ಮೈಸೂರು: ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ. ಗೊಂದಲ ನಿವಾರಣೆಯಲ್ಲಿ ಇವರು ಕೂಡ ಪಾತ್ರ ವಹಿಸ್ತಾರೆ. ಆದ್ರೆ ಈಗ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಬದಲಾವಣೆ ವಿಚಾರ ಸದ್ಯಕ್ಕೆ ಇಲ್ಲ. ಸಿಎಂ ಇದ್ದಾರೆ ಅಲ್ವಾ ಎಂಬ ಮಾತನ್ನ ಹೇಳಿದ್ದಾರೆ. ಇದು ಸಿಎಂ ಆಕಾಂಕ್ಷಿಗಳ ಮನಸ್ಸಿಗೆ ದೊಡ್ಡ ಘಾಸಿ ಮಾಡಿದೆ. ಈ ಮಾತಿನಿಂದ ಡಿಕೆ ಸಂಗಡಿಗರ ಧ್ವನಿ ಬದಲಾಯ್ತಾ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಉದಾಹರಣೆಯೂ ಇಲ್ಲಿದೆ.
ಅಧಿಕಾರ ಹಸ್ತಾಂತರದ ಬಗ್ಗೆ ಸಚಿವ ಚಲುವರಾಯಸ್ವಾಮಿ ಅವರು ಮಾತನ್ನಾಡುತ್ತಾ, ಅಧಿಕಾರ ಹಸ್ತಾಂತರ ಮಾಡಬೇಕಿರುವುದು ಹೈಕಮಾಂಡ್ ನಾಯಕರು. ಸಿಎಂ, ಡಿಸಿಎಂ, ಎಐಸಿಸಿ ಅಧ್ಯಕ್ಚರು ಕೂತು ಮಾತನ್ನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ನಾವೂ ಯಾರೇ ಮಾತನ್ನಾಡಿದರು ಏನು ಆಗಲ್ಲ. ಜನರ ಎದುರಿಗಿರುವ ಸವಾಲುಗಳು ಮುಖ್ಯವೇ ವಿನಃ ಒಳಗಿರುವ ಸಮಸ್ಯೆಗಳಲ್ಲ. ಸಣ್ಣ ಪಕ್ಷ ಜೆಡಿಎಸ್ ನಲ್ಲಿ ಇಲ್ವಾ. ಹಾಗೇ ಕಾಂಗ್ರೆಸ್ ನಲ್ಲೂ ಇದೆ.

ಬಿಜೆಪಿಯಲ್ಲಿ ಅಧಿಕಾರ ಇಲ್ಲದೆ ಇದ್ದಾಗಲೆ ಇಷ್ಟೊಂದು ಆಂತರಿಕ ಕಿತ್ತಾಟವಿದೆ. ನಮ್ಮಲ್ಲಿ ಏನು ಇಲ್ಲ. ಬೆಳಗ್ಗೆ ಆದ್ರೆ ಸಿಎಂ ಹಾಗೂ ಡಿಸಿಎಂ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡ್ತಾರೆ. ಮಾಧ್ಯಮದವರಿಗೂ ಕೆಲವರು ತಪ್ಪು ಮಾಹಿತಿ ಕೊಡ್ತಾ ಇದ್ದಾರೆ. ಅಧ್ಯಕ್ಷರು ನಾಳೆ ಮೀಟಿಂಗ್ ಕರೀತಾರೆ ಅಂದ್ರೆ ದೆಹಲಿಗೆ ಹೋದ ಕೂಡಲೇ ಮೀಟಿಂಗ್ ಮಾಡ್ಬೇಕು. ಅದರ ವಿಚಾರ ಹೈಕಮಾಂಡ್ ಅವರದ್ದು ಎಂಬ ಮಾತನ್ನ ಹೇಳಿದ್ದಾರೆ. ಈ ಮೂಲಕ ಎಲ್ಲರೂ ಸಿಎಂ ಬದಲಾವಣೆ ಬಗ್ಗೆ ಮಾತನ್ನಾಡೋದನ್ನ ನಿಲ್ಲಿಸ್ತಾ ಇದ್ದಾರಾ ಎಂಬ ಪ್ರಶ್ನೆ ಕಾಡೋದಕ್ಕೆ ಶುರುವಾಗಿದೆ.



















