Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

‘ನಮ್ಮೂರ ಶಾಲೆ ನಮ್ಮೂರಲ್ಲೇ ಇರಲಿ’; ಕೆಪಿಎಸ್ ಯೋಜನೆ ವಿರುದ್ಧ ಗ್ರಾಮಸ್ಥರ ಹೋರಾಟ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 13 : ತಾಲೂಕಿನ ಮಾನಂಗಿ ಗ್ರಾಮಸ್ಥರು, ಪೋಷಕರು ಹಾಗೂ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಒಪ್ಪಿಗೆ ಇರುವುದಿಲ್ಲ ಎಂದು ‌ಸರ್ಕಾರಿ ಶಾಲೆ ಮುಂದೆ ಬ್ಯಾನರ್ ಕಟ್ಟಿ, ನಮ್ಮೂರ ಶಾಲೆ ನಮ್ಮೂರಲ್ಲಿ ಇರಬೇಕೆಂದು ಹೋರಾಟ, ಪತ್ರ ಚಳುವಳಿ ನಡೆಸಿದರು.

ಹೋರಾಟವನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಸಂಚಾಲಕರು ಕೆ ಈರಣ್ಣ ಅವರು ಮಾತನಾಡಿ… ಇಡೀ ರಾಜ್ಯಾದ್ಯಂತ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಗ್ರಾಮಸ್ಥರು, ಪೋಷಕರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಜನ ಸಾಮಾನ್ಯರ ತೀವ್ರ ವಿರೋಧ ನಡುವೆಯೊ ರಾಜ್ಯ ಸರ್ಕಾರ ತನ್ನ ಹಟಮಾರಿ ಧೋರಣೆ ಬೀಡದೆ ಕೆಪಿಎಸ್ ಶಾಲೆಗೆ ಆರಂಭಿಸಲು ಮುಂದಾಗಿದ್ದು ಅತ್ಯಂತ ಜನ ವಿರೋಧಿ ನಡೆ. ಯಾಕೆಂದರೆ ಕೆಪಿಎಸ್ ಶಾಲೆ ಅನ್ನುವುದು ಬರೀ ಶಾಲೆ ಅಲ್ಲ, ಅದು ಬಡವರ ಮಕ್ಕಳನ್ನು ಬೀದಿಗೆ ತಳ್ಳುವ ನೀತಿ. ಪದೇ ಪದೇ ರಾಜ್ಯ ಸರ್ಕಾರ ಶಾಲೆ ಮುಚ್ಚುದಿಲ್ಲ ಎಂದು ಬರೀ ಬಾಯಿ ಮಾತಾಗಿದೆ, ಆದರೆ ಶಾಲೆ ಮುಚ್ಚುವುದು ಇಲ್ಲ ಎಂದು ಒಂದೇ ಒಂದು ಕೂಡ ಆದೇಶ ಹೊರಡಿಸಿಲ್ಲ. ಹಾಗೆನೇ ಕಳೆದ ವರ್ಷ 15 ಅಕ್ಟೋಬರ್ 2025 ಆದೇಶವನ್ನು ನೋಡಿದರೆ ಶಾಲೆಗಳನ್ನು ವಿಲೀನ ಪ್ರಕ್ರಿಯೆ ಮಾಡಬೇಕೆಂದು ಹೇಳುತ್ತದೆ.
ಇದರ ಜೊತೆಗೆ ಇತ್ತಿಚೆಗೆ ಅರಸೀಕೆರೆ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆ ಮುಚ್ಚುವುದಕ್ಕೆ ಆದೇಶ ಹೊರಡಿಸಿದೆ ಮತ್ತು ರಾಮನಗರ ಜಿಲ್ಲೆಯ ಪಾದರಹಳ್ಳಿ ಕೆಪಿಎಸ್ ಶಾಲೆ ಮಾಡಿ ಆದರ ಸುತ್ತ ಮುತ್ತಲಿನ ಶಾಲೆ ಮುಚ್ಚುವುದಕ್ಕೆ ಸರ್ಕಾರಿ ಶಿಕ್ಷಕರು ಪೋಷಕರಿಗೆ ಸುಳ್ಳು ಹೇಳಿ, ಮುಚ್ಚಳಿಕೆ ಪತ್ರಕ್ಕೆ ಹೆಬ್ಬೆಟ್ಟು ಹಾಕಿಸಿಕೊಂಡು ಮೋಸ ಮಾಡಿದ್ದಾರೆ.

 

ನಮ್ಮ ದೇಶದ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಸಾವಿತ್ರಿ ಬಾಯಿ ಫುಲೆ, ಜ್ಯೋತಿಬಾ ಫುಲೆ ಅವರ ವಿಚಾರ ಮೈಗೂಡಿಸಿಕೊಂಡು ನಮ್ಮೂರ ಶಾಲೆ ಮುಚ್ಚಬಾರದು ಎಂದು ಒಗ್ಗಟ್ಟಾಗಿ ಚಳುವಳಿ ನಡೆಸಬೇಕು ಎಂದು ಕರೆ ನೀಡಿದರು.

ಊರಿನ ಪೋಷಕರು ಈಶ್ವರಪ್ಪ ಅವರು ಮಾತನಾಡುತ್ತಾ ಮಾನಂಗಿ ಗ್ರಾಮಸ್ಥರು ಅತ್ಯಂತ ಕಡು ಬಡ ಕೂಲಿ ಕಾರ್ಮಿಕರು ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ದುಡ್ಡು ಕೊಟ್ಟು ಖಾಸಗಿ ಶಾಲೆಗಳಿಗೆ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮೂರ ಶಾಲೆ ನಮ್ಮೂರಲ್ಲಿ ಇರಬೇಕೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಊರಿನ ಹಿರಿಯರು ಮಹಾಂತೇಶ್ವರಪ್ಪ, ಎಸ್.ಡಿ.ಎಮ್.ಸಿ ಅಧ್ಯಕ್ಷರು ಗೌರಮ್ಮ, ಪೋಷಕರು ಲತಾ, ಪುಷ್ಪ, ಸರಸ್ವತಿ ಮತ್ತು ರಂಗಸ್ವಾಮಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now