Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಲ್ಲ ಕ್ಷೇತ್ರಕ್ಕೂ ದಾಪುಗಾಲಿಟ್ಟಿದೆ ಎಐ: ಟಿ.ದಿಲೀಪ್‌ ಕುಮಾರ್

---Advertisement---

ಸುದ್ದಿಒನ್, ನಾಯಕನಹಟ್ಟಿ, ಮೇ. 02  : ಮಾರುಕಟ್ಟೆ ವ್ಯವಸ್ಥೆಗೆ ತಕ್ಕಂತೆ ವಿದ್ಯಾಭ್ಯಾಸದ ವಿಧಾನಗಳು ಬದಲಾಗುತ್ತಿವೆ ಎಂದು ಬೆಂಗಳೂರಿನ ಶೈಕ್ಷಣಿಕ ಕೌಶಲ್ಯ ಸಲಹೆಗಾರ ಟಿ.ದಿಲೀಪ್‌ ಕುಮಾರ್ ಹೇಳಿದ್ದಾರೆ.

ಶನಿವಾರ ಪಟ್ಟಣ ವಿದ್ಯಾವಿಕಾಸ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಎಐ ಯುಗದಲ್ಲಿ ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬ ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐಟಿ, ಬಿಟಿ ನಂತರ ಇದೀಗ ಎಲ್ಲೆಡೆ ಕೃತಕ ಬುದ್ದಿಮತ್ತೆ (ಎಐ) ಎಲ್ಲೆಡೆ ವ್ಯಾಪಿಸುತ್ತಿದೆ. ಐದು ವರ್ಷಗಳ ಹಿಂದೆ ಎಐ ಬಗ್ಗೆ ಸಣ್ಣ ಪ್ರಮಾಣದಲ್ಲಿ ಕಲಿಕೆ ಆರಂಭಿಸಲಾಗಿತ್ತು. ಸಾಫ್ಟ್ ವೇರ್ ಕಂಪನಿಗಳ ಸಂಶೋಧನಾ ವಿಭಾಗದಲ್ಲಿ ಇದರ ಬಗ್ಗೆ ಹೆಚ್ಚಿನ ಕುತೂಹಲವಿತ್ತು. ಅಪಾರ ಪ್ರಮಾಣದಲ್ಲಿನ ದತ್ತಾಂಶಗಳನ್ನು ಸಂಗ್ರಹಿಸಿ ನೀಡಿದಾಗ ಕಂಪ್ಯೂಟರ್ ನಿರ್ಣಯ ಅಥವ ಪರಿಹಾರಗಳನ್ನು ಒದಗಿಸುತ್ತದೆ. ಎಐ ಇದೀಗ ಕಂಪ್ಯೂಟರನ್ನು ಬಳಸುವ ಎಲ್ಲ ಕ್ಷೇತ್ರಗಳಲ್ಲಿ ಎಐ ಕಾಲಿಟ್ಟಿದೆ. ಮುದ್ರಣ, ಪತ್ರಿಕೆ, ಕಾರ್ಖಾನೆ, ಸಾಗಣಿಕೆ, ಸಂವಹನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಐ ಪ್ರಭಾವವನ್ನು ಕಾಣಬಹುದಾಗಿದೆ. ಡಿಜಿಟಲ್ ಯುಗದಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಎಐ ದಾಪುಗಾಲಿಡುತ್ತಿದೆ. ಇದು ಪೂರಕ ಅಥವ ಮಾರಕ ಎನ್ನುವುದು ಮುಖ್ಯವಲ್ಲ. ಆದರೆ ಇದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಅವಕಾಶಗಳಿವೆ ಎಂದರು.

ಬ್ಯಾಚುಲರ್ ಆಫ್ ಕಾರ್ಡಿಯೋ ಟೆಕ್ನೋಲಚಿ ಎನ್ನುವ ಕೋರ್ಸ್ ಅತಿಹೆಚ್ಚಿನ ಅವಕಾಶಗಳನ್ನು ಹೊಂದಿದೆ. ಹೀಗೆ ಫಾರ್ಮಸಿ, ಔಷಧ ಕ್ಷೇತ್ರದಲ್ಲಿ ಸಂಶೋಧನೆ, ನರ್ಸಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ಮತ್ತು ಉತ್ತಮ ಗಳಿಕೆಗೆ ದಾರಿಗಳಿವೆ. ಎಲ್ಲರೂ ಸೀಮಿತವಾಗಿ ಡಾಕ್ಟರ್ ಮತ್ತು ಇಂಜಿನಿಯರ್‌ಗಳಾಗುವ ಬಗ್ಗೆ ಚಿಂತನೆ ಮಾಡುವುದು ಸರಿಯಲ್ಲ. ಭವಿಷ್ಯದ ಚಿಂತನೆಗಳಿಗೆ ಆಯಾಕ್ಷೇತ್ರಗಳಲ್ಲಿರುವವರು ಮತ್ತು ಶಿಕ್ಷಕರ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಅಂಗಡಿ,ಮುಂಗಟ್ಟುಗಳ ಮುಂದೆ ಮಾತನಾಡುವವರು ಹೇಳಿಕೆಗಳ ಬದಲಾಗಿ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಇರುವ ವ್ಯಕ್ತಿಗಳಿಂದ ಸಲಹೆ ಪಡೆದುಕೊಳ್ಳಬೇಕು. ಹೊಸ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮುಂಚೆ ತನ್ನ ಇಷ್ಟ, ಆಸಕ್ತಿ ಮತ್ತು ಗುರುತಿಸಿಕೊಳ್ಳುವಿಕೆಯ ಬಗ್ಗೆ ಸ್ಪಷ್ಟತೆ ಇರಬೇಕು. ಬೇರೆಯವರ ಒತ್ತಡಕ್ಕೆ ಒಳಗಾಗಿ ಅಭ್ಯಾಸದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದರು.

ಮಾದಾರ ಚನ್ನಯ್ಯ ಗುರುಪೀಠದ ಸಿಇಒ ಹೆಚ್.ಎಸ್.ರಾಘವೇಂದ್ರ ಮಾತನಾಡಿ, ಹಣವನ್ನು ಬ್ಯಾಂಕ್ ನಲ್ಲಿರಿಸಿದಾಗ ಬಡ್ಡಿ ನೀಡುವಂತೆ ನಾವು ಜ್ಞಾನವನ್ನು ತೊಡಗಿಸಿಕೊಂಡಾಗ ಅದು ಗಳಿಕೆಯಾಗಿ ಪರಿವರ್ತನೆಯಾಗುತ್ತದೆ. ಇದೀಗ ಶಿಕ್ಷಣ ಮತ್ತು ಜ್ಞಾನವನ್ನು ಠೇವಣೆಯನ್ನಾಗಿ ನೀಡುವ ಅವಶ್ಯಕತೆಯಿದೆ. ಕೇವಲ ಬಿಎ, ಬಿಎಸ್ಸಿಗಳಿಂದ ಇದೀಗ ಜೀವನ ಸಾಧ್ಯವಿಲ್ಲ. ಉತ್ತಮ ಜೀವನಕ್ಕಾಗಿ ಕೌಶಲ್ಯ ಮತ್ತು ಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರ ಸರಕಾರದ ಕೌಶಲ್ಯತರಬೇತಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಟಿಟಿಸಿ ನಂತರ ಇಂಜಿನಿಯರಿಂಗ್ ಗೆ ಅವಕಾಶಗಳಿವೆ ಎಂದು ಹೇಳಿದರು.

ಸರಕಾರಿ ಶಾಲೆಯ ಶಿಕ್ಷಕಿ ಚಂದನ ಮಾತನಾಡಿ, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟ ಚಿಂತನೆಗಳು ಇರುವುದಿಲ್ಲ. ಇಂಥಹ ಕಾರ್ಯಕ್ರಮಗಳು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಲುಪಬೇಕು ಎಂದರು. ಮುಖ್ಯ ಶಿಕ್ಷಕಿಯರಾದ ಎ.ಉಮಾ, ಟಿ.ರೂಪ, ಮಹಾಂತೇಶ್, ಅಭಿಷೇಕ ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...