುಗಾರರು ಜಂಟಿಯಾಗಿ ನದಿಯಲ್ಲಿ ಬೃಹತ್ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯದ ವರದಿಗಳ ಪ್ರಕಾರ, ಮೂವರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಇನ್ನುಳಿದ ಐವರಿಗಾಗಿ ನದಿಯ ಆಳದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

Join WhatsApp

Join Now

Join Telegram

Join Now