ಬೆಂಗಳೂರು: ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಮತ್ತು ಮೇಕೆದಾಟು ವಿಚಾರದಲ್ಲಿ ಸಭೆಯನ್ನ ಕರೆದಿದ್ದೆ. ನಾನು, ರೆವಿನ್ಯೂ ಮಿನಿಸ್ಟರ್, ಫಾರೆಸ್ಟ್ ಮಿನಿಸ್ಟರ್ ಇಷ್ಟು ಜನ ಕೂತು ಚರ್ಚೆ ಮಾಡಿದ್ದೇವೆ. ಎತ್ತಿನ ಹೊಳೆ ಯೋಜನೆಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯಿಂದ ಆಗಬೇಕಾದ ಕ್ಲಿಯರೆನ್ಸ್ ಗೆ ಒಂದಷ್ಟು ಕಂಡಿಷನ್ ಗಳನ್ನ ಹಾಕಿ, ಸೆಂಟ್ರಲ್ ಗವರ್ನಮೆಂಟ್ ಅವರು ಕಳುಹಿಸಿದ್ರು ಎಂದಿದ್ದಾರೆ.
ಆ ಜಮೀನೆಲ್ಲಾ ಕೊಡೋದಕ್ಕೆ ರೆವಿನ್ಯೂ ಇಲಾಖೆ, ಫಾರೆಸ್ಟ್ ಇಲಾಖೆಯಿಂದ ತಯಾರಿ ನಡೀತಾ ಇದೆ. 10% ಉಳಿದುಕೊಂಡಿತ್ತು. ಅದಕ್ಕೂ ರೆವಿನ್ಯೂ ಇಲಾಖೆ ಒಪ್ಪಿಕೊಂಡಿದೆ. ಈ ವಾರದಲ್ಲಿಯೇ ಜಮೀನನ್ನು ಟ್ರಾನ್ಸ್‌ಫರ್ ಮಾಡ್ತೇವೆ. ನಿನ್ನೆ ನಮಗೆ 257 ಕೋಟಿ ರೂಪಾಯಿ ಕೊಡಬೇಕು ಅಂತೇಳಿ ಮೆಟಿಕೇಷನ್ ಪ್ಲ್ಯಾನ್ ಅನ್ನು ಅರಣ್ಯ ಇಲಾಖೆ ಅವರು ಕೊಟ್ಟಿದ್ದಾರೆ. ಹಣವನ್ನು ಇವತ್ತೆ ಕಟ್ಟುವುದಕ್ಕೆ ಮಾರ್ಗದರ್ಶನ ನೀಡಿದ್ದೇವೆ. ಈ ವಾರದಲ್ಲಿಯೇ ಕಾಂಟ್ರಾಕ್ಟರ್ ಗಳಿಗೂ ಕೆಲಸ ಪ್ರಾರಂಭಿಸಲು ಹೇಳಿದ್ದೇವೆ.

ತುಮಕೂರಿನ ಜಮೀನಿನ ವಿಚಾರ ಏನಿದೆ ಅದನ್ನು ಸರ್ವೇ ಮಾಡೋದಕ್ಕೂ ಸೂಚನೆ ನೀಡಿದ್ದೇವೆ. ಆದಷ್ಟು ಬೇಗ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ಯಾವ ಕ್ರಮ ವಹಿಸಬೇಕೋ ಅದನ್ನ ಮಾಡ್ತೇವೆ. ಮೇಕೆದಾಟಿಗೆ ಸಂಬಂಧಪಟ್ಟಂತೆ ಈಗಾಗಲೆರ ಡಿಪಿಆರ್ ಸಿದ್ಧತೆಯಾಗಿದೆ. ಎಲ್ಲವನ್ನು ಕೂಡ ಫೈಲ್ ಮಾಡಿ, ಸಬ್ಮಿಟ್ ಮಾಡುತ್ತೇವೆ. ಸುಮಾರು 5300 ಹೆಕ್ಟೇರ್ ಜಮೀನನ್ನು ಅರಣ್ಯ ಇಲಾಖೆ ಅವರಿಗೆ ಕೊಡಬೇಕಾಗುತ್ತದೆ. ಅದನ್ನು ಕೂಡ ಮಾತನ್ನಾಡಿದ್ದೇವೆ. ಕೃಷ್ಣಭೈರೇಗೌಡ ಅವರ ಬಳಿ ಚರ್ಚೆ ಮಾಡ್ತಾ ಇದ್ದೇನೆ. ಎಲ್ಲೆಲ್ಲಿ ಫಾರೆಸ್ಟ್ ಗೆ ಕೊಡುವ ಜಮೀನು ಇದೆ ಅದೆಲ್ಲವನ್ನು ಲೀಸ್ಟ್ ಮಾಡಿಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ ಎಂಬುದನ್ನ ತಿಳಿಸಿದ್ದಾರೆ.



















