ಬಾಗಲಕೋಟೆ : ಹೆಚ್ ವೈ ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮೇಟಿ ಕುಟುಂಬದವರೇ ಗೆಲುವು ಸಾಧಿಸಿದ್ದಾರೆ. ಉಮೇಶ್ ಮೇಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಇಂದು ಅವರ ನಂಬಿಕೆ ಉಳಿದಿದೆ, ಉಮೇಠ್ ಮೇಟಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಈ ಬಾರಿ ಗೆಲುವು ಸಾಧಿಯೇ ಸಾಧಿಸುತ್ತೇವೆ ಎಂದುಕೊಂಡಿದ್ದ ವೀರಣ್ಣ ಚರಂತಿಮಠ 22,867 ಮತಗಳ ಅಂತರದಲ್ಲಿದ್ದು, ಸೋಲನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಇನ್ನು ಕೇವಲ ಮೂರು ಸುತ್ತುಗಳ ಮತ ಎಣಿಕೆ ಮಾತ್ರ ಬಾಕಿ ಇದೆ. ಇದರಲ್ಲಿ 16,471 ಮತಗಳ ಅಂತರವಿದೆ.
ಪ್ರಾರಂಭಿಕ ಹಂತದಿಂದಾನೂ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಮುನ್ನಡೆ ಸಾಧಿಸುತ್ತಲೆ ಬಂದಿದ್ದಾರೆ. ಉಮೇಶ್ ಮೇಟಿ ಅವರು ಗೆಲುವ ಕಂಡಂತೆಯೇ ಸರಿ. ಯಾಕಂದ್ರೆ ಕೇವಲ ಮೂರು ಸುತ್ತಿನ ಮತ ಎಣಿಕೆ ಮಾತ್ರ ಇದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಬಿಜೆಪಿ ಅಭ್ಯರ್ಥಿ ಚರಂತಿಮಠ ಕೂಡ ಗೆಲ್ಲುವಂತಹ ಅಭ್ಯರ್ಥಿಯೇ ಆಗಿದ್ದರು. ಎರಡು ಪಕ್ಷಗಳಿಗೂ ಗೆಲುವು ಬಹಳ ಮುಖ್ಯವಾಗಿತ್ತು. ಹೀಗಾಗಿ ಪ್ರಚಾರ ಕೂಡ ಜೋರಾಗಿಯೇ ನಡೆದಿತ್ತು.
ಕಾಂಗ್ರೆಸ್ ನಲ್ಲಿ ಇನ್ನು ಹೆಚ್ಚಿನ ಪ್ರಚಾರ ಕಾರ್ಯ ನಡೆದಿತ್ತು. ಸುಮಾರು ಒಂದು ವಾರಗಳ ಕಾಲ ಸಿಎಂ ಸಿದ್ದರಾಮಯ್ಯ ಅವರು ಕೂಡ ಅಲ್ಲಿಯೇ ಉಳಿದು ಪ್ರಚಾರ ನಡೆಸಿದ್ದರು. ಅನುಕಂಪದ ಅಲೆಗಿಂತ ಗ್ರೌಂಡ್ ಲೆವೆಲ್ ನಲ್ಲಿ ಕಾಂಗ್ರೆಸ್ ಪ್ರಚಾರ ಮಾಡಿರುವುದೇ ಉಮೇಶ್ ಮೇಟಿ ಅವರ ಗೆಲುವಿಗೆ ಕಾರಣ ಎನ್ನಲಾಗಿದೆ. ಅದರಲ್ಲೂ ಅಲ್ಪಸಂಖ್ಯಾತರಾಗಿರಬಹುದು, ಮಹಿಳೆಯೆ ಮತ ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.


















