Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆದರಿಕೆ, ಮನೆ ಮುಂದೆ ಗಲಾಟೆ : ಸಾರಾ ಗೋವಿಂದು ವಿರುದ್ಧ ಎಫ್ಐಆರ್ ದಾಖಲು..!

---Advertisement---

ಬೆಂಗಳೂರು: ಅಣ್ಣಾವ್ರ ಸ್ಮಾರಕದ ಬಗ್ಗೆ ಮಾತನ್ನಾಡಿದ್ದ ನಟ ಚೇತನ್ ವಿರುದ್ಧ ಸಾರಾ ಗೋವಿಂದು ಆಕ್ರೋಶ ಹೊರ ಹಾಕಿದ್ದರು. ಅವರ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದರು. ಈ ಸಂಬಂಧ ಸಾರಾ ಗೋವಿಂದು ವಿರುದ್ಧ ಎಫ್ಐಆರ್ ದಾಖಲಾಗಿದೆ. ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಅಣ್ಣಾವ್ರ ಸಮಾಧಿ ಜಾಗದ ಬಗ್ಗೆ ಪ್ರಶ್ನೆ ಮಾಡಿ ಹಾಕಿದ್ದ ಪೋಸ್ಟ್ ಗೆ ಯಾರೆಲ್ಲಾ ವಿರೋಧ ವ್ಯಕ್ಯಪಡಿಸಿದ್ರು, ಯಾರೆಲ್ಲಾ ತನ್ನ ವಿರುದ್ಧವಾಗಿ ಆಕ್ರೋಶ ಹೊರ ಹಾಕಿದರು ಅವರೆಲ್ಲರ ಮೇಲೆ ಚೇತನ್ ಅಹಿಂಸಾ ಇಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಹೋಗಿ, ಸಾರಾ ಗೋವಿಂದು, ಶಿವರಾಮೇಗೌಡ, ಶಿವಕುಮಾರ್ ನಾಯ್ಕ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಮನೆಯ ಬಳಿ ಸಾರಾ ಗೋವಿಂದು ಅವರ ಜೋರು ಗಲಾಟೆಯನ್ನು ಮಾಡಿದ್ದರು. ಹೀಗಾಗಿ ಆ ಸಂಬಂಧ ದೂರು ದಾಖಲು ಮಾಡಿದ್ದಾರೆ.

ಸಾ.ರಾ ಗೋವಿಂದು ಮನೆ ಹತ್ರ ಬಂದಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ರು. ಸಾರಾ ಗೋವಿಂದು ಹಿನ್ನೆಲೆಯೇ ಬೇರೆ ಇದೆ. ಅವರು ದುರಹಂಕಾರದಲ್ಲಿ ಮತ್ತು ಗೂಂಡಾಗಿರಿ ಮಾಡ್ತಿದ್ದಾರೆ. ಎಲ್ಲಾ ಸಂಘಟನೆಗಳು ಸೇರಿ ದಾಖಲೆ ಸಮೇತ ದೂರು ನೀಡಿದ್ದೇವೆ ಅಂತ ನಟ ಚೇತನಾ ಅಹಿಂಸಾ ತಿಳಿಸಿದ್ರು.

ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಚೇತನ್ ಅಹಿಂಸಾ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚೇತನ್ ಅಹಿಂಸಾ ಸಾಕಷ್ಟು ಜನರ ವಿರೋಧವನ್ನು ಎದುರಿಸಿದ್ದರು. ಈ ಸಂಬಂಧ ಚೇತನ್ ಕ್ಷಮೆಯನ್ನು ಕೇಳಿದ್ದರು. ಆದರೆ ಇದೀಗ ದೂರು ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...