ಸುದ್ದಿಒನ್,ಬೆಂಗಳೂರು,ಮೇ.19:ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆ ಹಾದಿಯಲ್ಲಿದ್ದು, ಆಭರಣ ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಚಿನ್ನದ ದರ ಈಗ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಗ್ರಾಹಕರ ಈ ಸಣ್ಣ ಅವಧಿಯ ಸಂತಸಕ್ಕೆ ಬ್ರೇಕ್ ಬಿದ್ದಿದ್ದು, ಕೇವಲ ಮೂರೇ ದಿನಗಳಲ್ಲಿ ಹಳದಿ ಲೋಹದ ಬೆಲೆ ಮತ್ತೆ ಗಗನಕ್ಕೇರಿದೆ.
ಮಂಗಳವಾರ (ಮೇ 19, 2026) ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಆಭರಣ ಚಿನ್ನ (22 ಕ್ಯಾರೆಟ್) ಮತ್ತು ಅಪರಂಜಿ ಚಿನ್ನ (24 ಕ್ಯಾರೆಟ್) ಎರಡರ ಬೆಲೆಯೂ ಗ್ರಾಹಕರಿಗೆ ಶಾಕ್ ನೀಡುವಂತೆ ಭಾರಿ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಏರುಪೇರುಗಳು ಭಾರತೀಯ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರಿದ್ದು, ಇಂದಿನ ತಾಜಾ ಚಿನ್ನ ಮತ್ತು ಬೆಳ್ಳಿ ದರಗಳ ಸಂಪೂರ್ಣ ವಿವರ ಇಲ್ಲಿದೆ.

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿ ಗ್ರಾಂ ಚಿನ್ನ ಮತ್ತು ಬೆಳ್ಳಿಯ ಇಂದಿನ ದರ ಹೀಗಿದೆ:
24 ಕ್ಯಾರೆಟ್ ಶುದ್ಧ ಚಿನ್ನ (1 ಗ್ರಾಂ): ₹15,704
22 ಕ್ಯಾರೆಟ್ ಆಭರಣ ಚಿನ್ನ (1 ಗ್ರಾಂ): ₹14,395
18 ಕ್ಯಾರೆಟ್ ಚಿನ್ನ (1 ಗ್ರಾಂ): ₹11,778
ಬೆಳ್ಳಿ ದರ (1 ಗ್ರಾಂ): ₹285
ವಿವಿಧ ನಗರಗಳಲ್ಲಿ ಇಂದಿನ 10 ಗ್ರಾಂ ಅಪರಂಜಿ ಚಿನ್ನದ ದರಗಳು ಈ ಕೆಳಗಿನಂತಿವೆ:
| ನಗರದ ಹೆಸರು | 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ) |
|---|---|
| ಬೆಂಗಳೂರು | ₹1,57,040 |
| ಮುಂಬೈ | ₹1,57,040 |
| ನಾಗ್ಪುರ | ₹1,57,040 |
| ಕೋಲ್ಕತ್ತಾ | ₹1,57,040 |
| ಪಾಟ್ನಾ | ₹1,57,090 |
| ಸೂರತ್ | ₹1,57,090 |
| ಚಂಡೀಗಢ | ₹1,57,190 |
| ಲಕ್ನೋ | ₹1,57,190 |
| ಚೆನ್ನೈ | ₹1,62,220 |
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












