ಚಿತ್ರದುರ್ಗ: ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ. ಈ ಸಂಬಂಧ ಮಾತನ್ನಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಇಂತಹ ಸಂದರ್ಭವನ್ನ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಮಾತನ್ನ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನ್ನಾಡಿದ ಅವರು, ಡಿ ಸುಧಾಕರ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಈ ಸಂದರ್ಭವನ್ನ ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಕೆಲವರು ಎಕ್ಸ್ ಪರ್ಟ್ ಇದ್ದಾರೆ. ಸಚಿವ ಸುಧಾಕರ್ ಸಾವು ಬದುಕಿನ ನಡುವೆ ಹೋರಾಟ ಮಾಡ್ತಾ ಇದ್ದಾರೆ. ಈ ವೇಳೆ ನಾನು ಜೆಡಿಎಸ್ ಸ್ಥಾನದ ಬಗ್ಗೆ ಚರ್ಚೆ ಮಾಡಲ್ಲ. ಹಿರಿಯೂರು ಸೇರಿದಂತೆ ಬೇರೆ ಕ್ಷೇತ್ರದ ಬಗ್ಗೆಯೂ ಮಾತನ್ನಾಡಲ್ಲ. ಆದರೆ ಆಸ್ಪತ್ರೆಯ ಒಳಗೆ ಏನು ನಡೆಯುತ್ತೆ ಎಂಬುದನ್ನು ನೋಡಬೇಕಿದೆ. ಆ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಿದ್ದಾನೋ ಪಾಪ. ಯಾವ ಕಾರಣಕ್ಕೆ ಕೆಲ ವಿಷಯ ಮುಚ್ಚಿಟ್ಟಿದ್ದಾರೆ ಎಂಬುದು ಅರಿಯಬೇಕಿದೆ. ಆ ವ್ಯಕ್ತಿಯಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಮುಚ್ಚಿಡಲಾಗಿದೆಯೇ ಎಂಬ ಅನುಮಾನವನ್ನು ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದಾರೆ. ನಾವು ಇತಿಹಾಸ ನೋಡಿದ್ದೇವೆ. ಯಾವ ಕಾರಣಕ್ಕೆ ಮುಂದೂಡುತ್ತಿದ್ದಾರೆ. ಇಂಥ ವಿಚಾರಗಳಲ್ಲಿ ನಾನು ಚರ್ಚೆ ಮಾಡಲ್ಲ. ಆದರೆ ಕೆಲ ವ್ಯಕ್ತಿಗಳು ಇಂಥ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಅಹಿಂದ ಸಮಾವೇಶದ ಬಗ್ಗೆ ಮಾತನ್ನಾಡಿದ ಕುಮಾರಸ್ವಾಮಿ ಅವರು, ಕೈ ನಾಯಕರು ಕುರ್ಚಿ ಉಳಿಸಿಕೊಳ್ಳಲು ಅಹಿಂದ ಸಮಾವೇಶ ನಡೆಸುತ್ತಿದ್ದಾರೆ. ಅಹಿಂದ ಸಮುದಾಯದ ಜನ ಏನು ಹೇಳುತ್ತಿದ್ದಾರೆ. ನಮ್ಮ ಭಿಕ್ಷೆಯಿಂದ ಕಾಂಗ್ರೆಸ್ ಅಧಿಕಾರ ಎನ್ನುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ ಎಂದಿದ್ದಾರೆ.

















