Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ..!

---Advertisement---

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ, ಪೋಷಕರಲ್ಲಿ ಮೊಬೈಲ್ ಗೀಳು ಎಷ್ಟಿದೆ ಅಂದ್ರೆ ಮೊಬೈಲ್ ಇಲ್ಲದೆ ಇದ್ರೆ ಪ್ರಪಂಚವೇ ಇರಲ್ಲ. ಸಮಯವೂ ಮುಂದಕ್ಕೆ ಹೋಗಲ್ಲ. ಅದರಲ್ಲೂ ಮಕ್ಕಳಿಗೆ ಊಟ ಮಾಡುವುದಕ್ಕೂ ಮೊಬೈಲ್ ಬೇಕು, ಆಟ ಆಡೋದಕ್ಕೂ ಮೊಬೈಲ್ ಬೇಕು. ಅಂಥ ಪರಿಸ್ಥಿತಿಗೆ ಬಂದು ನಿಂತಿದೆ‌ ಈ ಮೊಬೈಲ್ ಗೀಳು. ಇದೇ ಗೀಳಿನಿಂದ ಇಂದು ಬಾಲಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಹುಬ್ಬಳ್ಳಿಯ ಉದಯನಗರದಲ್ಲಿ ಮೊಬೈಲ್ ಗೀಳಿಗೆ ಸಿಲುಕಿದ್ದ 14 ವರ್ಷದ ಬಾಲಕ, ತನ್ನ ತಾಯಿ ಮೊಬೈಲ್ ಕಿತ್ತುಕೊಂಡರು ಎಂಬ ಕಾರಣಕ್ಕೆ ಇಂಥ ಅನಾಹುತ ಮಾಡಿಕೊಂಡಿದ್ದಾನೆ. ಮೃತ ಸಮರ್ಥ್ ಕಳೆದ ಕೆಲವು ದಿನಗಳಿಂದ ಫ್ರೀ ಫೈಯರ್ ಅಂತಹ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನ್ನಾಡಿದ್ದಾರೆ.

ಇದು ಅತ್ಯಂತ ದುರದೃಷ್ಟಕರ ಘಟನೆ. ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಪೋಷಕರು ಹೆಚ್ಚಿನ ಜಾಗರೂಕತೆಯನ್ನ ವಹಿಸಬೇಕು. ಮಕ್ಕಳು ಮೊಬೈಲ್ ಅಡಿಕ್ಷನ್ ಗೆ ಒಳಗಾದಾಗ ಪೋಷಕರನ್ನೇ ಬ್ಲಾಕ್ ಮೇಲ್ ಮಾಡುವ ಹಂತಕ್ಕೆ ತಲುಪುತ್ತಾರೆ. ಒಂದು ವೇಳೆ ಮಕ್ಕಳು ಮೊಬೈಲ್ ಗೆ ಹೆಚ್ಚು ಅಡಿಕ್ಟ್ ಆಗಿದ್ದರೆ, ಏಕಾಏಕಿ ಮೊಬೈಲ್ ನಿಂದ ದೂರವಿಡಲು ಪ್ರಯತ್ನಿಸಬಾರದು. ಬದಲಾಗಿ, ಅವರ ಶಿಕ್ಷಕರು ಅಥವಾ ಮಕ್ಕಳ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ, ನಿಧಾನವಾಗಿ ಈ ವ್ಯಸನದಿಂದ ಹೊರಗೆ ಬರುವಂತೆ ಮಾಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಮೃತ ಸಮರ್ಥ್ ತಾಯಿ, ಯಾವಾಗಲೂ ಮೊಬೈಲ್ ನೋಡಿಕೊಳ್ಳುತ್ತಾ ಕೂರಬೇಡ. ಓದಿನ ಕಡರಗೆ ಗಮನ ಕೊಡು ಎಂದು ಮೊಬೈಲ್ ಕಿತ್ತುಕೊಂಡಿದ್ದೇ ಈ ಅವಘಡಕ್ಕೆ ಕಾರಣವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...