ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳಾಗ್ತಾ ಇದೆ. ಆದರೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗ್ತಿದೆ, ಸಿಎಂ ಸ್ಥಾನದ ಆಕಾಂಕ್ಷಿಗೆ ನಿರಾಸೆಯಾಗ್ತಿದೆ. ಈ ಎರಡು ದೊಡ್ಡ ಬೆಳವಣಿಗೆಗಾಗಿ ಕಾಂಗ್ರೆಸ್ ನಲ್ಲಿರುವವರೇ ಕಾಯ್ತಾ ಇದ್ದಾರೆ. ಇದರ ನಡುವೆ ತನ್ವೀರ್ ಸೇಠ್ ಅವರು ಸಚಿವ ಸ್ಥಾನದ ಬಗ್ಗೆ ಮಾತನ್ನಾಡಿದ್ದಾರೆ.
ಪ್ರಥಮ ಹಂತದಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ನನಗೆ ವರಿಷ್ಠರೆ ಫೋನ್ ಮಾಡಿ,ನಿನಗೆ ಯಾವ ನಿಗಮ ಮಂಡಳಿ ಬೇಕು ಕೊಡ್ತೀನಿ ಅಂದ್ರು. ನಾನು ನಿಗಮ ಮಂಡಳಿ ಒಪ್ಪಲ್ಲ. ಯಾರ ಕೈಯಡಿ ಕೆಲಸ ಮಾಡೋದಕ್ಕೆ ಸಾಧ್ಯವಿಲ್ಲ. ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದೀನಿ. ಬರುವ ತನಕ ಕಾಯ್ತೀನಿ ಅಂತ ಹೇಳಿದ್ದೆ. ಇಲ್ಲ ನಾವೂ ತೀರ್ಮಾನ ತೆಗೆದುಕೊಂಡಿದ್ದೀವಿ. ಎರಡೂವರೆ ವರ್ಷಕ್ಕೆ ನಾವೂ ಮಾಡ್ತೀವಿ ಅಂತ ಕೂಡ ಹೇಳಿದರು ಎಂದಿದ್ದಾರೆ.

ಈಗ ಎರಡೂವರೆ ವರ್ಷ ಮೀರಿ ಹೋಗಿದೆ. ಈಗ ತೀರ್ಮಾನ ತೆಗೆದುಕೊಳ್ಳಬೇಕಾಗಿರುವುದು ವರಿಷ್ಠರು. ಅಂಗಳದಲ್ಲಿ ಈಗ ಆ ಜವಾಬ್ದಾರಿ ಇದೆ. ಅದನ್ನ ಮಾಡ್ತಾರೆ ಎಂಬ ನಂಬಿಕೆಯೂ ನನಗಿದೆ. ಜನ ನಮ್ಮನ್ನ ಆಯ್ಕೆ ಮಾಡಿರುವುದು ರಾಜ್ಯದ ಉದ್ಧಗಲಕ್ಕು ಇರುವಂತ ಸಮಸ್ಯೆಯನ್ನ ಬಗೆಹರಿಸುವುದಕ್ಕೆ. ಅಧಿಕಾರ ಯಾರ ಕೈನಲ್ಲಿ ಇರಬೇಕು ಅಂತ ಯಾರೂ ಆಯ್ಕೆ ಮಾಡಿಲ್ಲ. ಆ ತೀರ್ಮಾನ ಪಕ್ಷದ್ದು, ಶಾಸಕರದ್ದು. ಹಾಗಾಗಿ ಯಾರಿಗೆ ಜವಬ್ದಾರಿ ಕೊಟ್ಟಿದ್ದಾರೆ, ಅವರಿಗೆ ಮುಕ್ತವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಿ. ಎಲ್ಲರು ಎಲ್ಲದಕ್ಕೂ ಕೈ ಹಾಕೋದು ಅಲ್ಲ. ವಿನಾಕಾರಣ ಮುಗಿದು ಹೋಗುವ ಅಧ್ಯಾಯಕ್ಕೆ ಕೆಲವು ಹೇಳಿಕೆಗಳು ಗೊಂದಲ ಮಾಡ್ತಿದೆ. ಅದನ್ನ ನಾವೂ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ.




















