Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಾದಾಮಿ ಗುಹಾಂತರ ದೇವಾಲಯದಲ್ಲಿ ಚಪ್ಪಲಿ ವಿವಾದ: ಮಹಿಳೆಯರ ಮಧ್ಯೆ ವಾಗ್ವಾದ ವೈರಲ್

---Advertisement---

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾಂತರ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿ ಓಡಾಡುತ್ತಿದ್ದ ಮಹಿಳೆಯೊಬ್ಬರನ್ನು ಮತ್ತೊಬ್ಬ ಮಹಿಳಾ ಪ್ರವಾಸಿಗರು ಪ್ರಶ್ನಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ವಿಡಿಯೋ ಎಕ್ಸ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಹಸಿರು ಬಣ್ಣದ ಉಡುಪು ಹಾಗೂ ಹಿಜಾಬ್ ಧರಿಸಿದ್ದ ಮಹಿಳೆಯೊಬ್ಬರು ದೇವಾಲಯ ಆವರಣದಲ್ಲಿ ಚಪ್ಪಲಿ ಧರಿಸಿ ಸಂಚರಿಸುತ್ತಿರುವುದನ್ನು ಗಮನಿಸಿದ ಪ್ರವಾಸಿಗ ಮಹಿಳೆ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದವೂ ನಡೆದಿದೆ.ಪ್ರವಾಸಿಗರ ಪ್ರಕಾರ, ಆ ಮಹಿಳೆ ತಾನು ಅಲ್ಲಿನ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ದೇವಾಲಯದ ಪಾವಿತ್ರ್ಯ ಕಾಪಾಡುವ ನಿಯಮ ಎಲ್ಲರಿಗೂ ಒಂದೇ ಆಗಿರಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ. “ಸಿಬ್ಬಂದಿಯಾಗಿದ್ದರೂ ದೇವಾಲಯದೊಳಗೆ ಚಪ್ಪಲಿ ಧರಿಸುವುದು ಸರಿಯಲ್ಲ” ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಇನ್ನೊಂದೆಡೆ, ಕೆಲವರು ಮಹಿಳೆಯ ಪರವಾಗಿ ಪ್ರತಿಕ್ರಿಯಿಸಿ, “ಬಿಸಿಲಿನ ತಾಪದಿಂದ ಪಾದಗಳನ್ನು ರಕ್ಷಿಸಿಕೊಳ್ಳಲು ಚಪ್ಪಲಿ ಧರಿಸಿದ್ದಿರಬಹುದು. ಸಣ್ಣ ವಿಷಯವನ್ನು ದೊಡ್ಡದಾಗಿಸಲಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಘಟನೆ ಬಳಿಕ ಬಾದಾಮಿ ಹಾಗೂ ಭೂತನಾಥ ದೇವಾಲಯಗಳ ನಿರ್ವಹಣೆ ಕುರಿತು ಕೂಡ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಕೆಲವು ಪ್ರವಾಸಿಗರು ದೇವಾಲಯ ಆವರಣದಲ್ಲಿ ಸ್ವಚ್ಛತೆ ಕೊರತೆ ಹಾಗೂ ನಿರ್ವಹಣಾ ವೈಫಲ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.ಆದರೆ ಘಟನೆ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಾಣಕ್ಯನೀತಿ : ಬುದ್ಧಿವಂತಿಕೆ ಇದ್ದರೂ ಈ 5 ತಪ್ಪು ಮಾಡಬೇಡಿ; ಜೀವನದಲ್ಲಿ ಕಷ್ಟಗಳು ಎದುರಾಗಬಹುದು!

ಆಗಸ್ಟ್ 17ರ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಶುಭಫಲ, ಹಣಕಾಸಿನಲ್ಲಿ ಲಾಭದ ಯೋಗ!

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!