Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಘವ್ ಚಡ್ಡಾ AAP ಪಕ್ಷ ಬಿಟ್ಟು ಬಿಜೆಪಿ ಸೇರಲು ಇಲ್ಲಿದೆ ಕಾರಣ..!

---Advertisement---

 

ರಾಘವ್ ಚಡ್ಡಾ ಸದ್ಯ ಆಮ್ ಆದ್ಮಿ ಪಾರ್ಟಿಯಲ್ಲಿ ಸಂಸದರಾಗಿದ್ದವರು. ಆದರೆ ದಿಢೀರನೇ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಕಾರಣ ನಾನು ಅವರ ಅಪರಾಧಗಳ ಭಾಗವಾಗಲಿಲ್ಲ ಎಂಬ ಉತ್ತರವನ್ನ ನೀಡಿದ್ದಾರೆ. ಅಂದ್ರೆ ಆಮ್ ಆದ್ಮಿ ಪಾರ್ಟಿಯಲ್ಲಿ ಹಗರಣಗಳ ವಿಚಾರವೇ ಹೆಚ್ಚು ಸದ್ದು ಮಾಡಿತ್ತು. ಇದಕ್ಕೆ ಪಕ್ಷ ಬಿಟ್ಟರಾ ಎಂಬ ಪ್ರಶ್ನೆ ಈಗ ಮೂಡಿದೆ.

ಪಕ್ಷ ತೊರೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಡ್ಡಾ ಅವರು, ನಾನು ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರ ಇದ್ದ ನಿಜವಾದ ಕಾರಣವನ್ನ ನಿಮಗೆ ಇಂದು ಹೇಳುತ್ತೇನೆ. ನಾನು ಅವರ ಅಪರಾಧಗಳ ಭಾಗವಾಗುವುದಕ್ಕೆ ಇಷ್ಟಪಡಲಿಲ್ಲ. ಹಾಗೇ ನಾನು ಅವರ ಅಪರಾಧದ ಭಾಗವಾಗದೆ ಇರುವುದಕ್ಕೆ ಅವರ ಸ್ನೇಹ ಪಡೆಯಲು ಅರ್ಹನಾಗಿರಲಿಲ್ಲ. ನಮಗೆ ಕೇವಲ ಎರಡು ಆಯ್ಕೆಗಳಿದ್ದವು – ರಾಜಕೀಯವನ್ನು ತ್ಯಜಿಸಿ ಕಳೆದ 15-16 ವರ್ಷಗಳಲ್ಲಿ ನಮ್ಮ ಸಾರ್ವಜನಿಕ ಕೆಲಸವನ್ನು ತ್ಯಜಿಸುವುದು. ಇಲ್ಲವೇ ನಮ್ಮ ಶಕ್ತಿ ಮತ್ತು ಅನುಭವದೊಂದಿಗೆ ನಾವು ಸಕಾರಾತ್ಮಕ ರಾಜಕೀಯ ಮಾಡುವುದು. ಹೀಗಾಗಿ, ರಾಜ್ಯಸಭಾದಲ್ಲಿ ಎಎಪಿಗೆ ಸೇರಿದ 2/3ನೇ ಸದಸ್ಯರಾಗಿರುವ ನಾವು ಭಾರತದ ಸಂವಿಧಾನದ ನಿಬಂಧನೆಗಳಿಗೆ ಒಳಪಟ್ಟು ಮತ್ತು ಬಿಜೆಪಿಯೊಂದಿಗೆ ವಿಲೀನವಾಗುವುದಕ್ಕೆ ನಿರ್ಧರಿಸಿದ್ದೇವೆ ಎಂದಿದ್ದಾರೆ.

ಇನ್ನು ಆಮ್ ಆದ್ಮಿ ಪಕ್ಷವನ್ನು ರಾಘವ್ ಚಡ್ಡಾ ಜೊತೆಗೆ ಇನ್ನಿಬ್ಬರು ಕೂಡ ತೊರೆದಿದ್ದಾರೆ. ಗುರ್ಮಿತ್ ಸಿಂಗ್ ಮೀತ್ ಹೇಯರ್, ರಾಜ್ ಕುಮಾರ್ ಚಬ್ಬೇವಾಲ್ ಹಾಗೂ ಮಲ್ವಿಂದರ್ ಸಿಂಗ್ ಕಾಂಗ್ (ಆನಂದಪುರ ಸಾಹಿಬ್) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ದೆಹಲಿ ರಾಜಕೀಯದಲ್ಲಿ ಚರ್ಚೆ ಹುಟ್ಟು ಹಾಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...