ಸುದ್ದಿಒನ್,ನವದೆಹಲಿ,ಮೇ.13: ದೇಶದ ಪ್ರಮುಖ ಡೈರಿ ಬ್ರ್ಯಾಂಡ್ ಆದ ‘ಅಮೂಲ್’, ತನ್ನ ವಿವಿಧ ಮಾದರಿಯ ಹಾಲಿನ ದರಗಳನ್ನು ಪ್ರತಿ ಲೀಟರ್ಗೆ ₹2 ರಷ್ಟು ಏರಿಕೆ ಮಾಡಿದೆ. ಪರಿಷ್ಕೃತ ದರಗಳು ನಾಳೆ ಅಂದರೆ ಮೇ 14 ರಿಂದ ಜಾರಿಗೆ ಬರಲಿವೆ ಎಂದು ವರದಿಯಾಗಿದೆ.
ಅಮೂಲ್ ಈ ಬೆಲೆ ಏರಿಕೆಯು ಗೋಲ್ಡ್, ತಾಜಾ, ಶಕ್ತಿ, ಟಿ-ಸ್ಪೆಷಲ್, ಸ್ಲಿಮ್ ಮತ್ತು ಟ್ರಿಮ್, ಹಸುವಿನ ಹಾಲು ಹಾಗೂ ಎಮ್ಮೆ ಹಾಲು ಸೇರಿದಂತೆ ಎಲ್ಲಾ ಪ್ರಮುಖ ಬ್ರ್ಯಾಂಡ್ಗಳಿಗೆ ಅನ್ವಯವಾಗಲಿದೆ.

ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ನೀಡಿರುವ ಹೇಳಿಕೆಯ ಪ್ರಕಾರ, ಹಾಲು ಉತ್ಪಾದನೆ ಮತ್ತು ಒಟ್ಟಾರೆ ಕಾರ್ಯಾಚರಣೆಯ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ.ಜಾನುವಾರುಗಳ ಆಹಾರದ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಹಾಲಿನ ಪ್ಯಾಕೇಜಿಂಗ್ ಫಿಲ್ಮ್ ಮತ್ತು ಇಂಧನ ದರಗಳು ಏರಿಕೆ ಕಂಡಿರುವುದು ಕಂಪನಿಯ ಮೇಲೆ ಆರ್ಥಿಕ ಹೊರೆ ಹೊರಿಸಿದೆ. ಈ ಬೆಲೆ ಏರಿಕೆಯು ಶೇಕಡಾ 2.5 ರಿಂದ 3.5 ರಷ್ಟಿದ್ದು, ಇದು ಪ್ರಸ್ತುತ ಇರುವ ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ” ಎಂದು GCMMF ಸ್ಪಷ್ಟಪಡಿಸಿದೆ.
ಗ್ರಾಹಕರಿಗೆ ಹೊರೆಯಾದರೂ, ಹಾಲು ಉತ್ಪಾದಕ ರೈತರಿಗೆ ಇದು ಸಿಹಿ ಸುದ್ದಿಯಾಗಿದೆ. ಸದಸ್ಯ ಒಕ್ಕೂಟಗಳು ರೈತರ ಖರೀದಿ ಬೆಲೆಯನ್ನು ಪ್ರತಿ ಕೆಜಿ ಫ್ಯಾಟ್ಗೆ ₹30 ರಷ್ಟು ಹೆಚ್ಚಿಸಿವೆ. ಇದು ಮೇ 2025 ಕ್ಕೆ ಹೋಲಿಸಿದರೆ ಶೇಕಡಾ 3.7 ರಷ್ಟು ಏರಿಕೆಯಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










