ದಾವಣಗೆರೆ: ಪಂಚಮಸಾಲಿ ಪೀಠದಲ್ಲಿ ಏನೇನೋ ಅಪ್ಡೇಟ್ ನಡೆದಿದೆ. ಇದೀಗ ಪಂಚಮಸಾಲಿ ಪೀಠದಿಂದ ಉಚ್ಛಾಟನೆಯ ಬಳಿಕ ವಚನಾನಂದ ಶ್ರೀಗಳು ತಮ್ಮ ಪವರ್ ತೋರಿಸಲು ಹೊರಟಿದ್ದಾರೆ. ಟ್ರಸ್ಟ್ ಎಚ್ಚರಿಕೆಯ ನಡುವೆಯೂ ಬಸವ ಜಯಂತಿ ಮಾಡೋದಕ್ಕೆ ಹೊರಟಿದ್ದಾರೆ. ಈ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ವಚನಾನಂದ ಶ್ರೀಗಳು ಎಂಬಂತೆ ಕಾಣಿಸ್ತಾ ಇದೆ.
ಏಪ್ರಿಲ್ 13ರಂದು ಮಠದಿಂದ ಉಚ್ಛಾಟನೆ ಆಗಿದ್ದರು ಸಹ, ಮಠದಲ್ಲಿಯೇ ಇದ್ದಂತ ವಚನಾನಂದ ಶ್ರೀಗಳು, ಟ್ರಸ್ಟಿಗಳ ವಿರುದ್ಧ ವೇದಿಕೆ ಸೃಷ್ಟಿ ಮಾಡಿಕೊಂಡ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಟ್ರಸ್ಟಿಗಳು ಶ್ರೀಗಳ ವಿರುದ್ಧ ದೂರು ನೀಡಿದ್ದಾರೆ. ಪಂಚಮಸಾಲಿ ಪೀಠದಲ್ಲಿಯೇ ಒಂದು ವೇದಿಕೆ ಶುರು ಮಾಡಿದ್ದು, ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಿದ್ದಾರೆ.ಬಸವ ಜಯಂತಿ ಆಚರಿಸುವ ಮೂಲಕ ಇಡೀ ರಾಜ್ಯದ ಮೂಲೆ ಮೂಲೆಯಿಂದಾನೂ ಭಕ್ತರನ್ನು ಆಹ್ವಾನಿಸುವ ಕೆಲಸವಾಗಿದೆ.
ಭಕ್ತರು ಕೊಟ್ಟ ಹಣಕ್ಕೆ ಲೆಕ್ಕ ಕೊಡಿ ಎಂಬ ಅಭಿಯಾನ ಕೂಡ ದೊಡ್ಡಮಟ್ಟದಲ್ಲಿ ಶುರುವಾಗಿತ್ತು. ಅದರ ಲೆಕ್ಕವನ್ನು ಕೊಡುವುದಕ್ಕೂ ಶ್ರೀಗಳು ಸಿದ್ಧರಾಗಿದ್ದಾರೆ. ಒಟ್ಟಾರೆ ಜನರೆನ್ನೆಲ್ಲಾ ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡೋದಕ್ಕೆ ಹೊರಟಿದ್ದಾರೆ.
















