ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (CET-2026) ಬರೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸಿಹಿಸುದ್ದಿ ನೀಡಿದೆ. ಪರೀಕ್ಷೆಯಲ್ಲಿ ಕೆಲವು ಪ್ರಶ್ನೆಗಳ ಕುರಿತು ಬಂದ ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಪ್ರಾಧಿಕಾರ ಕೃಪಾಂಕ (Grace Marks) ನೀಡಲು ತೀರ್ಮಾನಿಸಿದೆ.
ಏಪ್ರಿಲ್ 23 ಮತ್ತು 24, 2026ರಂದು ನಡೆದ CET ಪರೀಕ್ಷೆಯ ಭೌತಶಾಸ್ತ್ರ (Physics) ಮತ್ತು ರಸಾಯನಶಾಸ್ತ್ರ (Chemistry) ವಿಷಯಗಳಲ್ಲಿ ತಲಾ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗುತ್ತದೆ ಎಂದು KEA ಪ್ರಕಟಿಸಿದೆ.ಇದಲ್ಲದೆ, ಜೀವಶಾಸ್ತ್ರ (Biology) ವಿಷಯದ ಒಂದು ಪ್ರಶ್ನೆಗೆ ಎರಡು ಪರ್ಯಾಯ ಉತ್ತರಗಳನ್ನು ಸರಿಯಾದ ಉತ್ತರಗಳೆಂದು ಪರಿಗಣಿಸಲಾಗಿದೆ.ಗಣಿತಶಾಸ್ತ್ರ (Mathematics) ವಿಷಯದಲ್ಲಿ ಪ್ರಕಟಿಸಿದ್ದ ಸರಿ ಉತ್ತರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಈ ಮೊದಲು ಏಪ್ರಿಲ್ 26ರಂದು KEA ತಾತ್ಕಾಲಿಕ ಉತ್ತರ ಕೀ (Provisional Answer Key) ಬಿಡುಗಡೆ ಮಾಡಿ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ನಂತರ ತಜ್ಞರ ಸಮಿತಿ ಆಕ್ಷೇಪಣೆಗಳನ್ನು ಪರಿಶೀಲಿಸಿ ನೀಡಿದ ಶಿಫಾರಸಿನ ಮೇರೆಗೆ ಅಂತಿಮ ಉತ್ತರ ಕೀ ಪರಿಷ್ಕರಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಕೃಪಾಂಕದ ಲಾಭ ದೊರೆಯಲಿದೆ.


















