Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿ ಸುಧಾಕರ್‌ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಪರಮೇಶ್ವರ್

---Advertisement---

ಬೆಂಗಳೂರು: ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಸಚಿವ ಡಿ‌ ಸುಧಾಕರ್ ಅವರ ಇನ್ನು ಕೂಡ ಪ್ರಜ್ಞೆ ಬಂದಿಲ್ಲ. ಸದ್ಯ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿರುವ ಜಿ ಪರಮೇಶ್ವರ್ ಅವರು, ವೈದ್ಯರ ಬಳಿಯೂ ಮಾತನ್ನಾಡಿದ್ದಾರೆ. ಬೆಸ್ಟ್ ಡಾಕ್ಟರ್ಸ್ ಗಳಿದ್ದಾರೆ ಇಲ್ಲಿ. ಏನೇನೋ ಮಾಡ್ತಾರೆ ಅವರಿಗೆ ಏನು ಆಗಲ್ಲ. ಒಂದು ಸೊಳ್ಳೆಯನ್ನು ಸಾಯಿಸಿದ ಮನುಷ್ಯ ಅಲ್ಲ. ಸೆಷನ್ ಟೈಮ್ ನಲ್ಲಿ ನಾವೆಲ್ಲಾ ತಮಾಷೆ ಮಾಡಿಕೊಂಡು ಇರುತ್ತಿದ್ದೆವು. ಅವರ ಕುಟುಂಬದ ಬಗ್ಗೆ ಗೊತ್ತು. ಉಇ ಸಮಯದಲ್ಲಿ ಎಲ್ಲರೂ ಸ್ವಲ್ಪ ಧೈರ್ಯ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಬಳಿಕ ಮಾಧ್ಯಮದವರ ಜೊತೆಗೆ ಮಾತನ್ನಾಡಿ, ನಮ್ಮ ಸ್ನೇಹಿತರು ಮತ್ತು ಸಂಪುಟದ ಸದಸ್ಯರಾಗಿರುವಂತ ಸುಧಾಕರ್ ಅವರ ಆರೋಗ್ಯ ಸ್ಥಿರವಾಗಿದೆ. ನಾವೆಲ್ಲಾ ಆಶಾವಾದಿಗಳಲ್ವಾ. ಖಂಡಿತವಾಗಲೂ ಸರಿಯಾಗುತ್ತೆ ಎಂಬ ಆಶಾವಾದವಿದೆ. ಡಾಕ್ಟರ್ಸ್ ಗಳು ಕೂಡ ಪಾಸಿಟಿವ್ ಆಗಿ ನಾವೂ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಲ್ಟಿಮೇಟ್ಲಿ ದೇವರ ಇಚ್ಛೆ. ಮತ್ತೆ ಚೆನ್ನಾಗಿ ಆಗಿ ಬರಬೇಕು ಅನ್ನೋದೆ ನಮ್ಮೆಲ್ಲರ ಆಸೆ ಎಂದಿದ್ದಾರೆ.

ಬೇರೆ ಎಲ್ಲಾ‌ ಅಂಗಾಂಗಳು ನಾರ್ಮಲ್ ಆಗಿನೆ ಇದೆ. ನಾನು ಒಳಗಡೆ ಹೋಗಿ ನೋಡಿಕೊಂಡು ಬಂದೆ. ಅವರ ಬ್ರೈನ್ ನಾರ್ಮಲ್ ಗೆ ಬರೋದಕ್ಕೆ ಸಮಯ ತೆಗೆದುಕೊಳ್ಳುತ್ತೆ. ಅದಕ್ಕೆ ಕಾಯೋಣಾ. ಪ್ರಜ್ಞೆ ಇನ್ನು ಬಂದಿಲ್ಲ. ನೀವೆಲ್ಲಾ ಬೇರೆ ಬೇರೆ ಥರ ಹೇಳ್ಬಿಟ್ಟಿದ್ದೀರಾ. ಏನೋ ಮುಚ್ಚಿಡ್ತಾ ಇದ್ದಾರೆ. ಅದು ಇದು ಅಂತ ಯಾವುದೇ ಥರ ಇಲ್ಲ. ಅವರವರಿಗೆ ತಿಳಿದದ್ದನ್ನ ಹೇಳ್ತಾರೆ. ಅದಕ್ಕೆಲ್ಲಾ ರಿಯಾಕ್ಟ್ ಮಾಡೋದಕ್ಕೆ ಆಗುತ್ತಾ. ಪ್ರಜ್ಞೆ ಒಂದು ಬಂದಿಲ್ಲ ಅಷ್ಟೇ. ಇನ್ನಿಲ್ಲ ಅಂಗಾಂಗಗಳು ಚೆನ್ನಾಗಿವೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...