Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಲ್ಲಿಕಾರ್ಜುನ ಖರ್ಗೆ ಮಾತಿನ ಅರ್ಥವೇನು : ಡಿಕೆ ಸುರೇಶ್ ಅವರು ಹೇಳಿದ್ದೇನು..?

---Advertisement---

 

ಬೆಂಗಳೂರು: ಮೇ 15 ಕ್ಕೆ ಡಿಕೆ ಸುರೇಶ್ ಅವರ ಹುಟ್ಟುಹಬ್ಬ. ಅಂದಾದರೂ ಸಿಎಂ ಸ್ಥಾನದ ಬಗ್ಗೆ ಗುಡ್ ನ್ಯೂಸ್ ಸಿಗುತ್ತೆ ಅಂತಾನೇ ಅಭಿಮಾನಿಗಳು ಕಾಯ್ತಾ ಇದ್ದರು. ಅಷ್ಟೆ ಯಾಕೆ ಪಕ್ಷದಲ್ಲಿನ ಕೆಲವು ಶಾಸಕರು ಕಾಯ್ತಾ ಇದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರೇ ಇತ್ತೀಚೆಗೆ ಈ ವಿಚಾರದಲ್ಲಿ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಸಿಎಂ ಬದಲಾವಣೆಯ ಆಲೋಚನೆ ಇಲ್ಲ ಎಂಬ ಮಾತನ್ನ ಹೇಳಿದ್ದಾರೆ. ಈ ಬಗ್ಗೆ ಡಿಕೆ ಸುರೇಶ್ ಹೇಳಿದ್ದು ಹೀಗೆ.

ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಅಧ್ಯಕ್ಷರು ಏನು ಹೇಳ್ತಾರೆ ಅದರಂತೆ ಪಕ್ಷ ಕೇಳುತ್ತೆ. ಜನಾಶೀರ್ವಾದ ಮಾಡಿದ್ದಾರೆ ಅದರಂತೆ ನಾವೂ ಕೆಲಸ ಮಾಡ್ತಾ‌ಇದ್ದೀವಿ. ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ಬದ್ಧರಾಗಿರುತ್ತೇವೆ. ಗೊಂದಲ ಏನಿಲ್ಲ, ಎಲ್ಲವೂ ಕೂಡ ಪಕ್ಷದ ಹೈಕಮಾಂಡ್ ನಂತೆಯೇ ನಡೆಯುತ್ತದೆ ಎಂದಿದ್ದಾರೆ.

ಇದೇ ವೇಳೆ ಎಲ್ಪಜಿ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಮಾತನ್ನಾಡಿ, ಕಮರ್ಷಿಯಲ್ ಒಂದೇ ಅಲ್ಲ ಮುಂದಿನ ದಿನಗಳಲ್ಲಿ ಸಾಕಷ್ಟು ಬೆಲೆ ಏರಿಕೆ ಬಿಸಿ ತಟ್ಟುತ್ತದೆ. ಅದರ ಬಗ್ಗೆ ಪ್ರಧಾನಿ‌ಮೋದಿ ಅವರು ಉತ್ತರ ಕೊಡಬೇಕು. ಅಚ್ಛೆದಿನ ಬಗ್ಗೆ ಮಾತನ್ನಾಡ್ತಾರೆ. ಆದರೆ ರಾಷ್ಟ್ರದ ಜನರ ಸಂಕಷ್ಟವನ್ನು ಯಾವ ರೀತಿ ಬಗೆಹರಿಸಬೇಕು ಅನ್ನೋದನ್ನ ಅವರೇ ಹೇಳಿದರೆ ಒಳ್ಳೆಯದು. ಏನೇನು ಬದಲಾವಣೆ ಆಗುತ್ತವೆ ಎಂಬುದನ್ನ ಕಾದು ನೋಡಬೇಕಿದೆ. ಗ್ಯಾಸ್ ಸಿಗದೆ ಇರುವ ಸಮಸ್ಯೆ, ಏರಿಕೆ ಸಮಸ್ಯೆಗೆಲ್ಲಾ ಉತ್ತರ ಕೊಡಬೇಕಾಗಿದೆ ಎಂದು ಮೋದಿ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...