Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಥೋ..ಥೋ..ಥೋ.. ನಾನ್ಯಾಕೆ ಜೆಡಿಎಸ್ ಹೋಗ್ಲಿ : ಜಮೀರ್ ರಿಯಾಕ್ಷನ್

---Advertisement---

ಬೆಂಗಳೂರು: ದಾವಣಗೆರೆ ಬೈ ಎಲೆಕ್ಷನ್ ನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೆ ಹೋದ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಜಮೀರ್ ಭೇಟಿ ಮಾಡಿದ್ದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ ಜೆಡಿಎಸ್ ಪಕ್ಷಕ್ಕೆ ಸೇರ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಆ ವಿಚಾರಕ್ಕೆ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

ಥೋ.. ಥೋ.. ಥೋ ನಾನ್ಯಾಕೆ ಜೆಡಿಎಸ್ ಹೋಗಲಿ. ಆ ಪಕ್ಷವನ್ನ ಬಿಟ್ಟು ಬಂದಿರೋದು ನಾನು. ಕಾಂಗ್ರೆಸ್ ಪಕ್ಷ ನಂಗೇನ್ ಕಡಿಮೆ ಮಾಡಿದೆ. ನಾನು ನಿರೀಕ್ಷೆಯನ್ನು ಇಟ್ಟಿಲ್ಲ. 2017 ರಲ್ಲಿ ಕಾಂಗ್ರೆಸ್ ಬಂದೆ ನಾನು. 2018 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ‌ ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ರೂ. ಅದರಲ್ಲಿ ನನ್ನ ಮಂತ್ರಿ ಮಾಡ್ತಾರೆ ಅಂತ ನಾನು ನಿರೀಕ್ಷೆಯನ್ನು ಇಟ್ಟಿರಲಿಲ್ಲ, ಯಾರತ್ರಾನೂ ನಾನೂ ಕೇಳಿರಲಿಲ್ಲ. ಆ ಟೈಮ್ ನಲ್ಲೆ ಪಕ್ಷ ನಂಗೆ ಮಂತ್ರಿ ಮಾಡಿ, ಪವರ್ ಫುಲ್ ಖಾತೆ ಕೊಟ್ಟಿದ್ರು. ಇದೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಮಂತ್ರಿ ಆಗಿದ್ದೆ. ಆದರೆ ಯಾವ ಖಾತೆ ಕೊಟ್ಟಿದ್ದರು, ಹಜ್ ಕೊಟ್ಟಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ನಾನು ನಿರೀಕ್ಷೆ ಇಟ್ಟಿರಲಿಲ್ಲ, ಆದರೂ ಐದು ಖಾತೆ ಕೊಟ್ಟಿದ್ದರು. 2023ರಲ್ಲಿ ಮತ್ತೆ ನಾಲ್ಕು ಖಾತೆ ಕೊಟ್ಟಿದೆ. ಏನ್ ಕಡಿಮೆ ಮಾಡಿದೆ ಕಾಂಗ್ರೆಸ್ ನಂಗೆ ಜನತಾ ದಳ ಹೋಗೋದಕ್ಕೆ. ನಂಗಿಂತ ಹಿರಿಯರಿದ್ದರು. ಅವರೆಲ್ಲರನ್ನು ಬಿಟ್ಟು ನನ್ನನ್ನ ಮಾಡಬೇಕಾದರೆ. ಅವರ ಜೊತೆಗೆ (ಹೆಚ್ಡಿಕೆ) ನಾನ್ಯಾಕ್ ರೀ ಮಾತನ್ನಾಡಲಿ. ಸುಮ್ಮನೆ ಎಲ್ಲವೂ ಊಹಾಪೋಹಾ ಅಷ್ಟೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...