ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ನಗರದ ಹೊಳಲ್ಕೆರೆ ರಸ್ತೆಯ ಜ್ಞಾನಭಾರತಿ ವಿದ್ಯಾಮಂದಿರ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ. 2025 26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಶಾಲೆಯ ಫಲಿತಾಂಶವು ಶೇಕಡ 100 ರಷ್ಟು ಫಲಿತಾಂಶ ಬಂದಿರುತ್ತದೆ.

ಉನ್ನತ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು.
ಪ್ರಥಮ ಶ್ರೇಣಿಯಲ್ಲಿ 19 ವಿದ್ಯಾರ್ಥಿಗಳು
ದ್ವಿತೀಯ ಶ್ರೇಣಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮಂಜುಳಾ ಕೆ.ಎಂ ಆಚಾರ್ ವಿದ್ಯಾರ್ಥಿನಿ 125ಕ್ಕೆ 125 ಅಂಕ ಗಳಿಸಿರುತ್ತಾರೆ. ಹಿಂದಿ ವಿಷಯದಲ್ಲಿ 8 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ತೆಗೆದಿರುತ್ತಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ವತಿಯಿಂದ ಹೃತ್ಪೂರ್ವಕವಾದ ಅಭಿನಂದನೆಗಳು.


















