Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಲಾ ವಾಹನಗಳ ದರ ಶೇ. 10 ರಿಂದ 15 ರಷ್ಟು ಏರಿಕೆ: ಪೋಷಕರಿಗೆ ಆರ್ಥಿಕ ಶಾಕ್!

---Advertisement---

ಸುದ್ದಿಒನ್,ಬೆಂಗಳೂರು,ಮೇ.18: ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ರಾಜ್ಯದ ಪೋಷಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇತ್ತೀಚಿನ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದಾಗಿ, ರಾಜ್ಯಾದ್ಯಂತ ಖಾಸಗಿ ಶಾಲಾ ಬಸ್, ವ್ಯಾನ್ ಮತ್ತು ಆಟೋಗಳ ಪ್ರಯಾಣ ದರವನ್ನು ಶೇ. 10 ರಿಂದ 15 ರಷ್ಟು ಹೆಚ್ಚಿಸಲು ಚಾಲಕರು ಮತ್ತು ಮಾಲೀಕರ ಸಂಘ ನಿರ್ಧರಿಸಿದೆ.

ಇಂಧನ ಬೆಲೆ ಏರಿಕೆ ಮಾತ್ರವಲ್ಲದೆ ವಾಹನಗಳ ಬಿಡಿಭಾಗಗಳು, ವಿಮೆ, ರಸ್ತೆ ತೆರಿಗೆ ಮತ್ತು ಚಾಲಕರ ವೇತನ ಹೆಚ್ಚಳಗೊಂಡಿರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಸಂಘಟನೆಗಳು ತಿಳಿಸಿವೆ. ಪ್ರತಿ ವರ್ಷ ಶೇ. 3 ರಿಂದ 5 ರಷ್ಟು ಮಾತ್ರ ಹೆಚ್ಚಾಗುತ್ತಿದ್ದ ಶುಲ್ಕ, ಈ ಬಾರಿ ನೇರವಾಗಿ ಶೇ. 10-15 ರಷ್ಟು ದುಬಾರಿಯಾಗುತ್ತಿದೆ. ಉದಾಹರಣೆಗೆ, ಪ್ರತಿ ತಿಂಗಳು 2,000 ರೂ. ಇದ್ದ ಶುಲ್ಕದಲ್ಲಿ ಕನಿಷ್ಠ 200 ರಿಂದ 300 ರೂ. ಹೆಚ್ಚಳವಾಗಲಿದೆ.

ಈಗಾಗಲೇ ಪ್ರವೇಶಾತಿ, ಪುಸ್ತಕ ಹಾಗೂ ಯೂನಿಫಾರ್ಮ್ ಖರೀದಿಯಿಂದ ಕಂಗಾಲಾಗಿರುವ ಪೋಷಕರಿಗೆ ಈ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಲಾ ವಾಹನಗಳ ದರ ನಿಯಂತ್ರಣಕ್ಕೆ ಸೂಕ್ತ ನಿಯಮಾವಳಿ ತರಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...