ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 22 : ತುರುವನೂರು ರಸ್ತೆಯಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಷ್ಣವ ಸಭಾ ವತಿಯಿಂದ ರಾಮಾನುಜಾಚಾರ್ಯರ 1009 ನೇ ಜಯಂತ್ಯೋತ್ಸವವನ್ನು ಬುಧವಾರ ಆಚರಿಸಲಾಯಿತು.
ವಿಶೇಷವಾಗಿ ಅಲಂಕರಿಸಲಾಗಿದ್ದ ರಾಮಾನುಜಾಚಾರ್ಯರ ಉತ್ಸವ ಮೂರ್ತಿಯನ್ನು ಹೊತ್ತು ಮೂರು ಸುತ್ತು ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಲಾಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಗೋವಿಂದನ ನಾಮ ಸ್ಮರಣೆಯನ್ನು ಪಠಿಸಿದರು. ಚಿತ್ರದುರ್ಗ ವೈಷ್ಣವ ಸಭಾದ ಅಧ್ಯಕ್ಷರಾದ ಜಗದೀಶ್ ಜೆ ಅಯ್ಯಂಗಾರ್, ಅರ್ಚಕರಾದ ನಾರಾಯಣ ಭಟ್ಟರ್, ವಾಸನ್, ಮುರಳಿ, ಮುಕುಂದ ಹಾಗೂ ವೈಷ್ಣವ ಸಭಾದ ಸದಸ್ಯರು ಜಯಂತ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಜಯಂತ್ಯೋತ್ಸವ ನಂತರ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
















