ಸುದ್ದಿಒನ್, ಚಿತ್ರದುರ್ಗ, ಮೇ. 07 : ತಾಲ್ಲೂಕಿನ ಹಾಯ್ಕಲ್ ಗ್ರಾಮದ ವಾಸಿ ಜಾನಮ್ಮ (65 ವರ್ಷ) ಅವರು ಹೃದಯಾಘಾತದಿಂದ ಇಂದು ರಾತ್ರಿ ಸುಮಾರು 8 ಗಂಟೆಗೆ ನಿಧನರಾದರು. ಮೃತರು ಓರ್ವ ಪತ್ರ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ
10 : 30 ಕ್ಕೆ ಗ್ರಾಮದ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.


















