ಕೊಪ್ಪಳ: ರಾಜ್ಯದಲ್ಲಿ ಸದ್ಯಕ್ಕೆ ಸಾಕಷ್ಟು ಚರ್ಚೆಯಾಗ್ತಾ ಇದೆ. ನಾಳೆ ದಿನ ಸಿಎಂ ಬದಲಾವಣೆಯಾದರೆ ಯಾರಿಗೆ ವೋಟ್ ಮಾಡಬೇಕು ಎಂಬುದರ ಬಗ್ಗೆ ಬಸವರಾಜ ರಾಯರೆಡ್ಡಿ ಅವರು ಮಾತನ್ನಾಡಿದ್ದರು. ಈ ಬಗ್ಗೆ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ. ಬಸವರಾಜ್ ರಾಯರೆಡ್ಡಿ ಸಾಹೇಬ್ರಿಗೆ ಹೇಳುವಷ್ಟು ಬುದ್ದಿವಂತ ನಾನಲ್ಲ. ಬಸವರಾಜ್ ರಾಯರೆಡ್ಡಿ ಅವರು ನಮ್ಮ ನಾಯಕರು, ನಮ್ಮ ಲೀಡರ್. ಅವರಿಗೆ ನಾನೇಳೊವಷ್ಟು ಬುದ್ಧಿವಂತ ನಾನಲ್ಲ ಎಂದಿದ್ದಾರೆ.

ಅವರು ರಾಜಕಾರಣ ಮಾಡುವಂತ ಸಮಯದಲ್ಲಿ ನಾನಿನ್ನು ಕಾಲೇಜ್ ಓದುತ್ತಾ ಇದ್ದೆ. ಪಕ್ಷದ ವಿಚಾರ ಮತ್ತು ಅಧಿಕಾರದ ವಿಚಾರವನ್ನ ನಾನು ಮಾತನ್ನಾಡೋದಿಲ್ಲ. ನಾನೇನಿದ್ದರು ಪಕ್ಷದ ಶಿಸ್ತಿನ ಸಿಪಾಯಿ. ಅಹಿಂದ ಸಮಾಜ ಮಾಡಿದರೆ ತಪ್ಪೇನಿದೆ. ಯಾಕೆ ಅಹಿಂದ ಮಾಡಬಾರದು. ನಾವೂ ಅಹಿಂದ ಪರ ಇದ್ದೀವಿ, ಲಿಂಗಾಯತರ ಪರ ಇದ್ದೀವಿ. ಒಕ್ಕಲಿಗರ ಪರ ಇದ್ದೀವಿ, ದಲಿತರ ಪರ ಇದ್ದೀವಿ. ಅಲ್ಪಸಂಖ್ಯಾತರ ಪರ ಇದ್ದೀವಿ. ಎಲ್ಲಾ ಸಮುದಾಯದವರ ಪರ ಇದ್ದೀವಿ. ನಮ್ಮ ಪಕ್ಷದ ನಾಯಕರನ್ನು ಕೇಳುವಷ್ಟು ದೊಡ್ಡವನಲ್ಲ. ಸಿದ್ದರಾಮಯ್ಯ ಅವರಿಗೆ ಅಧಿಕಾರ ಕೊಡುವಂತದ್ದು, ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಕೊಡುವಂತದ್ದು ದೊಡ್ಡವನು ನಾನಲ್ಲ.
ಗೆದ್ದವರು ಅಪೇಕ್ಷೆ ಪಡುವುದು ತಪ್ಪಲ್ಲ. ರಾಯರೆಡ್ಡಿ ಅವರು ತುಂಬಾ ಹಿರಿಯರು. ರಾಘಣ್ಣ ಅವರನ್ನು ಮಂತ್ರಿ ಮಾಡ್ತಾರೋ ರಾಯರೆಡ್ಡಿ ಅವರನ್ನು ಮಾಡ್ತಾರೋ ಹೈಕಮಾಂಡ್ ಗೆ ಬಿಟ್ಟಿದ್ದು. ರಾಜಕೀಯವಾಗಿ ತ್ಯಾಗ ಅನ್ನೋದು ಮತ್ತೊಂದು ಪಾರ್ಟ್. ಪಕ್ಷ ಇವತ್ತು ನನಗೆ ಏನು ಸೂಚನೆಯನ್ನು ನೀಡುತ್ತೋ ಅದನ್ನ ಮಾಡ್ತೀನಿ. ಪಾರ್ಟಿ ಆಫೀಸಲ್ಲ ಕಸ ಹೊಡಿ ಅಂದ್ರು ಹೊಡಿತೀನಿ. ಅದು ನನ್ನ ಡ್ಯೂಟಿ ಎಂಬ ಮಾತನ್ನ ಹೇಳಿದ್ದಾರೆ.



















