Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಂಗಾರು ಬೆಳೆಗಾಗಿ ‘ಮಾಗಿ ಉಳುಮೆ’ ಮಹತ್ವ: ರೈತರಿಗೆ ಕೃಷಿ ಇಲಾಖೆಯ ಜಾಗೃತಿ ಸಂದೇಶ

---Advertisement---

 

ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 30 : ಮಾಗಿ ಉಳುಮೆ (ಬೇಸಿಗೆ ಉಳುಮೆ) ಮುಂಗಾರು ಹಂಗಾಮಿಗೆ ಮುನ್ನ ಭೂಮಿಯನ್ನು ಸಿದ್ಧಪಡಿಸುವ, ಕಳೆ-ಕೀಟ ನಿಯಂತ್ರಿಸುವ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ಪ್ರಮುಖ ಪಾರಂಪರಿಕ ಕೃಷಿ ಪದ್ಧತಿಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಟಿ.ರಮೇಶ ಹೇಳಿದರು.

ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ರೈತರಿಗೆ ಮಾಗಿ ಉಳುಮೆ ಕುರಿತು ಮಾತನಾಡಿದ ಅವರು ಮುಂಗಾರು ಹಂಗಾಮು ಪ್ರಾರಂಭವಾದ ತಕ್ಷಣವೇ ರೈತರು ತಮ್ಮ ಜಮೀನುಗಳಲ್ಲಿ ಮಾಗಿ ಉಳಿಮೆ ಮಾಡಿಕೊಂಡರೆ ಮಾಗಿ ಉಳಿಮೆಯಿಂದ ಸಾಕಷ್ಟು ಅನುಕೂಲಗಳಿವೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿ, ಮಣ್ಣನ್ನು ಸಡಿಲಗೊಳಿಸಿ ಬೆಳೆಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುತ್ತದೆ. ಅಷ್ಟೆ ಅಲ್ಲದೆ ಮಣ್ಣಿನ ಆಳದಲ್ಲಿರುವ ಕಳೆ ಬೇರುಗಳು, ಗರಕೆ ಮತ್ತು ಜೇಕಿನ ಗಡ್ಡೆಗಳು ಬಿಸಿಲಿಗೆ ಒಣಗಿ ನಾಶವಾಗುತ್ತವೆ. ಮತ್ತು ಮಣ್ಣಿನಲ್ಲಿ ಅಡಗಿರುವ ಕೀಟಗಳ ಕೋಶಗಳು ಮತ್ತು ರೋಗಾಣುಗಳು ಸೂರ್ಯನ ತಾಪಕ್ಕೆ ತುತ್ತಾಗಿ ಸಾಯುತ್ತವೆ, ಇದರಿಂದ ಮುಂದಿನ ಬೆಳೆಯ ಮೇಲೆ ಕೀಟಬಾಧೆ ಕಡಿಮೆಯಾಗುತ್ತದೆ.

 

ಭೂಮಿಯನ್ನು ತಿರುವಿ ಹಾಕುವುದರಿಂದ ಗಾಳಿ ಚೆನ್ನಾಗಿ ಆಡಿ, ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಸುಧಾರಿಸುತ್ತವೆ.‌
ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಳೆಗಾಲದಲ್ಲಿ ಮಣ್ಣು ಕೊಚ್ಚಿ ಹೋಗುವುದು ತಪ್ಪುತ್ತದೆ. ಕಟಾವಿನ ನಂತರ ಹೊಲದಲ್ಲಿ ಉಳಿದಿರುವ ಬೆಳೆಯ ತ್ಯಾಜ್ಯಗಳಾ ಒಣ ಹುಲ್ಲು, ಕಡಿ.ಕಸ ಮಣ್ಣಿನಲ್ಲಿ ಕೊಳೆತು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತವೆ.

ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ಧಗೊಳಿಸುವ ‘ಮಾಗಿ ಉಳುಮೆ’ ಪಾರಂಪರಿಕ ಕೃಷಿ ವಿಧಾನ. ಈ ವಿಧಾನ ವೈಜ್ಞಾನಿಕವು ಆಗಿದೆ. ಆದುದರಿಂದ ಮುಂಗಾರ ಮಳೆ ಬಂದ ತಕ್ಷಣವೇ ಮಾಗಿ ಉಳುಮೇ ಮಾಡಿಕೊಳ್ಳುವುದು. ಸೂಕ್ತ ಎಂದು ರೈತರಿಗೆ ಸಂಪೂರ್ಣ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಮಜೋಗಿಹಳ್ಳಿ ಗ್ರಾಮಸ್ಥರಾದ ಜಯರಾಂರೆಡ್ಡಿ, ಬೀಮರೆಡ್ಡಿ, ಪ್ರಭಾಕರ್ ರೆಡ್ಡಿ, ಮಂಜುನಾಥ ರೆಡ್ಡಿ, ಬಾಲಚಂದ್ರ ರೆಡ್ಡಿ, ಎಂಜಿ.ವೆಂಕಟೇಶ ರೆಡ್ಡಿ, ಪಿಟಿ. ಸಂತೋಶ ,ಪಿ.ರಮೇ ಶ ಡಿ.ರಂಗಪ್ಪ,ಸ್ವಾಮಿ ಎಸ್.ಓ. ಬಸವರಾಜ್ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂದಿಗಳು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...