ಶಿವಮೊಗ್ಗ: ವಿದ್ಯಾರ್ಥಿ ವೇತನ ಸರಿಯಾಗಿ ಕೊಡ್ತಾ ಇಲ್ಲ. ಹಾಸ್ಟೆಲ್ ವ್ಯವಸ್ಥೆ ಸರಿಯಾಗಿಲ್ಲ ಎಂಬ ಕಾರಣದಿಂದ ಕುವೆಂಪು ವಿವಿ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ. NSUI ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಮಸ್ಯೆಯನ್ನ ಎಷ್ಟೇ ಬಾರಿ ಹೇಳಿದರು ಅದನ್ನು ಬಗೆಹರಿಸದ ವಿಸಿಗೆ ದಿಕ್ಕಾರವನ್ನ ಕೂಗಿದ್ದಾರೆ. ಅಷ್ಟೇ ಅಲ್ಲ ವಿಸಿ ಕಚೇರಿ ಬೋರ್ಡ್ ಗೆ ವಿದ್ಯಾರ್ಥಿಗಳು ಮಸಿ ಬಳಿದಿದ್ದಾರೆ. ಅಲ್ಲಿರುವಂತ ಪಾಟ್ ಗಳು, ಚೇರ್ ಗಳನ್ನು ಹೊಡೆದು ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾವತಿಯ ಶಂಕರಘಟ್ಟದಲ್ಲಿ ಇರುವಂತದ್ದು ಕುವೆಂಪು ಯೂನಿವರ್ಸಿಟಿ. ಇಲ್ಲಿ ಸಾಕಷ್ಟು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅನುಭವಿಸ್ತಾ ಇದ್ದಾರೆ. ಕಳೆದ ಐದು ತಿಂಗಳ ಹಿಂದೆಯೇ ಪರೀಕ್ಷೆ ಮುಗಿದಿದೆ. ಆ ಫಲಿತಾಂಶವೂ ವಿಳಂಬವಾಗಿದೆ. ಅದರ ಜೊತೆಗೆ ಹಾಸ್ಟೆಲ್ ಸೌಲಭ್ಯವೂ ಸರಿ ಇಲ್ಲ. ಅದರ ಬಗ್ಗೆಯೂಗಮನ ಹರಿಸುತ್ತಿಲ್ಲ. ಹಾಗೇ ಸ್ಕಾಲರ್ ಶಿಪ್ ಬರಬೇಕಿದೆ ಅದರ ಬಗ್ಗೆಯೂ ಗಮನ ಹರಿಸುತ್ತಿಲ್ಲ. ಟೆಂಡರ್ ಗಳಲ್ಲೂ ಅವ್ಯವಹಾರ ನಡೆದಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಅಲ್ಲಿನ ಕುಲಪತಿಗಳು ಕೂಡ ಯಾವುದೇ ಸಮಸ್ಯೆಗೂ ಬಗೆಹರಿಸುತ್ತಿಲ್ಲ ಎಂಬ ಕೋಪದಿಂದ ವಿಸಿ ಗಳ ಕಚೇರಿಗೆ ಹೋಗಿ ಚೇರ್ ಗಳು, ನೇಮ್ ಪ್ಲೇಟ್ ಗಳನ್ನು ಕಿತ್ತು ಬಿಸಾಕಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.. ಈ ಘಟನೆಯ ಬಳಿಕ ಕುಲಪತಿಗಳ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ. ಸಭೆಯ ಬಳಿಕ ವಿದ್ಯಾರ್ಥಿಗಳ ವಿಚಾರಕ್ಕೆ ಯಾವ ನಿರ್ಧಾರವನ್ನು ವಿವಿ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ. ಸೌಲಭ್ಯವೇ ಇಲ್ಲದೆ ಇರುವ ವಿದ್ಯಾರ್ಥಿಗಳ ತಾಳ್ಮೆಯ ಕಟ್ಟೆ ಹೊಡೆದ ಪರಿಣಾಮ ಇಂದು ಪ್ರತಿಭಟನೆ ನಡೆದಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











