ಬೆಂಗಳೂರು: ಎರಡೂವರೆ ವರ್ಷ ಆದ್ಮೇಲೆ ಸಿಎಂ ಸ್ಥಾನವನ್ನ ನನಗೆ ಬಿಟ್ಟು ಕೊಡ್ತೀನಿ ಅಂತ ಹೇಳಿದ್ದರು ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೋರಾಡ್ತಾ ಇದ್ದಾರೆ. ಇರುವ ಕಡಿಮೆ ಸಮಯದಲ್ಲಾದರೂ ಸಿಎಂ ಖುರ್ಚಿ ಮೇಲೆ ಕೂರಬೇಕು ಎಂಬ ಹಂಬಲವಿದೆ. ಅದಕ್ಕಾಗಿ ಹೈಕಮಾಂಡ್ ಭೇಟಿಗೆ ಓಡಾಟ ಮಾಡ್ತಾನೆ ಇದ್ದಾರೆ. ಆದರೂ ಯಾವುದೇ ಪ್ರಯೋಜನ ಆಗ್ತಾ ಇಲ್ಲ. ಇದರ ನಡುವೆ ದಲಿತ ಸಿಎಂ ಕೂಗು ಕೂಡ ಜೋರಾಗಿದೆ. ಬಹಳಷ್ಟು ವರ್ಷಗಳಿಂದ ಕೇಳಿಕೊಂಡೇ ಬರ್ತಾ ಇದ್ದೇವೆ. ಈ ಬಾರಿ ಸಿಎಂ ಬದಲಾಗುವುದಾದರೇ ದಲಿತರಿಗೆ ಆ ಸ್ಥಾನ ಕೊಡಿ ಅಂತ. ಇದೆಲ್ಲಾ ಬೆಳವಣಿಗೆಯ ನಡುವೆ ಲಿಂಗಾಯತ ಸಿಎಂ ಬೇಡಿಕೆ ಏನಾದ್ರು ಇದ್ಯಾ ಸರ್ ಎಂಬ ಪ್ರಶ್ನೆಗೆ ಎಂ.ಬಿ.ಪಾಟೀಲ್ ಉತ್ತರ ಕೊಟ್ಟಿದ್ದು ಹೀಗೆ.
ಯಾರೂ ಆ ಕೂಗನ್ನು ಹಬ್ಬಿಸಿದ್ದಾರೆ ಅದಕ್ಕೆಲ್ಲಾ ಹೈಕಮಾಂಡ್ ಉತ್ತರವನ್ನು ಕೊಡುತ್ತೆ. ಲಿಂಗಾಯತರಿಗೆ ಮಾಡಿ, ಮತ್ತೊಂದಕ್ಕೆ ಮಾಡಿ ಎಂಬುದನ್ನ ನಮ್ಮ ಬೇಡಿಕೆ ಏನಿದೆ ಅದನ್ನ ಇಡಬಹುದು ಅಷ್ಟೆ. ತಪ್ಪೇನಿಲ್ಲ. ಆದರೆ ಎಲ್ಲವನ್ನು ನಿರ್ಧಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತೆ.

ವೀರೇಂದ್ರ ಪಾಟೀಲ್ 1999 ನಂತರ ಲಿಂಗಾಯತರಿಗೆ ಸಿಕ್ಕಿಲ್ಲ. ದೊಡ್ಡ ಸಮುದಾಯವಿದೆ. 35 ಜನ ಶಾಸಕರನ್ನು ಹೊಂದಿದ್ದೇವೆ. ದಲಿತ, ಹಿಂದುಳಿದ, ಒಕ್ಕಲಿಗ ಸಮುದಾಯ ಇರಬಹುದು, ಮುಸ್ಲಿಂ ಸಮುದಾಯ ಇರಬಹುದು. ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ. ಅದಕ್ಕೆ ನಮ್ಮ ಕಾಂಟ್ರುಬ್ಯೂಷನ್ ಕೂಡ ಲಿಂಗಾಯತರದ್ದು ಇದೆ. ಪ್ರತಿಸಲ ಬಿಜೆಪಿಯವರು ಸುಮಾರು 70 ಸೀಟು ಕೊಟ್ಟಿದ್ದರು, 17-19 ಶಾಸಕರಿದ್ದಾರೆ. ನಾವೂ 56 ಶಾಸಕರು 35ಕ್ಕೆ ಬಂದಿದ್ದೇವೆ. ನಾಯಕತ್ವ ವಿಚಾರ ಏನಿದ್ದರೂ ಹೈಕಮಾಂಡ್ ಗೆ ಸಂಬಂಧಿಸಿದಂತದ್ದು ಎಂದಿದ್ದಾರೆ.



















