ಸುದ್ದಿಒನ್,ಬೆಂಗಳೂರು,ಮೇ.12: ರಾಜ್ಯದ ಅನ್ನದಾತರಿಗೆ ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ದಾವಣಗೆರೆ, ಧಾರವಾಡ ಸೇರಿದಂತೆ ರಾಜ್ಯದ ಒಟ್ಟು 6 ಪ್ರಮುಖ ಜಿಲ್ಲೆಗಳಲ್ಲಿ ‘ತೋಟಗಾರಿಕೆ ಕಿಸಾನ್ ಮಾಲ್’ಗಳನ್ನು ಸ್ಥಾಪಿಸಲಾಗಿದೆ.
ಒಂದೇ ಸೂರಿನಡಿ ಸಂಪೂರ್ಣ ಸೇವೆ
ರೈತರು ತಮಗೆ ಬೇಕಾದ ಕೃಷಿ ಪರಿಕರಗಳಿಗಾಗಿ ಬೇರೆ ಬೇರೆ ಕಡೆ ಅಲೆಯುವುದನ್ನು ತಪ್ಪಿಸಲು ಈ ಮಾಲ್ಗಳು ಸಹಕಾರಿಯಾಗಲಿವೆ.
ಗುಣಮಟ್ಟದ ಬಿತ್ತನೆ ಬೀಜಗಳು ಮತ್ತು ಸಸಿಗಳು.

ರಸಗೊಬ್ಬರ ಮತ್ತು ಕೀಟನಾಶಕಗಳ ಪೂರೈಕೆ.
ತಾಂತ್ರಿಕ ಮಾರ್ಗದರ್ಶನ ಮತ್ತು ಆಧುನಿಕ ಕೃಷಿ ಉಪಕರಣಗಳು.
ಬೆಳೆದ ಫಸಲನ್ನು ಮಾರಾಟ ಮಾಡಲು ಮಾರುಕಟ್ಟೆ ಸಂಪರ್ಕ.
ಈ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಲಭ್ಯ
ಸದ್ಯಕ್ಕೆ ಮೊದಲ ಹಂತದಲ್ಲಿ ಈ ಕೆಳಗಿನ ಜಿಲ್ಲೆಗಳನ್ನು ಗುರುತಿಸಿ ಮಾಲ್ಗಳನ್ನು ಆರಂಭಿಸಲಾಗಿದೆ:
ಮಂಡ್ಯ
ಧಾರವಾಡ
ದಾವಣಗೆರೆ
ಶಿವಮೊಗ್ಗ
ಮೈಸೂರು
ಬಾಗಲಕೋಟೆ
ರೈತರಿಗೆ ನೀಡುವ ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗಿನ ಸೇವೆಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ಒದಗಿಸಲು ಮಂಡ್ಯ, ಧಾರವಾಡ. ದಾವಣಗೆರೆ, ಶಿವಮೊಗ್ಗ, ಮೈಸೂರು ಹಾಗೂ ಬಾಗಲಕೋಟೆ ಈ 6 ಜಿಲ್ಲೆಗಳಲ್ಲಿ ʼತೋಟಗಾರಿಕೆ ಕಿಸಾನ್ ಮಾಲ್ಗಳನ್ನು ಸ್ಥಾಪಿಸಲಾಗಿದೆ. ಬೆಳೆಗಾರರ ಅನುಕೂಲಕ್ಕಾಗಿ 14,000 ಮೆಟ್ರಿಕ್ ಟನ್ ಸಾಮರ್ಥ್ಯದ 6 ಶೀತಲ… pic.twitter.com/2CTVyaLOWA
— DIPR Karnataka (@KarnatakaVarthe) May 12, 2026




















