Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಾದಗಿರಿಯಲ್ಲಿ ಬಸ್ – ಕಾರು ಅಪಘಾತದಿಂದ 6 ಜನ ಸಾವು : ಅಪಘಾತ ನಡೆದದ್ದು ಹೇಗೆ ಎಂದು ತಿಳಿಸಿದ ಎಸ್ಪಿ..!

---Advertisement---

ಯಾದಗಿರಿ: ಇಲ್ಲಿನ ಶಾಂತಪುರ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರದ ಕುಟುಂಬ ಈ ದುರಂತಕ್ಕೆ ಬಲಿಯಾಗಿದೆ. ಈ ಸಂಬಂಧ ಯಾದಗಿರಿಯ ಎಸ್ಪಿ ಮಾಹಿತಿ ನೀಡಿದ್ದಾರೆ.

ಇಂಪ್ಯಾಕ್ಟ್ ರಭಸಕ್ಕೆ ಮುಂದಕ್ಕೆ ಎಳೆದುಕೊಂಡು ಬಂದಿದೆ. ಆ ಕಾರಣದಿಂದಾ ಬೆಂಕಿ ಹತ್ತಿದೆ. ಆ ಕ್ಷಣದಲ್ಲಿ ಮುಂದೆ ಇರೋರು ಹೊರಗೆ ಬರೋದಕ್ಕೆ ಆಗಿಲ್ಲ. ಹಿಂದೆ ಇರುವಂತವರೆಲ್ಲ ಹೊರಗಡೆ ಓಡಿ ಬಂದಿದ್ದಾರೆ. 32 ಜನ ಬೆಂಗಳೂರಿನಿಂದ ಪ್ರಯಾಣ ಶುರು‌ ಮಾಡಿದ್ರು. ಅದರಲ್ಲಿ 20 ಜನ ಬಸ್ ನಲ್ಲಿ ಘಟನೆಯಾದಾಗ ಇದ್ರು. ಬ್ರೇಕ್ ಹಾಕಿದಾಗ ಸಣ್ಣ ಪುಟ್ಟ ಗಾಯಗಳಾಗಿವೆ. ಮಕ್ಕಳಿಬ್ಬರ ಪರಿಸ್ಥಿತಿ ಕೂಡ ಗಂಭೀರವಾಗಿದೆ. ಅದರಲ್ಲಿ ಒಬ್ಬರಂತು ಹೆಚ್ಚು ಗಂಭೀರವಾಗಿದ್ದಾರೆ. ಗುಲ್ಬರ್ಗಾಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗ್ತಾ ಇದೆ. ಅವರ ಕುಟುಂಬಸ್ಥರಿಂದ ದೂರು ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.

ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಆರ್ಎಲ್ ಬಸ್ ಬೆಂಗಳೂರು ಕಡೆಯಿಂದ ಗುಲ್ಬರ್ಗಾ ಹೋಗ್ತಾ ಇತ್ತು. ಕಿಯಾ ಕಾರು ವೇಣುಗೋಪಾಲ್ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರ್ತಾ ಇದ್ದರು. ಎಲ್ಲರೂ ಒಂದೇ ಕುಟುಂಬದವರಾಗಿದ್ದರು. ಕಾರಿನವರು ಓವರ್ ಟೇಕ್ ಮಾಡಿಕೊಂಡು ಬಂದಿರೋದಕ್ಕೆ ಈ ಘಟನೆ ನಡೆದಿರೋದು ಎಂದು ಸ್ಥಳೀಯರು ಕೂಡ ಹೇಳಿದ್ದಾರೆ. ಸದ್ಯ ಎಲ್ಲರನ್ನು ರಕ್ಷಿಸುವ ಪ್ರಯತ್ನ ನಡೆದಿದೆ. ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಒವರ್ ಟೇಕ್ ಮಾಡಿಕೊಂಡು ಬಂದಿರೋದೇ ಇದಕ್ಕೆ ಕಾರಣ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now