ಚಿಕ್ಕಮಗಳೂರು: ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಇದರಿಂದ ಶಾಸಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದನ್ನ ಜಮೀನು ವಿವಾದವೆಂದು ತನಿಖೆ ಮಾಡಿದ್ದರು. ಬಳಿಕ ಯೋಗೀಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಟ್ಟಿತ್ತು.
ಶಿಕ್ಷೆಯ ಪ್ರಮಾಣ ಪ್ರಕಟವಾದ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವತ್ತು ಆಡಿದ ಮಾತು ಸತ್ಯವಾಗಿದೆ. ಯೋಗೀಶ್ ಗೌಡ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ. ಅವರ ಕುಟುಂಬಕ್ಕೆ ದೊಡ್ಡ ನೋವು ತರುವಂತಹ ಸಂಗತಿ. ಅಪರಾಧ ಆಗಿತ್ತೋ ಆ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನೇ ಹೇಳಿದ್ದೆ ಎಂದಿದ್ದಾರೆ.

ಅತ್ತ ಯೋಗೀಶ್ ಗೌಡ ಕುಟುಂಬಕ್ಕೆ ಪರಿಹಾರವನ್ನು ನೀಡುವಂತೆ ಕೋರ್ಟ್ ತಿಳಿಸಿದೆ. ತೀರ್ಪಿನ ಅತ್ಯಂತ ಪ್ರಮುಖ ಹಾಗೂ ಮಾನವೀಯ ಅಂಶವೆಂದರೆ ಹತ್ಯೆಗೀಡಾದ ಯೋಗೀಶ್ ಗೌಡ ಅವರ ಕುಟುಂಬಕ್ಕೆ ಸಿಕ್ಕಿರುವ ಆರ್ಥಿಕ ನ್ಯಾಯ. ಯೋಗೀಶ್ ಗೌಡ ಅವರ ಮಕ್ಕಳಿಗೆ ಪರಿಹಾರವಾಗಿ 16 ಲಕ್ಷ ರೂಪಾಯಿಗಳನ್ನು ನೀಡುವಂತೆ ವಿನಯ್ ಕುಲಕರ್ಣಿ ಅವರಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದೆಮ ತಂದೆಯನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಮತ್ತು ವಿದ್ಯಾಭ್ಯಾಸದ ದೃಷ್ಟಿಯಿಂದ ಈ ಪರಿಹಾರದ ಮೊತ್ತವನ್ನು ಪಾವತಿಸಬೇಕೆಂದು ಶಾಸಕರಿಗೆ ಆದೇಶ ನೀಡಿದೆ.
2016 ರಲ್ಲಿ ನಡೆದ ಕೊ** ಕೇಸಲ್ಲಿ ಬರೋಬ್ಬರಿ ಹತ್ತು ವರ್ಷದಿಂದ ನಡೆಯುತ್ತಿದ್ದ ಈ ಕೇಸಲ್ಲಿ ಬಚಾವ್ ಆಗ್ತೀವಿ ಅಂತ ವಿನಯ್ ಕುಲಕರ್ಣಿ ಅವರು ಭಾವಿಸಿದ್ದರು ಎನಿಸುತ್ತದೆ. ಆದರೆ ಕೋರ್ಟ್ ಸರಿಯಾದ ತೀರ್ಪು ನೀಡಿದೆ ಎಂದೇ ಎಲ್ಲರೂ ಭಾವಿಸಿದ್ದಾರೆ.
















