ಬೆಂಗಳೂರು: ಬಿಸಿಲಿನ ತಾಪಕ್ಕೆ ಸುಸ್ತಾದ ಮಂದಿಗೆ ವರುಣರಾಯ ಕೃಪೆ ತೋರಿದ್ದಾನೆ. ಹವಮಾನ ಇಲಾಖೆ ನೀಡಿದ ವರದಿಯ ಪ್ರಕಾರ ಮುಂದಿನ ಏಳು ದಿನಗಳ ಕಾಲ ಅಂದ್ರೆ ಮೇ 12ರವರೆಗೆ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಸೂಚನೆ ನೀಡಲಾಗಿದೆ. ಕರ್ನಾಟಕದಾದ್ಯಂತ ಒಣ ಹವೆ ಮತ್ತು ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದೆ.
ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೇ 12ರಿಂದ ಕರಾವಳಿ ಭಾಗದ ಒಂದೆರಡು ಕಡೆ ಸಾಧಾರಣ ಮಳೆಯಾಗಲಿದೆ. 30-40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಜೊತೆಗೆ ಮಳೆಯು ಆಗಲಿದೆ ಎಂಬ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಕರ್ನಾಟಕದ ಒಂದೆರಡು ಕಡೆಯಲ್ಲೂ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ಮೇ 9ರಿಂದ 12ರವರೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮೇ 7 ಮತ್ತು 8ರಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು, ಬಲವಾದ ಗಾಳಿ (40-50 ಕಿಮೀ ವೇಗ) ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಹೀಗಾಗಿ ಮನೆಯಿಂದ ಹೊರಗೆ ಹೋಗುವವರು ಎಚ್ಚರಿಂದ ಇರಬೇಕಾಗಿರುತ್ತದೆ. ಅದರಲ್ಲೂ ಛತ್ರಿಗಳನ್ನ ತೆಗೆದುಕೊಂಡು ಹೋಗುವುದು, ರೈನ್ ಜಾಕೆಟ್ ಗಳನ್ನ ತೆಗೆದುಕೊಂಡು ಹೋಗುವುದು ಬಹಳ ಮುಖ್ಯವಾಗುತ್ತದೆ. ಗಾಳಿಯೊಂದಿಗೆ ಮಳೆಯಾಗು ವರದಿ ರೈತರನ್ನ ಸಹಜವಾಗಿಯೇ ಸಂಕಷ್ಟಕ್ಕೆ ಸಿಲುಕಿಸುತ್ತದೆ. ಗಾಳಿಯಿಂದ ಅದೆಷ್ಟೊ ಬೆಳೆ ಹಾಳಾಗುವ ಸಾಧ್ಯತೆ ಇದೆ. ಅದರಲ್ಲೂ ಮಾವು ಬೆಳೆಯನ್ನು ಕೊಯ್ಲು ಮಾಡುವ ಸಮಯವಿದು. ಗಾಳಿಗೆ ಈಗಾಗಲೇ ಸಾಕಷ್ಟು ಕಡೆ ಮಾವು ನೆಲ ಕಚ್ಚಿದೆ. ಇನ್ನು ಮುಂದಿನ ಒಂದು ವಾರಗಳ ಕಾಲ ಹುಷಾರಾಗಿರಬೇಕು.


















