ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಕೂದಲಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಗಮನ ಸೆಳೆಯುತ್ತಿದೆ. ಹಿಂದೆ ಒಂದು ಕೆಜಿ ಕೂದಲಿಗೆ ₹3,000 ಇದ್ದ ಬೆಲೆ ಈಗ ₹3,500ಕ್ಕೂ ಮೀರಿದ್ದು, ಇದರಿಂದ ಬೀದಿ ಬೀದಿಗಳಲ್ಲಿ ಕೂದಲು ಸಂಗ್ರಹಿಸುವವರ ಸಂಖ್ಯೆಯೂ ಹೆಚ್ಚಾಗಿದೆ.ಈ ನಡುವೆಯೇ, ಜ್ಯೋತಿಷ್ಯ ವಲಯದಿಂದ ಹೊಸ ಎಚ್ಚರಿಕೆ ಕೇಳಿಬಂದಿದೆ. ಕೂದಲು ಮಾರಾಟ ಮಾಡುವುದರಿಂದ ಮನೆ ಮತ್ತು ವೈಯಕ್ತಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೆಲ ಜ್ಯೋತಿಷಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಚರ್ಚೆಗೆ ಗ್ರಾಸವಾಗಿವೆ.
ವಿಡಿಯೋದಲ್ಲಿನ ಮಾಹಿತಿ ಪ್ರಕಾರ, ಮಹಿಳೆಯರು ತಮ್ಮ ಕೂದಲನ್ನು ಅಪರಿಚಿತರಿಗೆ ನೀಡುವುದು ಮನೆಯ ಪ್ರಗತಿಗೆ ಅಡ್ಡಿಯಾಗಬಹುದು ಎಂದು ಹೇಳಲಾಗಿದೆ. ಇಂತಹ ಮನೆಗಳಲ್ಲಿ ಆರ್ಥಿಕ ಹಾಗೂ ವೈಯಕ್ತಿಕ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಮಹಿಳೆಯರ ಕೂದಲಿನಲ್ಲಿ ಅವರ ‘ಆಭಶಕ್ತಿ’ ಅಡಗಿದೆ ಎಂದು ಪರಿಗಣಿಸಲಾಗುತ್ತದೆ. ಉದುರಿದ ಅಥವಾ ಕತ್ತರಿಸಿದ ಕೂದಲಿನಲ್ಲೂ ವ್ಯಕ್ತಿಯ ಶಕ್ತಿ ಉಳಿದಿರುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇದರಿಂದ ಕೆಲವರು ಈ ಕೂದಲನ್ನು ತಾಂತ್ರಿಕ ಅಥವಾ ನಕಾರಾತ್ಮಕ ಕಾರ್ಯಗಳಿಗೆ ಬಳಸುವ ಸಾಧ್ಯತೆ ಇದೆ ಎಂಬ ಭೀತಿಯನ್ನೂ ಉಲ್ಲೇಖಿಸಲಾಗಿದೆ.
ಶಾಸ್ತ್ರೀಯ ನಂಬಿಕೆಗಳ ಪ್ರಕಾರ, ಕೂದಲು ಕೇವಲ ಸೌಂದರ್ಯದ ಅಂಶವಲ್ಲ, ಅದು ‘ಪ್ರಾಣಶಕ್ತಿ’ಯೊಂದಿಗೂ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಚಂದ್ರ ಮತ್ತು ಶುಕ್ರ ಗ್ರಹಗಳೊಂದಿಗೆ ಕೂದಲಿನ ಸಂಬಂಧವಿದೆ ಎಂಬ ನಂಬಿಕೆಯಿದ್ದು, ಕೂದಲು ಮಾರಾಟ ಮಾಡುವುದರಿಂದ ಈ ಗ್ರಹಗಳ ಪ್ರಭಾವ ದುರ್ಬಲಗೊಳ್ಳಬಹುದು ಎಂದು ಕೆಲವರು ಹೇಳುತ್ತಾರೆ.ಆದರೆ, ಈ ಎಲ್ಲವು ಜ್ಯೋತಿಷ್ಯ ನಂಬಿಕೆಗಳ ಆಧಾರಿತ ಅಭಿಪ್ರಾಯಗಳಾಗಿದ್ದು, ವಿಜ್ಞಾನಾಧಾರಿತ ದೃಢೀಕರಣ ಇಲ್ಲ ಎಂಬುದನ್ನೂ ಗಮನಿಸಬೇಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











