Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಕಾನೂನುಬದ್ಧ ಹಕ್ಕು : ನ್ಯಾಯಾಧೀಶ ಪುನೀತ್ ಬಿ.ಆರ್.

---Advertisement---

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, 14ಕಾನೂನಿನ ಪ್ರಕಾರ, ಕಾರ್ಮಿಕರು ಕನಿಷ್ಠ ವೇತನ, ನಿಗದಿತ ಕೆಲಸದ ಸಮಯ ಮತ್ತು ಸಾಮಾಜಿಕ ಭದ್ರತೆಗೆ ಅರ್ಹರಾಗಿರುತ್ತಾರೆ ಎಂದು ಗೌರವಾನ್ವಿತ ಅಪಾರ ಸಿವಿಲ್ ನ್ಯಾಯಾಧೀಶರಾದ ಪುನೀತ್.ಬಿ.ಆರ್. ಹೇಳಿದರು.

 

ಚಳ್ಳಕೆರೆ ಕಾನೂನು ಸೇವಾ ಸಮಿತಿ ಮತ್ತು ತಾಲ್ಲೂಕು ವಕೀಲರ ಸಂಘ.ಹಾಗೂ ತಾಲ್ಲೂಕು ಕಾರ್ಮಿಕ ಇಲಾಖೆ ಇವರ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ ,ಕಾರ್ಮಿಕರು ಎಂದರೆ ವೇತನ ಅಥವಾ ಕೂಲಿಗಾಗಿ ದೈಹಿಕ ಅಥವಾ ಮಾನಸಿಕ ಶ್ರಮವನ್ನು ಹಾಕಿ, ಉದ್ಯೋಗದಾತರ (ಯಜಮಾನರ) ಅಧೀನದಲ್ಲಿ ಕೆಲಸ ಮಾಡುವ ವ್ಯಕ್ತಿಗಳು. ಇವರು ಕೈಗಾರಿಕೆ, ನಿರ್ಮಾಣ, ಕೃಷಿ ಅಥವಾ ಸೇವಾ ವಲಯಗಳಲ್ಲಿ ದುಡಿಯುವ ಉತ್ಪಾದಕ ವರ್ಗವಾಗಿದ್ದು, ಅವರ ಶ್ರಮವೇ ಅವರ ಪ್ರಮುಖ ಆಸ್ತಿಯಾಗಿದೆ.

 

ಮನೆ ಮನೆಗೆ ಹಾಲು ಹಾಕುವವರು ಸಹ ಕಾರ್ಮಿಕರೆ,ಅವರು ಒಂದು ದಿನ ಹಾಲು ಹಾಕಲಿಲ್ಲಾ ಅಂದ್ರೆ ನಾವು ಹಾಲು.ಕಾಫಿ ಕುಡಿಯೋಕೆ ಹಾಗುತ್ತಾ. ಕಾರ್ಮಿಕರು ಒಂದು ದಿನ ರಜ ಹಾಕಿದರೆ ಕಷ್ಟವಾಗುತ್ತದೆ. ಕಾರ್ಮಿಕರಿಗಾಗಿಯೆ ಹಲವು ಕಾನೂನುಗಳಿವೆ. ಕಾರ್ಮಿಕರಿಗೆ ಸರ್ಕಾರದ ನಿಗದಿಪಡಿಸಿದ ಕನಿಷ್ಠ ಸಂಬಳ ಕೊಡಬೇಕು, ತಿಂಗಳ 7ನೇ ತಾರೀಖಿನೊಳಗೆ ಸಂಬಳ ಕೊಡಬೇಕು, ಅಕ್ರಮ ಕಡಿತ ಮಾಡುವಂತಿಲ್ಲ, ನಿಗದಿಪಡಿಸಿದ್ದ ವೇಳೆಗೆ ಸರಿಯಾಗಿ ಕೆಲಸ ಮಾಡಬೇಕು. ಹೆಚ್ಚು ಕೆಲಸ ಮಾಡಿಸಿದರೆ ಹೆಚ್ಚು ವೇತನ ನೀಡಬೇಕು. ಹಾಗೂ ದಿನಕ್ಕೆ 8:ಗಂಟೆ ಕೆಲಸ ವಾರಕ್ಕೆ ಒಂದು ರಜೆ. ಕಾರ್ಮಿಕರಿಗೆ ಮಾತೃತ್ವ ಸೌಲಭ್ಯ ಕಾಯ್ದೆ ಪ್ರಕಾರ 26 ವಾರ ಸಂಬಳ ಸಹಿತ ಹೆರಿಗೆ ರಜೆ ,2 ಮಕ್ಕಳಾದ ಮೇಲೆ 12 ವಾರ ರಜೆ ಇರುತ್ತೆ. ಮಹಿಳೆಯರನ್ನ ರಾತ್ರಿ ಪಾಳಿಯದಲ್ಲಿ ಅವರ ಒಪ್ಪಿಗೆ ಇಲ್ಲದೆ ಕೆಲಸಕ್ಕೆ ಹಾಕುವಂತಿಲ್ಲ. ಕೆಲಸದ ವೇಳೆ ಅಪಘಾತ ಸಾವು ಸಂಭವಿಸಿದರೆ ಮಾಲೀಕರೇ ಪರಿಹಾರ ಕೊಡಬೇಕಾಗುತ್ತದೆ. ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನ ಸಾಮಾಜಿಕ ಭದ್ರತೆಗಳಾದ ಪಿಎಪ್.ಇಎಸ್ಐ ಗ್ರಾಚ್ಯುಟಿ ಒಂದು ಕಡೆ ಗಾಗಿ ವರ್ಕಗೂ ಅನ್ವಯವಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕಾರ್ಮಿಕರಿಗೆ ಅನ್ಯಾಯವಾದಾಗ ನೇರವಾಗಿ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ತಮಗೆ ಆದ ಅನ್ಯಾಯವನ್ನು ತಿಳಿಸಬಹುದು ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಒದಗಿಸುವ ಕಾರ್ಯವಾಗುತ್ತದೆ ಎಂದರು.

 

ವಕೀಲ ಸಂಘದ ತಾಲೂಕು ಅಧ್ಯಕ್ಷ ಜಿ ಆರ್. ಅಶ್ವಥ್ ನಾಯಕ ಮಾತನಾಡಿ, ಕಾರ್ಮಿಕರು ಮುಖ್ಯವಾಗಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.. ಇಲಾಖೆ ಸಾಕಷ್ಟು ಪ್ರಚಾರವನ್ನು ಮಾಡುತ್ತಿದ್ದಾರೆ
ಇದರ ಅನುಕೂಲ ಪಡೆದು ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಕಾರ್ಮಿಕ ಇಲಾಖೆಯಿಂದ ಸಿಗುವ ಅನುಕೂಲಗಳನ್ನು ಪಡೆದುಕೊಳ್ಳಿ ಎಂದರು.

ಕಾರ್ಮಿಕ ಇಲಾಖೆಯ ತಾಲೂಕು ಅಧಿಕಾರಿ ಕುಸುಮಾ ಮಾತನಾಡಿ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಾಕಷ್ಟು ಯೋಜನೆ ಮತ್ತು ಅನುಕೂಲಗಳಿವೆ ಮದುವೆ ಸಹಾಯಧನ ,ಹೆರಿಗೆ ಸೌಲಭ್ಯ, ಶಿಕ್ಷಣ ಸಹಾಯಧನ, ವೈದ್ಯಕೀಯ ನೆರವು, ಅಪಘಾತ ಪರಿಹಾರ ,ಪಿಂಚಣಿ ,ಅಂತ್ಯ ಕ್ರಿಯೆ ವೆಚ್ಚ, ಟೂಲ್ ಕಿಟ್, ಸೇರಿದಂತೆ ಇಪಿಎಫ್,ಇಎಸ್ ಐ ಕಾರ್ಡ್, ಕಾರ್ಮಿಕ ಕಾರ್ಡ್ ಕೌಶಲ್ಯ ತರಬೇತಿ ಕನಿಷ್ಠ ವೇತನ ಕಾತರಿ ಅಸಂಘಟಿತ ಕಾರ್ಮಿಕರಿಗೆ ಈ ಶ್ರಮ ಕಾರ್ಡ ಸೌಲಭ್ಯ, ಅಪಘಾತ ವಿಮೆ ಪಿಂಚಣಿ ಯೋಜನೆ, ಸೇರಿದಂತೆ ವಿವಿಧ ಅನುಕೂಲಗಳಿವೆ. ಕಾರ್ಮಿಕರು ನಮ್ಮ ಇಲಾಖೆಗೆ ಬಂದು ನೋಂದಣಿ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು..
ವಕೀಲರಾದ ಹನುಮಂತ ರಾಯ ಕಾರ್ಮಿಕ ಕುರಿತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ವಕೀಲರಾದ ಗೋವಿಂದಪ್ಪ, ವಕೀಲರು ಕಾರ್ಮಿಕ ಇಲಾಖೆ ಸಿಬ್ಬಂದಿ ನ್ಯಾಯಾಲಯದ ಸಿಬ್ಬಂದಿಗಳಾದ ನಾಗರತ್ನ , ತೇಜೋವತಿ, ಕಾರ್ಮಿಕ ಸಂಘಟನೆಯ ಮುಖಂಡರು ಸೇರಿದಂತೆ ಸಾರ್ವಜನಿಕರು ಇದ್ದರು..

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now