ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20 : ದಂತವೈದ್ಯರಿಗೆ ಕೆಲಸದ ಸಮಯದಲ್ಲಿ ನೂರಾರು ರೀತಿಯ ಒತ್ತಡಗಳು ಉಂಟಾಗುತ್ತವೆ. ಆದ್ದರಿಂದ ಮಾನಸಿಕ ಒತ್ತಡ ನಿರ್ವಹಣೆ ಅಗತ್ಯ. ಇದರಿಂದ ಹೊರಬರಲು ಧ್ಯಾನ ಮೌನವೇ ಉತ್ತಮ. ಈ ಎಲ್ಲಾ ಮಾನಸಿಕ ಒತ್ತೆಗಳ ನಡುವೆ ಎಂದು
ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘದ (ರಿ.) ಕಾರ್ಯದರ್ಶಿ
ಡಾ. ಸುನಿಲ್ ಹೇಳಿದರು.

ನಗರದ ಜಗಳೂರು ಮಹಾಲಿಂಗಪ್ಪ ಟವರ್ಸ್ ನಲ್ಲಿ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘದ (ರಿ.) ವತಿಯಿಂದ ವಿಶೇಷ ಆರೋಗ್ಯ ಕಾರ್ಯಾಗಾರದಲ್ಲಿ ಮಾನಸಿಕ ಒತ್ತಡ ನಿವಾರಣೋಪಾಯಗಳು ಹಾಗೂ ಪ್ರಾಣೀಕ್ ಹೀಲಿಂಗ್ ಮಹತ್ವದ ಬಗ್ಗೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ದಂತ ವೈದ್ಯರಿಗೆ ಒಂದು ವಿಶೇಷ ಕಾರ್ಯಕ್ರಮ ನಿನ್ನೆ (ಏಪ್ರಿಲ್ . 19 ) ರಂದು ಒಂದು ದಿನದ ವಿಶೇಷ ಕಾರ್ಯಗಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಇದನ್ನು ಒಂದು ದಿನದ ಮಟ್ಟಿಗೆ ಸೀಮಿತಗೊಳಿಸದೆ ಪ್ರತಿನಿತ್ಯವೂ ಅಭ್ಯಾಸ ಮಾಡುವಂತೆ ಹೇಳಿ,ಇಂತಹ ಮತ್ತಷ್ಟು ಆರೋಗ್ಯ ಕುರಿತಾದ ಕಾರ್ಯಕ್ರಮಗಳು ದಂತ ವೈದ್ಯರಿಗೆ ಪೂರಕವಾಗಿದ್ದು ಮುಂದಿನ ತಿಂಗಳುಗಳಲ್ಲಿ ಎರಡನೇ ಹಾಗೂ ಮೂರನೇ ಹಂತದ ಧ್ಯಾನದ ತರಗತಿಗಳನ್ನು ದಂತ ವೈದ್ಯರಿಗೆ ನಡೆಸಲಾಗುತ್ತದೆ, ಜೊತೆಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವು ಅತ್ಯಂತ ಪ್ರಮುಖ ಎಂದು ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಕಲ್ಯಾಣನಗರದ ಡಾ. ವಿಮನ್ಯು ಅಕ್ಕೇರಾ ರವರು ಒಂದು ಗಂಟೆಯ ಕಾಲ ವಿಶೇಷ ಉಪನ್ಯಾಸ ಹಾಗೂ ಪ್ರಾಣಿಕ್ ಹೀಲಿಂಗ್, ಧ್ಯಾನ ಮೌನ …ದ ಬಗ್ಗೆ ವಿಶೇಷ ತರಗತಿ ನಡೆಸಿದರು. ಜೊತೆಗೆ ಒಂದು ಗಂಟೆ ಸಮಯ ವೈದ್ಯರಿಗೆ ಧ್ಯಾನವನ್ನು ಮಾಡಿಸಲಾಯಿತು. ಮೊದಲನೆಯ ಹಂತದಲ್ಲಿ ದೇಹದಲ್ಲಿ ಇರುವ ನೈಸರ್ಗಿಕ ಚಕ್ರಗಳು ಹಾಗೂ ನಮ್ಮ ಮೆದುಳಿನ ಮೇಲೆ ಅವುಗಳ ಪ್ರಭಾವದ ಬಗ್ಗೆ ತಿಳಿಸಲಾಯಿತು. ಮಾನಸಿಕ ನಿಮಿತತೆ ಹಾಗೂ ಮಾನಸಿಕ ಸಮತೋಲನದ ಬಗ್ಗೆ ಅರಿವು ಜಾಗೃತಿ ಮೂಡಿಸಿದರು.
ಸಂಜೆ ಐದಕ್ಕೆ ಪ್ರಾರಂಭವಾಗಿ 7ರ ತನಕ ವಿಶೇಷ ಕಾರ್ಯಾಗಾರ ಹಾಗೂ ಧ್ಯಾನ ಕಾರ್ಯಕ್ರಮ ನಡೆಯಿತು. ಚಿತ್ರದುರ್ಗ ಜಿಲ್ಲಾ ದಂತ ವೈದ್ಯರ ಸಂಘದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ 25 ದಂತವೈದ್ಯರು ಭಾಗವಹಿಸಿ ತರಬೇತಿ ಪಡೆದರು.ಬಈ ಸಂದರ್ಭದಲ್ಲಿ
ಸಂಘದ ಜಿಲ್ಲಾಧ್ಯಕ್ಷರಾದ ಡಾ.ರಾಮಲಿಂಗ ಶೆಟ್ಟಿ ಹಾಗೂ ಖಜಾಂಚಿಗಳಾದ ಡಾ. ಗೋವರ್ಧನ್ ರವರು ಉಪಸ್ಥಿತರಿದ್ದರು.

















