ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಗೆಲುವು ಸಾಧಿಸಿ, ತಾತನ ಕ್ಷೇತ್ರವನ್ನು ತನ್ನದಾಗಿಸಿಕೊಂಡ ಸಮರ್ಥ್ ಶಾಮನೂರು ಮೊದಲ ಬಾರಿಗೆ ಗೆಲುವು, ಅಭಿವೃದ್ಧಿ, ಮದುವೆ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದಾರೆ. ಮುಖ್ಯವಾಗಿ ಇವತ್ತು ಬಂದಿರೋದು ದಾವಣಗೆರೆ ಜಿಲ್ಲೆಯ ಮತದಾರರಿಗೆ ಧನ್ಯವಾದ ತಿಳಿಸೋದಕ್ಕೆ ಎಂದು ಮಾತನ್ನಾಡಿದ್ದಾರೆ.
ಎಲೆಕ್ಷನ್ ಕೌಂಟಿಂಗ್ ಸಮಯದಲ್ಲೂ ತಮ್ಮ ಪಕ್ಷ ಪಕ್ಷ ಅನ್ನೋದು ಇರುತ್ತೆ. ಒಬ್ಬರು ಗೆದ್ದ ಮೇಲೆ ಅದೊಂದು ಧರ್ಮ ಎಲ್ಲರು ಒಗ್ಗಟ್ಟಿನಿಂದಾನೇ ಮುಂದೆ ಹೋಗಬೇಕು, ಅಭಿವೃದ್ಧಿ ಕೆಲಸಗಳನ್ನು ಮಾಡುವುದು. ಅದಕ್ಕೆ ದಾವಣಗೆರೆ ಜನರು, ನಮ್ಮ ದುಗ್ಗಮ್ಮ ದೇವಿ, ಶಾಮನೂರು ಶಿವಶಂಕರಪ್ಪ ತಾತಾರಿಂದ ನಾವೂ ಗೆದ್ದಿದ್ದೀವಿ. ಕೆಲಸಗಳಿಂದ ಮುಂದುವರೆಯೋದು ನಮ್ಮ ಜವಬ್ದಾರಿ. ನಮ್ಮ ವಿರುದ್ಧ ನಿಂತವರಿಗೂ ಹೇಳುತ್ತೀನಿ, ಅದೇನಾದ್ರೂ ಬೇಡಿಕೆ ಇರಲಿ ನಮ್ಮ ಬಳಿ ಬನ್ನಿ. ನಮ್ಮ ಮನೆ ಬಾಗಿಲು, ಆಫೀಸ್ ಬಾಗಿಲು, ನಮ್ಮ ಮನಸ್ಸಿನ ಬಾಗಿಲು ಸದಾ ತೆರೆದಿರುತ್ತದೆ. ಜನಗಳ ಜೊತೆಗೆ ನನ್ನದು ಸ್ನೇಹ ಸಂಬಂಧ. ಅವರ ಜೊತೆಗೂ ಅದೇ ಸ್ನೇಹದ ಸಂಬಂಧವನ್ನು ಗಳಿಸುವ ಆಸೆ ಎಂದಿದ್ದಾರೆ.

ಮೊಮ್ಮಕ್ಕಳಿಗೆ ಅಜ್ಜ ಅಜ್ಜಿ ಗುಣ ಬರುತ್ತೆ ಅಂತಾರೆ. ನಾನು ಹಾಗೇ. ವಾರದ 24 ಗಂಟೆಯೂ ನಾವೂ ಸಿಕ್ಕಿಯೇ ಸಿಕ್ತೀವಿ. ಅಭಿವೃದ್ದಿಗೆ ಜನಸಂಪರ್ಕ ಬಹಳ ಮುಖ್ಯ. ಎಸ್ ಎಸ್ ಮಲ್ಲಿಕಾರ್ಜುನ ಸಾಹೇಬ್ರು ಮಹಿಳಾ ಕಾಲೇಜಿನ ಬಗ್ಗೆ ಹೇಳಿದ್ರು. ಅದು ಜಾರಿಯಾಗುತ್ತೆ ಎಂದಿದ್ದಾರೆ. ಹಾಗೇ ಆಸ್ಪತ್ರೆ ಕೂಡ ಒಂದು ತಿಂಗಳಲ್ಲಿ ಅದರ ಪ್ರೋಗ್ರೆಸ್ ಬಗ್ಗೆ ತಿಳಿಸುತ್ತೇನೆ. ಹೌಸಿಂಗ್ ಅಭಿವೃದ್ಧಿ ಹೆಚ್ಚು ಒತ್ತು ಕೊಡುತ್ತೇವೆ. ಹಕ್ಕುಪತ್ರದ ಸಮಸ್ಯೆ ಕೂಡ ಇದೆ. ಅದೆಲ್ಲವನ್ನು ಗಮನಿಸಿ ಬಗೆಹರಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಮದುವೆ ಬಗ್ಗೆ ಮಾತನ್ನಾಡುತ್ತಾ, ಯಾರಾದ್ರೂ ನೀವೇ ಹುಡುಗಿ ಹುಡುಕಿ ಆಗೋಣಾ. ನಿಮ್ಮ ವಾಹಿನಿಯಲ್ಲಿಯೇ ಜಾಹೀರಾತನ್ನ ಕೊಡೋಣಾ. ಹಾಗೆಲ್ಲಾ ಏನಿಲ್ಲ. ಈ ಎರಡು ವರ್ಷಕ್ಕೆ ದಾವಣಗೆರೆ ದಕ್ಷಿಣಕ್ಕೆ ಮದುವೆ ಮಾಡ್ಸಿಟ್ಟವ್ರೆ ನನ್ನ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.


















