ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 21 :
ಬಿರು ಬೇಸಿಗೆಯ ಅತಿಯಾದ ಬಿಸಿಲಿನ ತಾಪಕ್ಕೆ ಸಂಜೆ 5-30 ರ ವರೆಗೆ ಕಛೇರಿಯಲ್ಲಿ ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಕಷ್ಟ ಆಗುತ್ತಿರುವ ಕಾರಣ ಸರ್ಕಾರಿ ಕಛೇರಿಗಳ ಕರ್ತವ್ಯದ ಅವಧಿಯನ್ನು ಬದಲಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಸಿಟಿ.ವೀರೇಶ್ ನೇತೃತ್ವದಲ್ಲಿ ಇಂದು ತಹಶಿಲ್ದಾರರ ರೇಹಾನ್ ಪಾಷ ಇವರಿಗೆ ಮನವಿ ನೀಡಿದರು.
ಮನವ ಪತ್ರ ನೀಡಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಸಿ.ಟಿ ವೀರೇಶ್, ಬೇಸಿಗೆಯ ಅತಿಯಾದ ಬಿಸಿಲಿನ
ತಾಪವಿರುವುದರಿಂದ ಚಳ್ಳಕೆರೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕರ್ತವ್ಯದ ಅವಧಿಯನ್ನು ಬೆಳಿಗ್ಗೆ 8-00 ರಿಂದ ಮಧ್ಯಾಹ್ನ 2-00 ಗಂಟೆವರೆಗೆ ನಿರ್ವಹಿಸುವುದು ಸೂಕ್ತ. ಬೇಸಿಗೆಯ ಸಮಯದಲ್ಲಿ ಬೆಳಿಗ್ಗೆ ಸರ್ಕಾರಿ ಕಚೇರಿಗಳನ್ನು ತೆರೆಯುವುದರಿಂದ ಗ್ರಾಮೀಣ ಭಾಗದ ರೈತರಿಗೆ,
ಸಾರ್ವಜನಿಕರಿಗೂ ಕಛೇರಿಯಲ್ಲಿ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ವೃದ್ಧರು, ಮಕ್ಕಳು, ಹಿರಿಯ ನಾಗರೀಕರಿಗೂ ಬೆಳಗಿನ ಸಮಯದಲ್ಲಿ ಸರ್ಕಾರಿ ಕಛೇರಿ ತೆರೆಯುವುದರಿಂದ ಅನುಕೂಲವಾಗುತ್ತದೆ. ಬೆಳಗಿನ ಅವಧಿಯಲ್ಲಿ ಸರ್ಕಾರಿ ಕಛೇರಿಗಳನ್ನು ತೆರೆಯುವುದರಿಂದ ಬಿರು ಬಿಸಿಲಿನ ತಾಪದಿಂದ ಉಂಟಾಗುವ ಅನಿರೀಕ್ಷಿತ ಅನಾರೋಗ್ಯಗಳನ್ನು
ತಡೆಗಟ್ಟಲು ಮುಂಜಾಗ್ರತಾ ವಹಿಸಲು ಸರ್ಕಾರಿ ನೌಕರರಿಗೆ ಅನುಕೂಲವಾಗುತ್ತದೆ. ಈ ಮೂಲಕ ಸರ್ಕಾರಿ ನೌಕರರ ಮನೋಸ್ಥೆರ್ಯ ಮತ್ತು ದೈನಂದಿನ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯವಾಗುತ್ತದೆ. ಆದ ಕಾರಣ ಕರ್ತವ್ಯದ ಅವಧಿಯನ್ನು ಬೆಳಿಗ್ಗೆ 8-00 ರಿಂದ ಮಧ್ಯಾಹ್ನ
2-00 ರವರೆಗೆ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ತಾಲೂಕು ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ವೆಂಕಟಲಕ್ಷ್ಮಿ, ಗೌರವಾಧ್ಯಕ್ಷರಾದ ಎಸ್.ಬಿ.ತಿಪ್ಪೇಸ್ವಾಮಿ ಖಜಾಂಚಿ ರಾಮಚಂದ್ರಪ್ಪ ಕಾರ್ಯದರ್ಶಿ ಬಸವರಾಜ್, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ, ಭೋರಯ್ಯ, ಇರ್ಫಾನ್, ಪದಾಧಿಕಾರಿಗಳಾದ ಮಲ್ಲೇಶ ತಿಮ್ಮಣ್ಣ, ಮಹೇಶ,ಪವನ್, ಸೇರಿದಂತೆ ಸರ್ಕಾರಿ ನೌಕರರು ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಇದ್ದರು.

















