Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆಶಿ – ಖರ್ಗೆ ಭೇಟಿ : ಎರಡೂವರೆ ವರ್ಷ ಅಂದಿದ್ದಾಯ್ತು.. ಈಗ ಮೂರು ವರ್ಷ ಆಗ್ತಾ ಬರ್ತಿದೆ : ಡಿಕೆಶಿ ಬೇಸರ..!

---Advertisement---

ದೆಹಲಿ: ಕಾಂಗ್ರೆಸ್ ನಲ್ಲಿ ಖುರ್ಚಿ ಜಟಾಪಟಿ ನಿಂತಂತೆ ಕಾಣಿಸ್ತಾ ಇಲ್ಲ. ಎರಡೂವರೆ ವರ್ಷ ಆದ್ಮೇಲೆ ಬಿಟ್ಟು ಕೊಡ್ತಾರೆ ಎಂಬ ಮಾತಿಗೆ ಬದ್ಧವಾಗಿದ್ದಂತ ಡಿಕೆಶಿ, ಮೂರು ವರ್ಷವಾದರೂ ಖುರ್ಚಿ ಸಿಗದ ಕಾರಣ, ನಾನಾ ಪ್ರಯತ್ನ ಮಾಡ್ತಾ ಇದ್ದಾರೆ. ದೆಹಲಿಗೂ ಆಗಾಗ ಹೋಗಿ ಬಂದು ಮಾಡ್ತಾ ಇದ್ದಾರೆ. ಆದರೆ ಸಿಗಬೇಕಾದವರೆ ಸಿಕ್ತಾ ಇಲ್ಲ. ಈಗಲೂ ಪವರ್ ಕ್ಲೈಮ್ ಮಾಡಲು ಡಿಕೆ ಬ್ರದರ್ಸ್ ದೆಹಲಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಡಿಕೆ ಬ್ರದರ್ಸ್ ಭೇಟಿಯಾಗಿದ್ದಾರೆ. ದೆಹಲಿಯಲ್ಲಿರುವ ರಾಜಾಜಿ‌ ಮಾರ್ಗ್ ನಲ್ಲಿರುವ ನಿವಾಸದಲ್ಲಿ ಭೇಟಿ ಆಗಿದ್ದಾರೆ. ಈ ವೇಳೆ ಬಹಳ ಮುಖ್ಯವಾಗಿ ಸಿಎಂ ಕುರ್ಚಿ ವಿಚಾರಕ್ಕೇನೆ ಹೆಚ್ಚು ಚರ್ಚೆಯಾಗಿದೆ ಎನ್ನಲಾಗಿದೆ. ಮೇ 4ರ ಒಳಗೆ ಸಿಎಂ ಸಿದ್ದರಾಮಯ್ಯ ಅವರನ್ನ ದೆಹಲಿಗೆ ಕರೆಸಿ. ಸಿಎಂ ಬದಲಾವಣೆ ಬಗ್ಗೆ ಬೇಗ ತೀರ್ಮಾನ ಮಾಡಿ. ಎರಡೂವರೆ ವರ್ಷ ಅಂದಿದ್ದಾಯ್ತು ಈಗ ಮೂರು ವರ್ಷ ತುಂಬುವುದಕ್ಕೆ ಬರ್ತಾ ಇದೆ ಎಂದು ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ದಾಖಲೆಯನ್ನು ಸರಿಗಟ್ಟಿದ್ದು ಆಯ್ತು. ಐದು ರಾಜ್ಯಗಳ ಫಲಿತಾಂಶ ಬರುವುದಕ್ಕೂ ಮುನ್ನ ಒಂದು ತೀರ್ಮಾನವನ್ನು ತೆಗೆದುಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಮನವಿ‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಐದು ರಾಜ್ಯಗಳ ಚುನಾವಣೆ ಘೋಷಣೆಯಾದ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರವೂ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿತ್ತು. ಈಗ ಬಹುತೇಕ ಚುನಾವಣೆ ಮುಗಿಯುತ್ತಾ ಬಂದಿದೆ. ಮೇ 4ರಂದು ಫಲಿತಾಂಶವೂ ಬರಲಿದೆ. ಹೀಗಿರುವಾಗ ಮುಖ್ಯಮಂತ್ರಿ ವಿಚಾರವೂ ಆದಷ್ಟು ಬೇಗ ತೀರ್ಮಾನವಾಗಲಿ ಎಂದೇ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...