ಬೆಂಗಳೂರು : ಮೇ 15ಕ್ಕೆ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬವಿದೆ. ಈಗಾಗಲೇ ದೆಹಲಿಗೆ ಹೋಗಿ ಬಂದಿರುವ ಡಿಕೆ ಶಿವಕುಮಾರ್ ಅವರಿಗೆ ಬರ್ತ್ ಡೇ ಗಿಫ್ಟ್ ಆಗಿ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ ಡಿಕೆಶಿ ಉತ್ತರಿಸಿದ್ದು ಹೀಗೆ, ಮೇ 15 ನನ್ನ ಬರ್ತ್ ಡೇಗೆ ಯಾರೂ ಕೂಡ ಪ್ಲೆಕ್ಸ್, ಜಾಹೀರಾತು ಏನನ್ನು ಕೊಡಬಾರದು. ಕಾರ್ಯಕರ್ತರೇನಾದ್ರು ಆ ರೀತಿ ಮಾಡಿದ್ರೆ ನಾನಂತು ಕೇಸ್ ಹಾಕ್ತೀನಿ. ಜಾಹೀರಾತಿಗೆ ಹಣ ಕೊಟ್ಟು ಮಾಡ್ಕೊಳ್ಳಲಿ. ಆದರೆ ರೋಡ್ ಗಳಲ್ಲಿ ಫ್ಲೆಕ್ಸ್, ಬ್ಯಾನರ್ ಕಟ್ಟಬಾರದು. ಇದು ನನ್ನ ಪರ್ಸನಲ್ ರಿಕ್ವೆಸ್ಟ್ ಮಾಡಿದ್ದಾರೆ.
ಇನ್ನು ಬೆಟ್ಟ ಅಗೆದು ಇಲಿ ಹಿಡಿದ್ರು ಎಂಬ ಬಿಜೆಪಿಯವರ ಮಾತಿಗೆ, ಬಿಜೆಪಿಯವರ ಕೈಲಿ ಏನು ಮಾಡೋದಕ್ಕೆ ಆಗ್ಲಿಲ್ಲ. ನಾವೂ ಏನು ಮಾತು ಕೊಟ್ಟಿದ್ದೇವೋ ಅದನ್ನ ಸರಿಯಾಗಿ ಮಾಡಿದ್ದೇವೆ. ರೈಟ್, ಲೆಫ್ಟ್ ಗೊಂದಲ ಇತ್ತು. ಯಾರಿಗೆ ಫಸ್ಟ್ ಅಂತ. ಈಗ ಅದಕ್ಕೂ ಪರಿಹಾರ ಸಿಕ್ಕಿದೆ. ರೈಟ್ ಇರಬಹುದು, ಲೆಫ್ಟ್ ಇರಬಹುದು, ಲಂಬಾಣಿ ಇರಬಹುದು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನ ನಮ್ಮ ಸರ್ಕಾರ ಇವತ್ತು ಮಾಡಿದೆ ಎಂದಿದ್ದಾರೆ.

ಇನ್ನು ದೆಹಲಿಗೆ ಹೋಗಿ ಬಂದ ಮೇಲೆ ಅಲ್ಲಿ ರಾಜಕೀಯ ಚರ್ಚೆ ಆಗಿದೆ ಅಂತಿದ್ದಾರೆ ಎಂಬ ಮಾತಿಗೆ ಉತ್ತರಿಸಿ, ನಾನು ರಾಜಕೀಯ ಇಶ್ಯೂಸ್ ವಿಚಾರವನ್ನು ಯಾವುದೇ ಮಾಧ್ಯಮದ ಮುಂದೆ ಮಾತನ್ನಾಡಲ್ಲ. ಸಮಯ ಬಂದಾಗ ಎಲ್ಲವೂ ತಿಳಿಯುತ್ತೆ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಹೈಕಮಾಂಡ್ ಯಾವ ಸಮಯದಲ್ಲಿ ಏನು ಮಾಡಬೇಕೋ ಅದನ್ನ ಮಾಡುತ್ತೆ ಎಂಬ ಮಾತನ್ನ ಹೇಳಿದ್ದಾರೆ.


















