Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿಕ್ಷಣದಲ್ಲಿ ರಂಗಕಲೆ : ನಾಳೆ ತರಬೇತಿ ಕಾರ್ಯಾಗಾರ

---Advertisement---

 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 21 : ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಣದಲ್ಲಿ ರಂಗಕಲೆ-2026 ತರಬೇತಿ ಕಾರ್ಯಾಗಾರ, ರಂಗಗೀತೆ, ಉಪನ್ಯಾಸ, ಕವಿಕಾವ್ಯ ಪರಿಚಯ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಏಪ್ರಿಲ್ 22ರಂದು ಬುಧವಾರ ಬೆಳಿಗ್ಗೆ 10-30ಕ್ಕೆ ಕೋಟೆರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಮ್.ಗುರುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಅಧ್ಯಕ್ಷತೆ ವಹಿಸುವರು. ಆರ್ಥಿಕ ಮತ್ತು ಶಿಕ್ಷಣತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಶಿಕ್ಷಣದಲ್ಲಿ ರಂಗಕಲೆಯ ಮಹತ್ವ ಕುರಿತು ಉಪನ್ಯಾಸ ನೀಡುವರು. ಉಪಪ್ರಾಚಾರ್ಯ ಡಾ.ಕೆ.ಮೋಹನ್‍ಕುಮಾರ್, ಉಪನ್ಯಾಸಕರಾದ ಡಿ.ಸುದರ್ಶನ, ಜಿ.ಎಸ್.ರಾಘವೇಂದ್ರ, ಎಂ.ಸ್ವಾತಿ, ಎಸ್.ಟಿ.ಪದ್ಮಶ್ರೀ, ಮತ್ತು ದೈ.ಶಿ ನಿರ್ದೇಶಕ ರುದ್ರಮುನಿ ಮುಂತಾದವರು ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.

 

ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ರಂಗ ನಿರ್ದೇಶಕ ಕೆ.ಪಿ.ಎಮ್. ಗಣೇಶಯ್ಯ ಇವರ ನಿರ್ದೇಶನದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಪಿಡುಗುಗಳ ಬಗ್ಗೆ ರಂಗ ನಾಟಕಗಳ ಪ್ರದರ್ಶನಗಳನ್ನು ನೀಡಲಿದ್ದಾರೆ. ವಿದ್ಯಾವಾರಿಧಿ ತ.ರಾ.ಸುಬ್ಬರಾವ್ (ತ.ರಾ.ಸು) ರವರ ಜನ್ಮದಿನದ ಅಂಗವಾಗಿ ಅವರ ಪರಿಚಯ ಲೇಖನವನ್ನು ಡಾ.ಕೆ ಮೋಹನ್‍ಕುಮಾರ್ ವಾಚಿಸುವರು. ರಂಗಸೌರಭ ಕಲಾವಿದರಿಂದ ರಂಗಗೀತೆ ಗಾಯನವಿರುತ್ತದೆ ಎಂದು ರಂಗಸೌರಭ ಕಲಾ ಸಂಘದ ನಿರ್ದೇಶಕ ಕೆ.ದಯಾನಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...